ಕುವೆಂಪು ವಿಶ್ವ ವಿದ್ಯಾಲಯದ 34 ನೇ ವಾರ್ಷಿಕ ಘಟಿಕೋತ್ಸವ ನಡೆದಯಲಿದ್ದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿಯಾಗಲಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮೌಲ್ಯಮಾಪನ ಕುಲಸಚಿವ ಗೋಪಿನಾಥ್ ಮಾತನಾಡಿ, ಪಿಹೆಚ್ ಡಿ ಪಡೆಯಲು ಪುರು ಮತ್ತು ಮಹಿಳೆ ಸೇರಿ 204 ಅರ್ಹರಾಗಿದ್ದಾರೆ. 18,885 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ಒಟ್ಟು 146 ಸ್ವರ್ಣ ಪದಕಗಳನ್ನ ಪಡೆದಿರುವ ವಿದ್ಯಸರ್ಥಿಗಳು 13 ಪುರುಷರು, 71 ಮಹಿಳೆಯರು ಸೇರಿ 84 ಜನ ಪಡೆದಿದ್ದಾರೆ ಎಂದರು.
ಕನ್ನಡ ಎಂಎ ಅಲ್ಲಿ ವಸಙತ್ ಕುಮಾರ್ 10 ಸ್ವರ್ಣ ಪದಕ ಹಾಗೂ 01ನಗದು ಬಹುಮಾನ ಪಡೆದಿದ್ದಾರೆ. ಪರಿಸರ ವಿಜ್ಞಾನದ ಸಾನಿಯಾ ಫಿರ್ದೋಸ್ 6 ಸ್ವರ್ಣ ಪದಕ, ಸಮಾಜ ಶಾಸ್ತ್ರದ ರಕ್ಷಿತಾ ಎಸ್ ಎಸ್, ಎಂಬಿಎ ಜೈವಿಕ ತಂತ್ರಜ್ಞಾನದ ಶುಭಶ್ರೀ, ಆಚಾರ್ಯ ತುಳಿಸ ಕಾಲೇಜಿನ ಹರ್ಷಿತಾ ಜಿ ತಲಾ 5 ಸ್ವರ್ಣ, ಗಣಿತ ಶಾಸ್ತ್ರದಲ್ಲಿ 4 ಸ್ವರ್ಣ ಪದಕ ಹಾಗೂ 2 ನಗದು ಬಹುಮಾನ ಪಡೆದಿದ್ದಾರೆ.
ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರದ ಸಂಗೀತಾ ಬಿ.ಕೆ, ರಾಸಾಯನ ಶಾಸ್ತ್ರದಲ್ಲಿ ಅರ್ಪಿತಾ ಆರ್, ಸಸ್ಯಶಾಸ್ತ್ರದ ಧನುರ್ವಿ ಇವರು ತಲಾ 4 ಸ್ವರ್ಣ ಪದಕ, ಉರ್ದು ಎಂ ಎ ಪಡೆದ ಗುಲ್ ನಾಜ್ ಇವರು 3 ಸ್ವರ್ಣ ಪದಕ ಮತ್ತು 1 ನಗದು ಬಹುಮಾನ, ಇಂಗ್ಲಿಷ್ ಎಂಎ ಪದವಿ ಪಡೆದ ಯೋಷಿತಾ ಎಸ್ ಸೋನಾಲೆ, ರಾಜ್ಯಶಾಸ್ತ್ರದಲ್ಲಿ ಎಂ ಎ ಪಡೆದ ವನಿತಾ ಬಿ.ಅರ್, ಪತ್ರಿಕೋದ್ಯಮದಲ್ಲಿ ಎಂ ಎ ಪಡೆದ ಸಿಂಧು ಕೆಟಿ
ಪೂರ್ಣ ಪ್ರಜ್ಞಾ ಬಿ.ಆರ್, ಔದ್ಯೋಗಿಕ ರಸಾಯನ ಶಾಸ್ತ್ರ ಎಂಎಸ್ಸಿಯಲ್ಲಿ ರಂಜಿತಾ ಎಆರ್, ಪ್ರಾಣಿಶಾಸ್ತ್ರದ ಎಂಎಸ್ಸಿಯಲ್ಲಿ ಧನ್ಯಾಕೆ.ವೈ ಎಂಸಿಎಯಲ್ಲಿ ಅಶ್ವಥ್ ಬೈತನಾಲ್ ಇವರು ತಲಾ 3 ಪದಕಗಳನ್ನ ಪಡೆಯಲಿದ್ದಾರೆ ಎಂದರು.
ಹಲವಾರು ಜನರ ನಾಮಿನೇಷನ್ ಇತ್ತು. ಹಿರಿಯ ರಾಜಕಾರಣಿ ಮತ್ತು ಸಮಾಜ ಸೇವಕ ಕಾಗೋಡು ತಿಮ್ಮಪ್ಪ, ಡಿಫೆನ್ಸ್ ಇಂಜಿನಿಯರಿಂಗ್ ನಲ್ಲಿ ವಿಜ್ಞಾನಿ ಪೊ.ಸಿಎಸ್ ಉನ್ನೀಕೃಷ್ಣನ್, ಯೊಗಗುರು ನಾಗರಾಜ್ ಗಳಿಗೆ ಈ ಬಾರಿ ಡಾಕ್ಟರೇಟ್ ಪಡೆದಿದ್ದಾರೆ.
إرسال تعليق