ಚಲುವಾದಿ ನಾರಾಯಣ ರಾಜೀನಾಮೆಗೆ ಆಗ್ರಹ

 


ಬಿಜೆಪಿಯ ವಿಧಾನ ಪರಿಷತ್ ನ ವಿಪಕ್ಷ‌ನಾಯಕ ಚಲುವಾದಿ ನಾರಾಯಣ ಸ್ವಾಮಿ ವಿರುದ್ಧ ಜಿಲ್ಲಾ ಕೊರಚ ಮಹಾಸಂಘ ಪ್ರತಿಭಟನೆ ನಡೆಸಿದೆ. ಕೊರಚರನ್ನ ಒಳಮೀಸಲಾತಿಯಿಂದ ಹೊರಗಿಡುವುದಾಗಿ ಹೇಳಿದ್ದ ಪರಿಷತ್ ನಾಯಕನ ವಿರುದ್ಧ ಸಮುದಾಯ ಡಿಸಿ ಕಚೇರಿ ಎದುರು ಪ್ರತಿಭಟ ನಡೆಸಿದೆ. 


ಈದ್ಗಾ ಮೈದಾನದಿಂದ ತಮಟೆ ಮೆರವಣಿಗೆಯಲ್ಲಿ ಹೊರಟ ಮಹಾಸಂಘ ಶಿವಮೂರ್ತಿ ವೃತ್ತದ ಮೂಲಕ ಡಿಸಿ ಕಚೇರಿಗೆ ಬಂದು ತಲುಪಿತು. ಕಚೇರಿ ಬಳಿ ಪ್ರತಿಭಟನೆ ನಡೆಸಿದ ಸಂಘಟನೆ ಚಲುವಾದಿ ನಾರಾಯಣ ಸ್ವಾಮಿಯ ರಾಜೀನಾಮೆಗೆ ಆಗ್ರಹಿಸಿದೆ. 


ಈ ವೇಳೆ ಮಾತನಾಡಿದ ಸಮುದಾಯದ ಮುಖಂಡ ಆದರ್ಶ ಯಲ್ಲಪ್ಪ, 101 ಒಳಜಾತಿಯಗಳು ಪರಿಶಿಷ್ಡ ಜಾತಿ ಮತ್ತು ಪಂಗಡದ ಜಾತಿಗಳಿದ್ದು, 51 ಸಮುದಾಯಗಳನ್ನ ಸೂಕ್ಷ್ಮ ಅತಿಸೂಕ್ಷ್ಮ ಸಮುದಾಯವೆಂದು ವಿಂಗಡಿಸಲಾಯಿತು ಬಸವರಾಜ ಬೊಮ್ಮಾಯಿ ಸರ್ಕಾರ 2022 ರಲ್ಲಿ ಅಲೆಮಾರಿಗಳ ನಿಗಮ ಮಂಡಳಿ ರಚಿಸಲಾಯಿತು. 


ಬೆಳಗಾವಿಯಲ್ಲಿ ಬಿಜೆಪಿ ಪ್ರೇರಿತ ಸಭೆಯಲ್ಲಿ ಚಲವಾದಿ ನಾರಾಯಣ ಸ್ವಾಮಿ ಕೊರಚ ಮತ್ತು ಕೊರಮ ಸಮಯದಾಯವನ್ನ ಒಳ ಮೀಸಲಾತಿಯಿಂದ ಕೈಬಿಡಲಾಗುವುದು ಎಂದು ಹೇಳಿದ್ದಾರೆ. ಸುಳ್ಳು ಹೇಳೋದು ನಡೆಯಲ್ಲ. ವೋಟ್ ಬ್ಯಾಂಕ್ ರಾಝಾರಣ ನಡೆಸಿದರೆ ಜಾಸ್ತಿದಿನ ಉಳಿಯಲ್ಲ ಎಂದು ಎಚ್ಚರಿಸಿದರು. 


ಕೊರಚ ಸಮುದಾಯದಲ್ಲಿ ರಾಜಕೀಯ ನಾಯಕರಿ.ಲ್ಲ ಎಂಎಲ್ ಎ, ಎಂಎಲ್ ಸಿಗಳಿಲ್ಲ. ಇವರ ಮೇಲೆ ಸಾಮಾಜಿಕ ಕಳಂಕವಿದೆ. ಕಳಂಕಿತ ಬುಡಕಟ್ಟಿನವರನ್ನ ವಿಪಕ್ಷನಾಯಕರಾದ ನಾರಾಯಣ ಸ್ವಾಮಿ ಗಂಬೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಕ್ಷಮೆ ಕೇಳಬೇಕು ಮತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಲ್ಲವಾದಲ್ಲಿ ಕೊರಚ ಜನಾಂಗದಿಂದ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.. 

Post a Comment

أحدث أقدم