ಕಾಂಗ್ರೆಸ್ ನಿಂದ ದ್ವೇಷದ ರಾಜಕಾರಣ-ಸಂಸದ ಬಿ.ವೈ.ರಾಘವೇಂದ್ರ

 


ದ್ವೇಷದ ರಾಜಕಾರಣಕ್ಕೆ ರಾಜ್ಯದ ಕಾಂಗ್ರೆಸ್ ಕೈಹಾಕಿದೆ ಎಂದು ಸಂಸದ ರಾಘವೇಂದ್ರ ಅಭಿಪ್ರಾಯ ಪಟ್ಟಿದ್ದಾರೆ. 


ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಟಿ ರವಿಗೆ ಪೊಲೀಸರ ಮೂಲಕ ದೈಹಿಕವಾಗಿ ಹಲ್ಲೆ ಮಾಡಿಸಲಾಗಿದೆ. ಕೇಂದ್ರ ಸಚಿವ ಕುಮಾರ ಸ್ವಾಮಿ ವಿರುದ್ಧ ದ್ವೇಷ ಕಾರಲಾಗಿತ್ತು. ಪಂಚಮ ಸಾಲಿಯವರ ಮೇಲೆ ಲಾಠಿ ಚಾರ್ಜ್ ಮಾಡಿದ ಪೊಲೀಸ್ ಅಧಿಕಾರಿಯನ್ನ ಗುರುತಿಸಿ ಸನ್ಮಾನಿಸುವ ಮೂಲಕ ಆ ಸಮುದಾಯದ ಕೆಂಗಣ್ಣಿಗೆ ಕಾಂಗ್ರೆಸ್ ಗುರಿಯಾಗಿದೆ. 


ಈ ವೇಳೆ ಬೆಳಗಾವಿಯಲ್ಲಿ ಕಾಂಗ್ರೆಸ್ ಗಾಂಧೀಜಿ ಅವರು ಭೇಟಿ ನೀಡಿದ 100 ವರ್ಷಗಳ ಸಂಭ್ರಮಾಚರಣೆಗೆ ಅಣಿಯಾಗಿದೆ. ದ್ವೇಷ ಇಟ್ಟುಕೊಂಡು ಗಾಂಧೀಜಿಯ ಕಾರ್ಯಕ್ರಮಕ್ಕೆ ಮುಂದಾಗಿರುವುದು ಕಾಂಗ್ರೆಸ್ ನ ನೈತಿಕತೆಗೆ ದಕ್ಕೆ ತರಲಿದೆ ಎಂದರು. 


ಸಿಟಿ ರವಿಯವರ ಪ್ರಕರಣವನ್ನ ಸಿಐಡಿಗೆ ಒಪ್ಪಿಸಿರುವುದು ಸರಿಯಲ್ಲ. ಕಾಂಗ್ರೆಸ್ ಪೂರ್ವಗ್ರಹ ಇಟ್ಟುಕೊಂಡು ಏಜೆನ್ಸಿಗೆ ತನಿಖೆಗೆ ನೀಡಿದಂತೆ ಕಂಡು ಬರುತ್ತಿದೆ ಎಂದು ದೂರಿದರು.


Post a Comment

أحدث أقدم