ಅಮೇರಿಕಾದ ಮಿಯಾಮಿಯಲ್ಲಿ ನಟ ಡಾ.ಶಿವರಾಜ್ ಕುಮಾರ್ ಅವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಡಾ. ಮುರುಗೇಶ್ ಮನೋಹರನ್ ತಿಳಿಸಿದ್ದಾರೆ.
ಮಿಯಾಮಿಯಲ್ಲಿ ಮೂತ್ರಪಿಂಡದಲ್ಲಿ ಕ್ಯಾನ್ಸರ್ ಕಾಣಿಸಿಕೊಂಡ ಪರಿಣಾಮ ನಿನ್ನೆ ಶಸ್ತ್ರ ಚಿಕಿತ್ಸೆ ನಡೆದಿದ್ದು, ಈ ಕುರಿತು ಡಾ.ಮುರುಗೇಶ್ ಮನೊಹರನ್, ಸಚಿವ ಮಧು ಬಂಗಾರಪ್ಪ ಮತ್ತು ಪತ್ನಿ ಗೀತಾ ಶಿವರಾಜ್ ಕುಮಾರ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.
ಕ್ಯಾನ್ಸರ್ ಆಗಿದ್ದ ಮೂತ್ರಪಿಂಡವನ್ನ ತೆಗೆದು ಹಾಕಲಾಗಿದೆ. ಶಿವಣ್ಣ ಅವರು ಮಾನಸಿಕ ಮತ್ತು ದೈಹಿಕವಾಗಿ ತುಂಬ ಗಟ್ಟಿಯಾಗಿದ್ದಾರೆ. ಅವರದೇ ಕರಳನ್ನ ಬಳಸಿಕೊಂಡು ಕೃತಕ ಮೂತ್ರಪಿಂಡವನ್ನ ರಚಿಸಿ ಮತ್ತೆ ಅಳವಡಿಸಲಾಗಿದೆ. ಶಸ್ತ್ರ ಚಿಕಿತ್ಸೆ ನಂತರವೂ ಮತ್ತು ಶಸ್ತ್ರ ಚಿಕಿತ್ಸೆಗೂ ಮೊದಲು ಶಿವಣ್ಣರಿಗೆ ಯಾವುದೇ ಆರೋಗ್ಯದಲ್ಲಿ ಏರು ಪೇರಾಗಿಲ್ಲ ಎಂದು ತಿಳಿಸಿದ್ದಾರೆ.
ಅವರ ಶಕ್ತಿ ಮತ್ತು ಸಂಕಲ್ಪದಿಂದ ಆದಷ್ಟು ಬೇಗ ಗುಣಮುಖರಾಗಿ ದೇವರ ಕೃಪೆಯಿಂದ ಹಾಗೂ ನಿಮ್ಮೆಲ್ಲರ ಪ್ರಾರ್ಥನೆಯಿಂದ ಕೆಲವೇ ದಿನಗಳಲ್ಲಿ ಸಾಮಾನ್ಯ ಜೀವನಕ್ಕೆ ಶಿವಣ್ಣ ಮರುಳಲಿದ್ದಾರೆ ಎಂಬ ನಂಬಿಕೆ ಇದೆ ಎಂದು ಡಾಕ್ಟರ್ ತಿಳಿಸಿದ್ದಾರೆ.
ಈ ವೇಳೆ ಪತ್ನಿ ಗೀತಾರವರು ಮಾತನಾಡಿ, ನಿಮ್ಮೆಲ್ಲರ ಪ್ರೀತಿ, ಪ್ರಾರ್ಥನೆ, ಪೂಜೆಯಿಂದಾಗಿ ಡಾ.ಶಿವರಾಜ್ ಕುಮಾರ್ ಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆದಿದೆ. ಅವರು ಆರೋಗ್ಯವಾಗಿ ಬೇಗ ಗುಣಮುಖರಾಗಿ ಬರುತ್ತಾರೆ. ಇನ್ನು ಮೂರು ನಾಲ್ಕು ದಿನಗಳಿಂದ ಶಿವಣ್ಣ ನಿಮ್ಮನ್ನ ಉದ್ದೇಶಿಸಿ ಮಾತನಾಡಲಿದ್ದಾರೆ.
ಸಚಿವ ಮಧು ಬಂಗಾರಪ್ಪನವರು ಮಾತನಾಡಿ, ಕೆಲ ಶಿಷ್ಠಾಚಾರ ಇರುವುದರಿಂದ ಅವರ ಫೊಟೊ ಹಾಕಲಾಗುತ್ತಿಲ್ಲ. ಶೀಘ್ರದಲ್ಲಿಯೇ ಅವರ ವಿಡಿಯೋ ಮತ್ತು ಫೊಟೊ ಹಾಕಲಾಗುವುದು. ಹಾಕಿಲ್ಲವೆಂಬ ಆತಂಕಕ್ಕೆ ಒಳಗಾಗಬೇಡಿ ಎಂದರು.
إرسال تعليق