ಸಫಾರಿಯಲ್ಲಿದ್ದ ಅಂಜಿನಿ ಹುಲಿ ಸಾವು

 


ಶಿವಮೊಗ್ಗದ ಲಯನ್ ಸಫಾರಿಯಲ್ಲಿದ್ದ ಅಂಜನಿ (17) ವರ್ಷದ ಹುಲಿ ಸಾವನ್ನಪ್ಪಿದೆ. ಕಳೆದ ಮೂರು ತಿಂಗಳಿಂದ ಅಸ್ವಸ್ಥಗೊಂಡಿದ್ದ ಅಂಜನಿ ನಿನ್ನೆ ರಾತ್ರಿ ಸಾವನ್ನಪ್ಪಿದೆ. 


ಸಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಹುಲಿ ಅಂಗಾಂಗ ವೈಫಲ್ಯಕ್ಕೂ ತುತ್ತಾಗಿ ಸಾವಾಗಿರುತ್ತದೆ. 2022 ರಲ್ಲಿ ಮೈಸೂರಿನ ಕೂರ್ಗಹಳ್ಳಿಯಲ್ಲಿರುವ ಹುಲಿ ಸಂರಕ್ಷಣ, ಪುನರ್ ವಸತಿ ಹಾಗೂ ತಳಿ ಸಂರಕ್ಷಣಾ ಕೇಂದ್ರದಿಂದ ಶಿವಮೊಗ್ಗದ ಲಯನ್ ಸಫಾರಿಗೆ ಕರೆತರಲಾಗಿತ್ತು. 


ಕಳೆದ ಮೂರು ತಿಂಗಳಿಂದ ಅಸ್ವಸ್ಥಗೊಂಡಿದ್ದ ಅಂಜನಿ ನಿನ್ನೆ ರಾತ್ರಿ ಅಸುನೀಗಿದೆ. ಪಶುವೈದ್ಯರು, ಪಶು ವೈದ್ಯ ವಿಜ್ಞಾನ ಕಾಲೇಜಿನ ಪಶು ಅಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಇದರ ಸಾವಿನಿಂದ ಸಫಾರಿಯಲ್ಲಿನ ಹುಲಿಯ ಸಂಖ್ಯೆ 6 ರಿಂದ 5 ಕ್ಕೆ ಕುಸಿದಿದೆ. 


ಒಂದು ಗಂಡು ನಾಲ್ಕು ಹೆಣ್ಣು ಹುಲಿಗಳು ಸಧ್ಯದ ಹುಲಿ ಸಫಾರಿಯಲ್ಲಿ ಉಳಿದಿದೆ. 

Post a Comment

أحدث أقدم