ಶಿವಮೊಗ್ಗದ ಸಿಟಿ ಕೋಆಪರೇಟಿವ್ ಸೊಸೈಟಿಯ ಚುನಾವಣೆಗೆ ಕಾವು ಹೆಚ್ಚಾಗುತ್ತಿದ್ದು 15 ಜನ ನಿರ್ದೇಶಕ ಸ್ಥಾನಕ್ಕೆ 30 ಜನ ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ ಚುನಾವಣೆಗೆ ಆಮಿಷಗಳು ಕಂಡುಬರುತ್ತಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್ಕೆ ಮರಿಯಪ್ಪ, ಚುನಾವಣೆ ನಡೆಯುತ್ತಿರುವುದು ಬೇಸರ ತಂದಿದೆ. ಶೇರುದಾರರ ಹಿತದೃಷ್ಠಿ ಕಾಪಾಡುವಂತಾಗಿದೆ. ಎಫ್ಡಿ ಇಟ್ಟವರ ಹಿತನೂ ಕಾಪಾಡಬೇಕು. ಆಟೋ ಗಳಿಗೆ ಲೋನ್ ಕೊಡ್ತಾ ಇಲ್ಲ ಸದಸ್ಯರು ಒಪ್ಪಿದರೆ ಮಾತ್ರ ಕಾರು ಲೋನ್ ಕೊಡಲಾಗುವುದು ಎಂದರು.
500 ಕೋಟಿ ರೂ. ವ್ಯವಹಾರ ಹೊಂದಿರುವ ಬ್ಯಾಂಕ್ ಹೊಂದಿದೆ ಎನ್ಪಿ ಕಡಿಮೆ ಮಾಡಲು ಪ್ರಯತ್ನ ನಡೆಯುತ್ತಿದೆ. ಏನೋ ಇದೆ ಎಂದು ಈ ಬಾರಿ ಯುವಕರು ಮುನ್ನಗ್ಗುತ್ತಿದ್ದಾರೆ. ಆದರೆ ಸಹಕಾರ ಬ್ಯಾಂಕ್ ಸಿಟಿಕೋಆಪರೇಟಿವ್ ರಿಸರ್ವ ಬ್ಯಾಂಕ್ ಅಂಡರ್ ಇದೆ. ಯಾವುದೇ ಏರಾಪೇರಿಗಳು ನಡೆಯೊಲ್ಲ ಎಂದರು.
ಕೆಲ ವಾಟ್ಸಪ್ ಗಳಲ್ಲಿ ಕೆಲ ಸಮಾಜದ ವ್ಯಕ್ತಿಗಳನ್ನ ಗೆಲ್ಲಿಸಿ ಎಂಬ ಮೆಸೆಜ್ ಗಳು ಹರಿದಾಡುತ್ತಿದೆ. ಆದರೆ ನಮ್ಮ ಟೀಮ್ ಸಿಟಿ ಕೋಆಪರೇಟಿವ್ ಉಮಾಶಂಕರ್ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಗೆಲ್ಲಿಸಿದರೆ ಸ್ವಾಗತ. ಇಲ್ಲ ಅಂದರೆ ಮನೆಯಲ್ಲಿರುತ್ತೇವೆ. 480 ಮತದಾರರಿದ್ದಾರೆ ಎಂದರು.
إرسال تعليق