ಒಂದು ವೇಳೆ KSRTC ಕಾರ್ಮಿಕರ ಬೇಡಿಕೆ ಈಡೇರಿಸದಿದ್ದರೆ ಹೊಸ ವರ್ಷದ ಮೊದಲನೇ ದಿನವೇ ರಾಜ್ಯ ರಸ್ತೆ ಸಾರಿಗೆಯ ಬಸ್ ಗಳು ರಸ್ತೆಗಿಳಿಯುತ್ತಿಲ್ಲ ಎಂದು ಕೆಎಸ್ಆರ್ ಟಿಸಿ ಜಂಟಿ ಸಮಿತಿಯ ರಾಜ್ಯ ಉಪಧ್ಯಕ್ಷ ಮಹದೇವ್ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಮಾ ಜಾರಿಗೆ ಮಾಡಿದರೂ ಕಾರ್ಮಿಕರು ಹೆದರುವುದಿಲ್ಲ. ಮುಷ್ಕರ ಅನಿರ್ದಿಷ್ಠಾವಧಿ ಕಾಲ ನಡೆಯಲಿದ್ದು ಕಾರ್ಮಿಕರಿಗೆ ಮತ್ತು ನಿವೃತ್ತರಿಗೆ ಉಪಧಾನ ಸೇರಿ 6750 ಕೋಟಿ ಬಾಕಿ ಹಣ ಸರ್ಕಾರ ಕೊಡಬೇಕು. ಸರ್ಕಾರಿ ರಸ್ತೆ ನಿಗಮದ ನಾಲ್ಕು ನಿಗಮಗಳಲ್ಲಿ 6 ಸಂಘಟನೆಗಳು ನಮ್ಮಬೇಡಿಕೆ ಬಗ್ಗೆ ಜಂಟಿ ಸಮಿತಿ ರಚಿಸಿ ಹೋರಾಟ ನಡೆಸುತ್ತಿದ್ದೇವೆ ಎಂದರು.
ಕೈಗಾರಿಕಾ ಒಪ್ಪಂದದಂತೆ 4 ವರ್ಷಗಳಿಂದ ಕಾರ್ಮಿಕರ ವೇತನ ಪರಿಷ್ಕರಣೆ, ಅರಿರ್ಸ್ ಬಂದಿಲ್ಲ. ಅವಧಿ ಮುಗಿದು12 ತಿಂಗಳಾದರೂ ಬಂದಿಲ್ಲ. ಸರ್ಕಾರ ಮಾತಕತೆಗೆ ಮುಂದಾಗುತ್ತಿಲ್ಲ. 1800 ಕೋಟಿ ನಾಲ್ಕು ನಿಮಗದವರ ಹಣ ಬರಬೇಕು ಎಂದು ತಿಳಿಸಿದರು.
ಬೇಡಿಕೆ ಒತ್ತಾಯಿಸಿ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟಿಸಲಾಗಿದೆ. ಸಮಾವೇಶ ಮಾಡುವ ಮೂಲಕ ಸರ್ಕಾರ ಮತ್ತು ಆಡಳಿತ ವರ್ಗಕ್ಕೆ ಒತ್ತಾಯಿಸಲಾಗಿದೆ. ಸಚಿವ ರಾಮಲಿಂಗ ರೆಡ್ಡಿಗಳು ಸಿಎಂ ಕರೆದು ಸಭೆ ನಡೆಸುವುದಾಗಿ ಭರವಸೆ ನೀಡಿದ್ದರೂ ಯವುದೇ ಕ್ರಮ ಆಗಿಲ್ಲ. ಚಳಿಗಾಲದ ಅಧಿವೇಶನದಲ್ಲಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಆಡಳಿತ ವರ್ಗಕ್ಕೆ ನೋಟಿಸ್ ನೀಡಲಾಗಿತ್ತು.
ಆದರೆ ಯಾವುದೇ ಪ್ರತಿಕ್ರಿಯೆ ಬರುತ್ತಿಕ್ಲ. ಸಾರ್ವಜನಿಕ ಉದ್ದಿಮೆ ಉಳಿಯಬೇಕು. ಕಾರ್ಮಿಕ ವರ್ಗ ಬದುಕಬೇಕಿದೆ. ಸರ್ಕಾರ ಮುಷ್ಕರಕ್ಕೆ ಹೋಗುವ ಮೊದಲು ಎಚ್ಚೆತ್ತು ಕೊಂಡು ಬಂದರೆ ಡಿ. 31 ರಂದು ಮಧ್ಯರಾತ್ರಿಯಿಂದ ಬಸ್ ರಸ್ತೆಗಿಳಿಯಲ್ಲ. 1.10 ಲಕ್ಷ ಕಾರ್ಮಿಕರಿದ್ದಾರೆ. 23 ಸಾವಿರ ಬಸ್ ಗಳಿವೆ ಕರ್ತವ್ಯಕ್ಕೆ ಗೈರು ಹಾಜರಾಗಿ ಪ್ರತಿಭಟಿಸಲಾಗುವುದು. 25% ಸಂಬಳ ಹೆಚ್ಚಿಸಬೇಕು ಹಾಗೂ ಇತರೆ ಬೇಡಿಕೆಗಳು ಈಡೇರಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಐಟಿಯುವಿನ ರಾಜು ಚಿನ್ನಸ್ವಾಮಿ, ಲೋಕನಾಥ್, ನಾಗರಾಜ್ ಯೋಗೀಂದ್ರ, ಗುರುರಾಜ್, ವಿರೇಶ್ ಮೊದಲಾದವರು ಉಪಸ್ಥಿತರಿದ್ದರು.
إرسال تعليق