ಕೃಷಿ ವಿಶ್ವ ವಿದ್ಯಾಲಯದ 9 ನೇ ವಾರ್ಷಿಕೋತ್ಸವ

 

ಕೃಷಿ ವಿಶ್ವವಿದ್ಯಾಲಯದಲ್ಲಿ 9 ನೇ ಘಟಿಕೋತ್ಸವ ಆಚರಿಸಲಿದೆ. ಜ.22 ರಂದು ಇರುವಕ್ಕಿಯ ವಿಶ್ವ ವಿದ್ಯಾಲಯದಲ್ಲಿ ಆರಂಭವಾಗಲಿದೆ. 


ಈ ಘಟಿಕೋತ್ಸವದಲ್ಲಿ ರಾಜ್ಯ ಪಾಲ ಥ್ಯಾವರ್ ಚಂದ್ ಗೆಹಲೋಟ್ ಭಾಗಿಯಾಗಲಿದ್ದಾರೆ. 994 ಪದವಿ ಪ್ರಧಾನ 793 ಸ್ನಾತಕ, 176 ಜನರಿಗೆ ಸ್ನಾತಕೋತ್ತರ ಪದವಿ ನೀಡಲಾಗುತ್ತಿದೆ. 17 ಜನ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಭಾಜನಾರಿದ್ದಾರೆ. ಇವರುಗಳು 31 ಚಿನ್ನದ ಪದಕಗಳನ್ನ ಪಡೆಯಿದ್ದಾರೆ. 


28 ಎಂಎಸ್ಸಿ ವಿದ್ಯಾರ್ಥಿಗಳಿಗೆ 33 ಚಿನ್ನದ ಪದಕಗಳು, 10 ಜನ ಪಿಹೆಚ್ ಡಿ ವಿದ್ಯಾರ್ಥಿಗಳು ಸೇರಿ 12 ಜನ ಚಿಬ್ಬದ ಪದಕ ಪಡೆಯಲಿದ್ದಾರೆ. ಸಾಗರ ಮತ್ತು ಹೊಸನಗರ ಭಾಗಗಳಲ್ಲಿ ಬೆಳೆಯುವ ಹಳದಿ ರುದ್ರಾಕ್ಷಿ, ಕೆಂಪು ರುದ್ರಾಕ್ಷಿ, ಕಿತ್ತಳೆ ಹಲಸು, ಕೆಂಪು ಹಲಸಿನ ನಾಲ್ಕು ತಳಿಗಳನ್ನ ಶಿವಮೊಗ್ಗದ ಕೃಷಿ ವಿವಿ ಸಸ್ಯತಳಿಗಳ ರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ ಅಡಿಯಲ್ಲಿ ನೋಂದಾಯಿಸಲಾಗಿದೆ. 


ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆ ಉದ್ದೇಶಕ್ಕಾಗಿ ಒಟ್ಟು 12 ಒಡಂಬಡಿಕೆಗೆ ಸಹಿಅಡಲಾಗಿದೆ. ಐದು ವಿದ್ಯಾರ್ಥಿಗಳು ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಿದ್ದಾರೆ. ಇದೇ ವೇಳೆ ಕಾಗೋಡು ತಿಮ್ಮಪ್ಪನವರಿಗೆ ವಿವಿಯಿಂದ ಡಾಕ್ಟರೇಟ್ ದವಿ ನೀಡಲಾಗಿದೆ. 


ಇರುವಕ್ಕಿ ಹಾಗೂ ಶಿವಮೊಗ್ಗ ಆವರಣದಲ್ಲಿ ಸೂಕ್ಷ್ಮ ಜೀವಶಾಸ್ತ್ರ ವಿಭಾಗ ಮತ್ತು ಮೂಡಿಗೆರೆ ಆವರಣದಲ್ಲಿ ಕೋಯ್ಲೋತ್ತರ ನಿರ್ವಹಣೆ ವಿಭಸಗದಲ್ಲಿ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳನ್ನ ಪ್ರಾರಂಭಿಸಲಾಗಿದೆ. 


ಡ್ರೋಣ್ ತರಬೇತಿಯನ್ನೂ ವಿವಿಯಲ್ಲಿ ನೀಡಲಾಗುತ್ತಿದೆ. ಇದರ ಮೂಲಕ ರಾಸಾಯನಿಕ ಪದಾರ್ಥಗಳ ಸಿಂಪಡಿಕೆಗೆ ಈ ಡ್ರೋಣ್ ತರಬೇತಿ ನೀಡಲಾಗುವುದು ಎಂದರು. 

Post a Comment

أحدث أقدم