ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಅಗಲಿಕೆ ಹಿನ್ನಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅವರ ಭಾವ ಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ಎರಡು ನಿಮಿಷ ಮೌನಾಚರಣೆ ಆಚರಿಸಲಾಯಿತು.
ಈವೇಳೆ ಮಾತನಾಡಿದ ಮಾಜಿ ಶಾಸಕ ಚಂದ್ರಶೇಖರಪ್ಪ, ಚಿನ್ನವನ್ನ ಅಡವಿಟ್ಟಿದ್ದ ಕಾಲದಲ್ಲಿ ದಿಟ್ಟನಾಗಿ ಎದುರಿಸಿ ದೇಶವನ್ನ ಆರ್ಥಿಕ ಸಂಕಷ್ಟದಿಂದ ಪಾರು ಮಾಡಿದ ಕೀರ್ತಿ ಮನಮೋಹನ್‌ರಿಗೆ ಸಲ್ಲುತ್ತದೆ. ಅಮೇರಿಕವನ್ನ ಆರ್ಥಿಕ ಸಂಕಷ್ಟದಿಂದ ಹೊರಗೆ ತರಲು ಯಜನೆಯನ್ನ ಸಿದ್ದಪಡಿಸಿದ್ದು ಮನಮೋಹನ್ ಸಿಂಗ್ ಎಂದರು.
ಪ್ರಧಾನಿ ಆಗುವ ಆಸೆ ಮನಮೋಹನರಿಗೆ ಇರಲಿಲ್ಲ. ಸೋನಿಯಾರವರ ಬಳಿ ಹೋದಾಗ ಅವರಿಗೆ ಪ್ರಧಾನಿ ಪಟ್ಟ ಕಟ್ಟಲಾಯಿತು. ಸರಳ ಜೀವಿಯಾಗಿದ್ದ ಮನಮೋಹನರನ್ನ ಒಮ್ಮೆ ಭೇಟಿ ಮಾಡಿದ್ದೆ. ಮುಗ್ಧ ಮನಸ್ಸಿನ ವ್ಯಕ್ತಿತ್ವ ಅವರದ್ದು ಎಂದು ತಿಳಿಸಿದರು.
ಮನಮೋಹನ ಎಂದರೆ ಸರಳ ಜೀವಿ. ಅವರನ್ನ ಕಳೆದುಕೊಂಡ ನಾವು ದುಖದ ಸ್ಥಿತಿಯಲ್ಲಿದ್ದೇವೆ. ಆದರೆ ಅವರ ಸೇವೆಯನ್ನ ನಿರಂತರವಾಗಿ ಭಾರತೀಯರು ನೆನಪಿಟ್ಟುಕೊಳ್ಳಬೇಕು ಎಂದರು.
إرسال تعليق