ಜಿದ್ದಾಜಿದ್ದಿಯ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಗೆದ್ದವರ ಮತಗಳೆಷ್ಟು?

 


ನಿನ್ನೆ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಯಲ್ಲಿ ಅಭ್ಯರ್ಥಿಗಳ ಮತ ಎಣಿಕೆಯಲ್ಲಿ ಕೊಂಚ ವಿಳಂಬವಾದ ಕಾರಣ ತಡ ರಾತ್ರಿಯ ವರೆಗೂ ಮತ ಎಣಿಕೆಗಳು ನಡೆದ ಪರಿಣಾಮ ಅಧಿಕೃತ ಘೋಷಣೆಗಳು ಬಾಕಿಯಾಗಿದ್ದವು.


ತಡರಾತದರಿಯ ನಂತರ ಅಧಿಕೃತ ಘೋಷಣೆ ಮತ್ತು ಅವರು ಪಡೆದ ಮತಗಳ ಬಗ್ಗೆ ಅಧಿಕೃತವಾಗಿ ತಿಳಿದು ಬಂದಿದೆ. 15 ಜನ ಬ್ಯಾಂಜ್ ನ ನಿರ್ದೇಶಕರ ಸ್ಥಾನಕ್ಕೆ ಮತದಾನ ನಡೆದಿತ್ತು. ಇದರಲ್ಲಿ 32 ಜನ ಸ್ಪರ್ಧಿಗಳಿದ್ದರು.


ಭರ್ಜರಿ ಫ್ಲೆಕ್ಸ್, ಹಣ ಮತ್ತು ಇತರೆ ಆಮಿಷಗಳನ್ನ ಮತದಾರರ ಹಂಚಿರುವ ಆರೋಪ ಕೇಳಿ ಬಂದಿತ್ತು. ಎಸ್ಕೆ.ಮರಿಯಪ್ಪ ಮತ್ತು ಉಮಾಶಂಕರ್ ಉಪಾಧ್ಯ ಅವರ ತಂಡ ಗೆದ್ದರೆ ಸೇವೆಗೆ ಅಣಿ, ಸೋತರೆ ಮನೆಯಲ್ಲಿರುತ್ತೇವೆ ಎಂಬ ಹೇಳಿಕೆ ನೀಡಿ ಚುನಾವಣೆಗೆ ಧುಮಿಕಿದ್ದರು.


10 ವರ್ಷಗಳ ಕಾಲ ಮರಿಯಪ್ಪ ಮತ್ತು ಉಪಾಧ್ಯರ ತಂಡ ಬ್ಯಾಂಕ್ ನ ಆಡಳಿತ ನಡೆಸಿದ್ದರು. 2014 ರಲ್ಲಿ ಬ್ಯಾಂಜ್ ಆಡಳಿತಕ್ಕೆ ಬಂದ ಇವರ ತಂಡ 2019 ರಲ್ಲಿ ಅವಿರೋಧ ಆಯ್ಕೆ ಆಗಿತ್ತು. ಈ ವಿಷಯ ಬಹುಶಃ ಎಲ್ಲರ ಗಮನ ಸೆಳೆದ ಪರಿಣಾಮ ಚುನಾವಣೆಯ ರಂಗು ಎಂಎಲ್ ಎ ಮತ್ತು ಎಂಪಿ ಚುನಾವಣೆಯ ರೀತಿಯಲ್ಲಿ ನಡೆದು ಹೋಗಿತ್ತು.


ನಿನ್ನೆ ಬ್ಯಾಂಕ್ ಆಡಳಿತ ಮಂಡಳಿಯ ಅಧಿಕೃತ ಘೋಷಣೆ ಹೊರಗೆ ಬಿದ್ದಿದೆ. ಸಾಮಾನ್ಯ ಸ್ಥಾನದಿಂದ ಎಸ್ ಕೆ ಮರಿಯಪ್ಪರಿಗೆ 1948 ಮತಗಳು, 1625 ಎಂ.ರಾಕೇಶ್, 1584 ಮಹೇಶ್ ಎಸ್ ಎನ್, 1541 ಕೆ.ರಂಗನಾಥ್, ಉಮಾಶಂಕರ್ ಉಪಾಧ್ಯ 1396, ಎಸ್ ಪಿ ಶೇಷಾದ್ರಿ 1344, ಸಿ ಹೊನ್ಬಪ್ಪ 1326, ಘನಶಾಮ ಸಿ 1281, ಜಿ.ರಾಜು 1256 ಮತಗಳನ್ನ ಪಡೆದು ಗೆದ್ದಿದ್ದಾರೆ.


ಪರಿಶಿಷ್ಟ ಜಾತಿಯ ಸ್ಥಾನದಲ್ಲಿ ಸ್ಪರ್ಧಿಸಿದ್ದ ಶಿವರಾಜ್ ಮತ್ತು ಜಿ.ಚಂದ್ರಶೇಖರ್ ನಡುವಿನ ಜಿದ್ದಾಜಿದ್ದಿಯಲ್ಲಿ ಜಿ.ಚಂದ್ರಶೇಖರ್ 995 ಮತಗಳನ್ನ ಪಡೆದು ಶಿವರಾಜ್ ಗಿಂತ 4 ಮತಗಳ ಅಂತರದಿಂದ ಗೆದ್ದಿದ್ದರು. ಈ ಗೆಲುವಿನ ಬಗ್ಗೆ ಶಿವರಾಜ್ ಗೆ ಗೊಂದಲ ಮೂಡಿದ್ದರಿಂದ ಚುನಾವಣೆ ಅಧಿಕಾರಿಗಳಿಗೆ ತಿರಸ್ಕೃತ ಮತಗಳ ಪರಿಷ್ಕರಣೆಗೆ ಮನವಿ ಮಾಡಿದ್ದರು. ಇದು ಅಭ್ಯರ್ಥಿಗಳ ಅಧಿಕೃತ ಘೋಷಣೆಗೆ ವಿಳಂಬವಾಗಿತ್ತು. ಈಗ ಚಂದ್ರಶೇಖರ್ ಅವರನ್ನೇ ಗೆಲುವು ಎಂದು ಪರಿಗಣಿಸಲಾಗಿದೆ.


ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಸ್ಥಾನದಿಂದ 781 ಮತಪಡೆದ ಲೋಕೇಶ್ ಬಿ ಗೆದ್ದರೆ, ಪ್ರವರ್ಗ ಅ ಮೀಸಲು ಸ್ಥಾನದಿಂದ ಪ್ರಸನ್ನಕುಮಾರ್ ಎಸ್ ಡಿ ಗೆ 1277 ಮತಗಳು, ಪ್ರವರ್ಗ ಬಿ ಮೀಸಲಿನಿಂದ ಎಂಕೆ ಸುರೇಶ್ ಕುಮಾರ್(ಚಾಲುಕ್ಯ ಸೂರಿ), ಮಹಿಳಾ‌ ಮೀಸಲಿನಿಂದ 1527 ಮತಗಳನ್ನ ಪಡೆದ ಜಿ.ಹೆಚ್ ಪ್ರೇಮ ಮತ್ತು 1494 ಮತಗಳನ್ನ ಪಡೆದ ರೇಖಾ ಚಂದ್ರಶೇಖರ್ ಗೆದ್ದಿದ್ದಾರೆ. ಇದರಲ್ಲಿ 11 ಜನ ಹಳಬರು ಮತ್ತು 4 ಜನ ಹೊಸ ನಿರ್ದೇಶಕರ ಆಯ್ಕೆಯಾಗಿದೆ.

Post a Comment

أحدث أقدم