ಬಿಜೆಪಿಯ ಒಳಜಗದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡದು-ಡಿಕೆಶಿ

 

ಬಿಜೆಪಿಯ ಒಳ ಜಗಳದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆಶಿ, ನಾವು ಬೇರೆ ಪಕ್ಷದ ಒಳ ಜಗಳ ಇಟ್ಟುಕೊಂಡು ರಾಜಕಾರಣ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 


ಬಿಜೆಪಿಯ ಒಳ ಜಗಳದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆಶಿ, ನಾವು ಬೇರೆ ಪಕ್ಷದ ಒಳ ಜಗಳ ಇಟ್ಟುಕೊಂಡು ರಾಜಕಾರಣ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಶಿವಮೊಗ್ಗ ಏರ್ ಪೋರ್ಟ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ರಾಜಕಾರಣ ಏನಿದ್ದರು ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಹೋಗುವುದಾಗಿದೆ. ಬಿಜೆಪಿ ಒಳ ಜಗಳವನ್ನ ಮುಚ್ಚಿಕೊಳ್ಳಲು ನಮ್ಮ ಸರ್ಕಾರದ ಮೇಲೆ ಪ್ರಯೋಗ ಮಾಡುತ್ತಿದ್ದಾರೆ ಎಂದು ದೂರಿದರು. 


ಅವರದು ಯಾವಾಗಲೂ ಇದ್ದದ್ದೇ, ಜನ ಅವರಿಗೆ ಕೆಲಸ ಕೊಟ್ಟಿದ್ದಾರೆ. ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವ ಕೆಲಸ ಕೊಟ್ಟಿದ್ದಾರೆ. ಅವರಿಗೆ ಅಧಿಕಾರ ಕೊಟ್ಟಾಗ ಆಡಳಿತ ನಡೆಸುವ ಅನುಭವ ಕೂಡ ಇರಲಿಲ್ಲ. ಕಾಂಗ್ರೆಸ್ ನಿಂದ ಹೋದವರಿಗೆ ಅಲ್ಲಿ ಯಾವ ಸ್ಥಾನಮಾನವೂ ಇಲ್ಲ. ಅಲ್ಲಿ ಅವರನ್ನು ಯೂಸ್ ಅಂಡ್ ಥ್ರೋ ಮಾಡಿದ್ದಾರೆ. ಇದು ಈಗ ಎಲ್ಲರಿಗೂ ಗೊತ್ತಾಗುತ್ತಿದೆ ಎಂದರು.


ಯೂಸ್ ಅಂಡ್ ಥ್ರೋ ಮಾಡಿದವರ ಹೆಸರು ನಮ್ಮ ಬಳಿ ಇದೆ ಆದರೆ ಅದನ್ನು ನಾವು ಹೇಳಲು ಹೋಗುವುದಿಲ್ಲ. ರಾಜಕೀಯವಾಗಿ ಒಬ್ಬೊಬ್ಬರು ಒಂದೊಂದು ಸಿದ್ಧಾಂತದ ಮೇಲೆ ಬೆಳೆದಿರುತ್ತಾರೆ. ಅಂತವರು ಬೇರೆ ಕಡೆಗೆ ಹೋದಾಗ ಅಲ್ಲಿನ ಪರಿಸ್ಥಿತಿ ಅವರಿಗೆ ಒಗ್ಗುವುದಿಲ್ಲ. ಅವರ ಪಾರ್ಟಿಯಲ್ಲಿ ಏನಾದರೂ ಮಾಡಿಕೊಳ್ಳಲಿ ನಮಗೆ ಅದರಲ್ಲಿ ಮಧ್ಯ ಪ್ರವೇಶಿಸಲು ಇಷ್ಟ ಇಲ್ಲ.‌ಅದರ ಲಾಭ ಪಡೆಯುವ ಉದ್ದೇಶವೂ ನಮಗಿಲ್ಲ ಎಂದರು.


ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ವಿಚಾರದ ಬಗ್ಗೆಯೂ ಮಾತನಾಡಿದ ಡಿಕೆಶಿ, ಅವರ ನೋವು ಹಾಗೂ ಸಮಸ್ಯೆಯನ್ನು ಅವರು ಹೇಳಿಕೊಳ್ಳುತ್ತಿದ್ದಾರೆ. ಈಗಾಗಲೇ ಸರ್ಕಾರ ಅವರ ಬೇಡಿಕೆಗೆ ಸ್ಪಂದಿಸಿದೆ. ಕೆಲವೊಂದು ಘೋಷಣೆಗಳನ್ನು ಕೂಡ ಮಾಡಿದೆ ಎಂದರು.


ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಯಾವುದೇ ಉತ್ತರ ನೀಡದೆ ಡಿಕೆಶಿ ಹೊರನಡೆದಿದ್ದಾರೆ. 


Post a Comment

أحدث أقدم