ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ 44 ನೇ ರಾಜ್ಯ ಸಮ್ಮೇಳನದ ಭೂಮಿಪೂಜೆ ನಡೆದಿದೆ. ಎಬಿವಿಪಿಯ ಪ್ರಧಾನ ಕಾರ್ಯದರ್ಶಿ ಹೇಮಂತ್ ರಮೇಶ್ ಹೆಗಡೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಸಮ್ಮೇಳನವು ಜ.31 ರಿಂದ ಫೆ.2 ರವರೆಗೆ ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿದೆ. 1300 ಜನ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಭಾಗಿಯಾಗಲಿದ್ದಾರೆ. ರಾಜ್ಯದ ದಕ್ಷಿಣ 10 ವಿಭಾಗದಿಂದ ತಾಲೂಕು ಕೇಂದ್ರದಿಂದ ಆಗಮಿಸಲಿದ್ದಾರೆ.
ಬರುವ ವುದ್ಯಾರ್ಥಿಗಳಿಗೆ ಮತ್ತು ಪ್ರಾಧ್ಯಾಪಕರಿಗೆ 23 ಬಸ್ ಗಳ ಸಾರಿಗೆ ವ್ಯವಸ್ಥೆ, ನಗರದ 8 ಕಲ್ಯಾಣ ಮಂದಿರದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಗೋಷ್ಠಿ, ವಿಚಾರ ಮಂಥನಗಳು ಸಮ್ಮೇಳ ಎಂದು ತಿಳಿಸಿದರು.
ಎನ್ ಇಪಿ ಜಾರಿಗೆಗೆ ಹಿಂದೆ ಎಬಿವಿಪಿ ನಿರ್ಣಯಗಳಾಗಿವೆ. ಎಬಿವಿಪಿ ನಿರ್ಣಯದಿಂದ ಶಿಕ್ಷಣ ಕ್ಷೇತ್ರಕ್ಕೆ ಬಲತುಂಬಿಸಲಾಗಿದೆ. ವಿಚಾರವನ್ನಮೂಲೆ ಮೂಲೆಗಳಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ.
ಎಬಿವಿಪಿಯ ಶಿವಕುಮಾರ್, ಪ್ರ.ಕಾ.ಕೆಜೆ ಹೇಮಂತ್ ಸಂಚಾಲಕ ರಾಜೇಶ್ ಶಾಸ್ತ್ರಿ, ಭರತ್, ನೀಲಕಂಠ ಮೂರ್ತಿ, ಅಶೋಕ್ ಭಟ್, ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಪ್ರವೀಣ್, ಲಕ್ಷ್ಮೀ ಗೋಪಿನಾಥದ ಜನಿ ಬಿದರೆಹಳ್ಳಿ ಪವಿತ್ರ ಮುರುಳಿ, ಆರ್ ಎಸ್ ಎಸ್ ನ ಪಟ್ಟಾಭಿ, ಎಂಎಲ್ ಸಿ ಧನಂಜಯ್ ಸರ್ಜಿ, ಶಾಸಕ ಚೆನ್ನಬಸಪ್ಪ, ಸಙಸದ ರಾಘವೇಂದ್ರ ಮೊದಲಾದವರು ಉಪಸ್ಥಿತರಿದ್ದರು.
إرسال تعليق