ಮಹಾವೀರ ವೃತ್ತದಲ್ಲಿ ಅಮಿತ್ ಶಾ ಪ್ರತಿಕೃತಿ ದಹನ

 


ಮಹಡಿ ಮೇಲೆ ಮಹಡಿ ಕಟ್ಟಿ ಅಮಿತ್ ಶಾ ಚಟ್ಟಕಟ್ಟು, ಅಮಿತ್ ಶಾ ಒಂದು ಕೆಲ್ಸ ಮಾಡು, ಸೀರೆ ಉಟ್ಟುಕೊಂಡು ಡ್ಯಾನ್ಸ್ ಮಾಡು ಎಂಬ ಘೋಷಣೆಯೊಂದಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಕೃಷ್ಣಪ್ಪ ಸ್ಥಾಪಿತ ಜಿಲ್ಲಾ ಸಮಿತಿ ಅಮಿತ್ ಶಾ ಪ್ರತಿಕೃತಿಗೆ ಚಪ್ಪಲಿಯಲ್ಲಿ ಹೊಡೆದು, ದಹಿಸಲಾಯಿತು. 


ಈದ್ಗಾ ಮೈದಾನದಿಂದ ಆರ್ ಟಿ ಒ ಕಚೇರಿ ತಿರುವಿನ ಮೂಲಕ ಡಿಸಿ ಕಚೇರಿ ಎದುರಿನ ರಸ್ತೆ ಹಾದು ಮಹಾವೀರ ವೃತ್ತ ತಲುಪಿದ ಮೆರವಣಿಗೆಕಾರರು ಸರ್ಕಲ್ ನಲ್ಲಿ ಅಮಿತ್ ಶಾ ಪ್ರತಿಕೃತಿಗೆ ಕ್ಯಾಕರಿಸಿ ಉಗಿದು ಚಪ್ಪಲಿಯಲ್ಲಿ ಹೊಡೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪ್ರತಿಕೃತಿ ದಹಿಸಲಾಯಿತು. 


ಸಂಸತ್ ನಲ್ಲಿ ಡಿ.18 ರಂದು ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಎಂದು ಹೇಳುವುದು ಫ್ಯಾಶನ್ ಆಗಿದೆ. ಬದಲಿಗೆ ದೇವರ ಸ್ಮರಣೆ ಮಾಡಿದ್ದರೆ ಸ್ವರ್ಗನಾದರೂ ಪ್ರಾಪ್ತಿ ಆಗುತ್ತಿತ್ತು ಎಂದು ಅಂಬೇಡ್ಕರ್ ಬಗ್ಗೆ ಅವಹೇಳನ ಕಾರಿ ಮಾತನಾಡಿದ್ದಾರೆ. ಅವರ ರಾಜೀನಾಮೆ ಪಡೆದು ಸಂಸತ್ ಸದಸ್ಯತ್ವವನ್ನ ವಜಾ ಮಾಡುವಂತೆ ಸಂಘಟನೆ ಆಗ್ರಹಿಸಿದೆ.  


ನಂತರ ಡಿಸಿ ಕಚೇರಿಗೆ ತಲುಪಿದ ಸಂಘಟನೆ ಡಿಸಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಚಿನ್ನಯ್ಯ, ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ರಾಜ್ಯ ವಿಭಾಗೀಯ ಸಂಚಾಲಕ ಗುರುರಾಜ್, ಜಿಲ್ಲಾ ಸಂಚಾಲಕ ಕೆ.ಎ. ರಾಜ್ ಕುಮಾರ್, ಪ್ರಕಾಶ್ ಲಿಗಾಡಿ, ಈಶ್ವರಪ್ಪ, ಶಿವಮೊಗ್ಗ ತಾಲೂಕು ಸಂಚಾಲಕ ಬಸವರಾಜ ಬೂದಿಗೆರೆ ಮೊದಲಾದವರು ಭಾಗಿಯಾಗಿದ್ದರು.

Post a Comment

أحدث أقدم