ಪ್ರಭುತ್ವವನ್ನೇ ಪ್ರಶ್ನಿಸುವಂತೆ ಸಿನಿಮಾಗಳು ಬೆಳೆಯಬೇಕು-ಐವಾನ್ ಡಿಸಿಲ್ವಾ

 


22 ನೇ ಸಿನಿಯಾನ ಶಿವಮೊಗ್ಗದಲ್ಲಿ ನಡೆಯುತ್ತಿದ್ದು, ಶಿವಮೊಗ್ಗದಲ್ಲಿ ಇದು 3 ನೆಯ ಸಿನಿಯಾನ ಎಂದು ರಾಜ್ಯ ಚಲನಚಿತ್ರ ಆಯ್ಕೆ ಸಮಿತಿಯ ಸದಸ್ಯ ಐವಾನ್ ಡಿಸಿಲ್ವ ತಿಳಿಸಿದರು. 


ಪತ್ರಿಕಾ ಭವನದಲ್ಲಿ ಮನುಜ ಮತ ಸಿನಿಯಾನ ಸಹಯೋಗ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಶಿವಮೊಗ್ಗ ಸಿನಿಹಬ್ಬದಲ್ಲಿ ಮಹಿಳಾ ಕಣ್ಣೋಟದ ವಿಷಯವಾಗಿ ಸಂವಾದ ನಡೆದಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಸಿನಿಮಾ ಪ್ರಬಲ ಮಾಧ್ಯಮವಾಗಿದೆ. ಪ್ರಭುತ್ವವನ್ನ ಪ್ರಶ್ನಿಸುವುದರಲ್ಲಿ ಪ್ರಬಲವಾಗಿ ಸಿನಿಮಾ ಬೆಳೆದಿದೆ ಎಂದರು.


ಸಿನಿಮಾ ಪ್ರಬಲ ಮಾಧ್ಯಮವಾಗಿದೆ. ಪ್ರಭುತ್ವವನ್ನ ಪ್ರಶ್ನಿಸುವಷ್ಟು ಪ್ರಬಲವಾಗಿದೆ. ಬಂಗಾರದ ಮನುಷ್ಯ ಸಿನಿಮಾ ನೋಡಿ ಎಷ್ಟೋ ಜನ ರೈತರಾಗಿದ್ದಾರೆ. ಈಗಿನ ಸಿನಿನಾಗಳು ಬಟ್ಟೆ, ಜೀವನ ಶೈಲಿ ನಕಲಾಗುತ್ತಿದೆ. ಹಾಗಾಗಿ ಯುವ ಜನತೆಯನ್ನ ಹಲವು ರೀತಿಯಲ್ಲಿ ತಲುಪತ್ತಿದೆ. ಸಿನಿಮಾ ವಲಯನೇ ಪುರುಷ ಪ್ರಧಾನ ವಾಗಿದೆ. ಮಹಿಳಾ ಕಣ್ಣೋಟ ದೃಷ್ಠಿಯಾಗಬೇಕಿದೆ. ಉತ್ತಮ ಸಿನಿಮಾಗಳು ಯುವಜನತೆಗೆ ಮಾದರಿಯಂತಾಗಲಿ ಎಂದರು. 


ಬೃಂದಾ ಹೆಗಡೆ ಮಾತನಾಡಿ ಸಿನಿಮಾ‌ನೋಡೋದಲ್ಲ ಓದುವುದು ಎಂದರು. ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಮಾತನಾಡಿ ಮಾದರಿ ಸಿನಿಮಾಗಳಾಗಬೇಕು ಎಂದರು.

Post a Comment

أحدث أقدم