ಜ.26 ರಿಂದ 31 ರವರೆಗೆ ನಡೆಯುವ ಮೈಸೂರು ಜಿಲ್ಲೆ ನಂಜನಗೂರಿನ ಸುತ್ತೂರಿನಲ್ಲಿ ಜಾತ್ರೆ ನಡೆಯಲಿದ್ದು, ಈ ನಿಮ್ಮಿತ್ತ ನಾಳೆ ಶಿವಮೊಗ್ಗಕ್ಕೆ ಆದಿ ಜಗದ್ಗುರು ಶಿವರಾತ್ರೇಶ್ವರ ಶಿವಯೋಗಿಗಳ ಉತ್ಸವ ಮೂರ್ತಿಯ ರಥ ಆಗಮಿಸಲಿದೆ. ಮಲವಗೊಪ್ಪದ ಚೆನ್ನಬಸವೇಶ್ವರ ದೇವಸ್ಥಾನದಲ್ಲಿ ರಥವನ್ನ ಸ್ವಾಗತಿಸಿ ಅದ್ದೂರಿ ಮೆರೆವಣಿಗೆ ನಡೆಸಲಾಗುತ್ತಿದೆ.
ದನಗಳ ಜಾತ್ರೆ, ಪಲ್ಲಕ್ಕಿ ಉತ್ಸವ, ರೈತರಿಗಾಗಿ ಕೃಷಿ ಬ್ರಹ್ಮಂಡ ಭಜನಾಮೇಳ, ಸಾಮೂಹಿಕ ವಿವಾಹ, ದೋಣಿ ವಿಹಾರ, ಚಿತ್ರಕಲೆ, ರಂಗೋಲಿ, ಗಾಳಿಪಟ,ಕುಸ್ತಿ, ಸೋಬಾನೆ ಪದ ಛಾಯಾಚಿತ್ರ ಸ್ಪರ್ಧೆ ಮೊದಲಾದವುಗಳು ನಡೆಯಲಿದೆ. ಶಿವಮೊಗ್ಗಕ್ಕೆ ಆಗಮಿಸುವ ರಥವು ಎರಡು ದಿನ ಶಿವಮೊಗ್ಗದಲ್ಲಿ ತಂಗಲಿದ್ದು ಮುಂದೆ ಚಿಕ್ಕಮಗಳೂರಿಗೆ ಸಾಗಲಿದೆ.
ಜಾತ್ರದಲ್ಲಿ ದೇವರಿಗೆ ಪೂಜಾ ಕೈಂಕರ್ಯಗಳನ್ನ ಸಲ್ಲಿಸಲು ಭಕ್ತರು ಹೆಚ್ಚಿನ ಮಾಹಿತಿಯನ್ನ ಮೈಸೂರಿನ ಸುತ್ತೂರು ಜಾತ್ರ ಮಹೋತ್ಸವದಿಂದ ಪಡೆಯಬಹುದಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ, ಮಾಜಿ ಶಾಸಕ ಹೆಚ್ ಎಂ ಚಂದ್ರಶೇಖರ್ ಮಾತನಾಡಿ, 1918 ರಲ್ಲಿ ಸುತ್ತೂರು ಜಾತ್ರೆಯು ಶಿವಮೊಗ್ಗದಲ್ಲಿ ನಡೆದಿತ್ತು. ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣವನ್ನ ಸುತ್ತೂರು ಮಠನೀಡುತ್ತಾ ಬಂದಿದೆ. ಸುತ್ತೂರು ಶ್ರೀಗಳು ಶಿವಮೊಗ್ಗ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರವನ್ನ ಆರಂಭಿಸಬೇಕು. ಬಡಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಬೇಕೆಂದು ಆಗ್ರಹಿಸಿದರು
ಸ್ವಾಮಿಜಿಗಳು ಭೂಮಿಗಾಗಿ ಹುಡುಕುತ್ತಿರುವುದಾಗಿ ಹೇಳಿದ್ದಾರೆ. ಸರ್ಕಾರಕ್ಕೆ ಇವರು ಅರ್ಜಿ ಹಾಕಿದರೆ ಇವರಿಗೆ ಸರ್ಕಾರ ಪ್ರಥಮ ಪ್ರಶಸ್ತ್ಯ ನೀಡುತ್ತದೆ ಎಂದ ಅವರು, ಜಾತ್ರೆಗೆ ದೀಪ ಬಂತು, ರಥ ಬಂತು ಸಂಭ್ರಮಾಚರಣೆ ನಡೆಸಲು ಮೀಸಲಾಗದೆ, ಶಿಕ್ಷಣ ಕ್ಷೇತ್ರಕ್ಕೆ ಆಗಮಿಸುವ ಮೂಲಕ ಶಿವಮೊಗ್ಗದ ಬಡವರ ಆಶಾಕಿರಣವಾಗಿ ಬೆಳೆಯಬೇಕೆಂದರು.
إرسال تعليق