ಕುವೆಂಪು ವಿವಿಯ ಭ್ರಷ್ಠಾಚಾರದ ವಿರುದ್ಧ ಎಬಿವಿಪಿ ಪ್ರತಿಭಟನೆ

 


ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ ಭ್ರಷ್ಟಾಚಾರ ಮತ್ತು ಭ್ರಷ್ಠಾಚಾರದಲ್ಲಿ ಭಾಗಿಯಾದ ಕುಲಸಚಿವರನ್ನ ಅಮಾನತ್ತುಗೊಳಿಸಿ ಸೂಕ್ತ ತನಿಖೆಗೊಳಿಸಬೇಕೆಂದು ಆಗ್ರಹಿಸಿ ವಿವಿಯಲ್ಲಿ ಎಬಿವಿಪಿ ಭರ್ಜರಿ ಪ್ರತಿಭಟನೆ ನಡೆಸಿದೆ.‌ 


ದೂರ ಶಿಕ್ಷಣ ಇಲಾಖೆಯಲ್ಲಿ ಪ್ರವೇಶಾತಿಗೆ ಮತ್ತು ಇನ್ನಿತರೆ ನಿರ್ವಹಣೆಗೆ ಎಲ್ ಎಂಎಸ್ ಸಾಫ್ಟ್ ವೇರ್ ಅಳವಡಿಕೆಯಲ್ಲಿ ಭ್ರಷ್ಠಾಚಾರ, ಅಂಕಪಟ್ಟಿ ಮುದ್ರಣದಲ್ಲಿ ಸರ್ಕಾರದ ನಿಯಮಗಳನ್ನ ಬದಿಗೊತ್ತಿ ಖಾಸಗಿಯವರಿಗೆ ಗುತ್ತಿಗೆ ನೀಡಿರುವ ಕುಲಪತಿ, ಕುಲಸಚಿವರು ಮತ್ತು ಪರೀಕ್ಷಾಂಗ ಕುಲಸಚಿವರ ವಿರುದ್ಧ ದೂರು ದಾಖಲಾಗಿದ್ದು ಸೂಕ್ತ ತನಿಖೆ ನಡೆಸಬೇಕು.


ಕುಲಸಚಿವ ಚಂದ್ರಕಾಂತ್ ಪ್ರಕರಣ, ಯುಯುಸಿಎಂಎಸ್ ತಂತ್ರಾಂಶವನ್ನ ಸರಿಯಾಗಿ ಬಳಸಿಕೊಳ್ಳದೆ ಅಧಿಕಾರಿಗಳ ದಿವ್ಯ‌ನಿರ್ಲಕ್ಷ ತೋರುತ್ತಿದ್ದಾರೆ. ವಿವಿಯ ವಿದ್ಯಾರ್ಥಿಗಳಿಗೆ ನೈಜ ಅಂಕ ಪಟ್ಟಿ ನೀಡದೆ ತೊಡಕು ಉಂಟಾಗಿ ದ್ದು ಇದನ್ನ ಬಗೆಹರಿದುವಲ್ಲಿ ವಿವಿ ವಿಫಲವಾಗಿದೆ. ವಿವಿಯಲ್ಲಿನ ಲ್ಯಾಬ್ ಗಳಲ್ಲಿನ ಉಪಕರಣಗಳ ಕೊರತೆ, ರಾಜ್ಯ ವಿವಿಗಳಲ್ಲಿ ಏಕ ರೂಪ ವೇಳಪಟ್ಟಿ ಪ್ರಕಟಿಸುವಂತೆ ಆಗ್ರಹಿಸಿ ಎಬಿವಿಪಿ ಪ್ರತಿಭಟಿಸಿದೆ. 


ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಅಧಿಕಾರಿಗಳ ಮಟ್ಟದಲ್ಲಿನ ಭ್ರಷ್ಟಾಚಾರ, ಅಸಮರ್ಪಕ ಆಡಳಿತ, ನೈಜ ಅಂಕಪಟ್ಟಿ ನೀಡದಿರುವಿಕೆಗಳ ನಡುವೆ ದಿನಾಂಕ 22-01-2025 ರಂದು ಘಟಿಕೋತ್ಸವ ದಿನವನ್ನು ನಿಶ್ಚಯಿಸಿಕೊಂಡಿರುತ್ತಾರೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ನೀಡದೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳದೆ, ಇದ್ದಲ್ಲಿ ಘಟಿಕೋತ್ಸವದ ದಿನದಂದೆ ತೀವ್ರ ಸ್ವರೂಪದ ಹೋರಾಟವನ್ನು ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ಸಂಘಟನೆ ನೀಡಿದೆ. 


ಪ್ರತಿಭಟನೆಯಲ್ಲಿ ಎಬಿವಿಪಿ ರಾಜ್ಯ ಕಾರ್ಯದರ್ಶಿ ಪ್ರವೀಣ್, ವಿಭಾಗ ಸಂಚಾಲಕ್ ಪುನಿತ್, ಜಿಲ್ಲಾ ಸಂಚಾಲಕ್ ಅಭಿಷೇಕ್ ಬಿ., ಮಹಾನಗರ ಕಾರ್ಯದರ್ಶಿ ಲೋಹಿತ್, ಸಹ ಕಾರ್ಯದರ್ಶಿ ರಂಜನಿ, ವರುಣ್ ರೋಹಿತ್ ಅಕ್ಷಯ್ ಚೇತನ್ ಆಕಾಶ್ ಅಂಜನ್ ಪನಗ ನಿರಂಜನ್ ಕಾರ್ತಿಕ್ ಯಶವಂತ್ ಸಂಜಯ್ ಅಮಿತ್ ಮೊದಲಾದವರು ಭಾಗಿಯಾಗಿದ್ದರು. 

Post a Comment

أحدث أقدم