ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಕರನ್ನೇ ಆಯ್ಕೆ ಮಾಡುವಂತೆ ಡಾ.ಜಿ.ಆರ್.ಹೆಬ್ಬೂರು ಆಗ್ರಹ

ಶಿಕ್ಷಕರ ಕ್ಷೇತ್ರವನ್ನ ಶಿಕ್ಷಕರಿಗೆ ಬಿಟ್ಟುಕೊಡುವಂತೆ ಕರ್ನಾಟಕ ರಾಜ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ವ್ಯಾಪ್ತಿಯ ಶಿಕ್ಷಕರ ಸಂಘ ಆಗ್ರಹಿಸಿದೆ. 


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ನಿವೃತ್ತ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಜಿ.ಆರ್.ಹೆಬ್ಬೂರು ಅವರು, ಶಿಕ್ಷಕರ ಸಮಸ್ಯೆ ಬಗೆಹರಿಸಲು ಶಿಕ್ಷಕರೇ ಆ ಸ್ಥಾನಕ್ಕೆ ಆಯ್ಕೆಯಾಗಿ ಬರಬೇಕು. ರಾಜ್ಯದಲ್ಲಿ 75 ಕ್ಷೇತ್ರದಲ್ಲಿ 7 ಕ್ಷೇತ್ರಗಳು ಶಿಕ್ಷಕರಿಗೆ ಮೀಸಲಿದ್ದರೂ ಶಿಕ್ಷಕರು ಮಾತ್ರ ಆಯ್ಜೆಯಾಗುತ್ತಿಲ್ಲ. ಆ ಸ್ಥಾನಕ್ಕೆ ಬೇರೆಯವರೆ ಹೆಚ್ಚಾಗಿ ಆಯ್ಕೆಯಾಗುತ್ತಿರುವುದಾಗಿ ದೂರಿದರು.


ಸಂವಿಧಾನದಲ್ಲಿ ಶಿಕ್ಷಕರ ಕ್ಷೇತ್ರಕ್ಕೆ ನೀಡಿರುವ ಶಿಕ್ಷಕರ ವಿಧಾನ ಪರಿಷತ್ ಸದಸ್ಯತ್ವದ ಮಹತ್ವವನ್ನ ಶಿಕ್ಷಕರಿಗೆ ಮನವರಿಕೆ ಮಾಡುವುದುಕ್ಷೇತ್ರವನ್ನ ಮತ್ತು ಸಮಾಜವನ್ನ ಸರಿಯಾದ ಮಾರ್ಗದಲ್ಲಿ ತೆಗೆದುಕೊಂಡು ಹೋಗುವಂತೆ ಮಾಡುವುದು. ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳನ್ನ ರಾಷ್ಟ್ರೀಕರಣ ಮಾಡುವುದು. 


ಅನುದಾನಿತ ಶಾಲಾ-ಕಾಲೇಜಿನ ಪಿಂಚಣಿ ರಹಿತ ಶಿಕ್ಷಕ ಸಿಬ್ವಂದಿಗೆ ಪಿಂಚಣಿ ಕೊಡಿಸುವುದು. ಸರ್ಕಾರ ನಿಗದಿಪಡಿಸಿದ ಕನಿಷ್ಟ ವೇತನ, ಪಿಎಫ್ ಗ್ರ್ಯಾಜ್ಯುಟಿ ಸಿಗುವಂತೆ ಮಾಡುವುದು. ಪಿಂಚಣಿ ಸಿಗದಿದ್ದರೆ ಶಿಕ್ಷಕರ ಕಲ್ಯಾಣ ನಿಧಿ ಆರಂಭಿಸಿ ಅದರ ಮುಕಾಂತರ ಧನ ಸಹಾಯ ಮಾಡುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಸಲು ಆಗ್ರಹಿಸಿದರು. 


ಶಿಕ್ಷಕರ ಕ್ಷೇತ್ರದ ಸನಸ್ಯೆಗಳನ್ನ‌ಬಗರಹರಿಸಲು ಸಂಘವನ್ನ ಸ್ಥಾಪಿಸಲಾಗಿದ್ದು, ರಾಜ್ಯ ಪದಾಧಿಕಾರಿಗಳನ್ನ,ಜಿಲ್ಲಾ ಪದಾಧಿಕಾರಿಗಳ ಆಯ್ಕೆ, ತಾಲೂಕು ಪದಾಧಿಕಾರಿಗಳ ರಚಬೆ ಮಾಡಲಾಗಿದೆ ಎಂದರು. 

Post a Comment

أحدث أقدم