ಆಗುಂಬೆ ಘಾಟಿಯಲ್ಲಿ ವಾಹನಗಳು ಕೆಟ್ಟ ನಿಂತ ಪರಿಣಾಮ ಟ್ರಾಫಿಕ್ ಜ್ಯಾಮ್ ಆಗಿದೆ. ಆಗುಂಬೆ ಘಾಟಿಯಲ್ಲಿ ಎರಡು ಮೂರು ವಾಹನಗಳು ಕೆಟ್ಟು ನಿಂತ ಪರಿಣಾಮ ವಾಹನಗಳ ಸಂಚಾಕ್ಕೆ ತೊಂದರೆ ಉಂಟಾಗಿದೆ.
ಘಾಟಿಯಲ್ಲಿ ವಾಹನಗಳು ಕೆಟ್ಟನಿಂತ ಪರಿಣಾಮ ಟ್ರಾಫಿಕ್ ಜ್ಯಾಮ್ ನಿಂದ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಘಾಟಿಯಲ್ಲೇ ವಾಹನಗಳು ಗಂಟೆಗಟ್ಟಲೆ ಕಾಯುವಂತಾಗಿದೆ.
ತಿರುವು ಎರಡು ಮತ್ತು ಐದರಲ್ಲಿ ಎರಡೆರಡು ಕಾರುಗಳು ಕೆಟ್ಟು ನಿಂತ ಪರಿಣಾಮ ಟ್ರಾಫಿಕ್ ಜ್ಯಾಮ್ ಆಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಅದೂ ಸಹ ಶನಿವಾರ ಮತ್ತು ಭಾನುವಾರ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ದಟ್ಟವಾಗಿರುವುದರಿಂದ ಇಂದು ವಾಹನ ಸವಾರರಿಗೆ ತೊಂದರೆ ಉಂಟಾಗಿದೆ.
ಆಗುಂಬೆ ಪೊಲೀಸರು ಸಹ ವಾಹನ ಸಂಚಾರ ಸುಗಮಗೊಳಿಸಲು ಯತ್ನಿಸುತ್ತಿದ್ದರೂ ವಾಹನ ಸಂಚಾರ ನಿಯಂತ್ರಣಗೊಳ್ಳುತ್ತಿಲ್ಲ. ಇದರಿಂದ ಗಂಟೆ ಗಟ್ಟಲೆ ಕಾಯುವಂತಾಗಿದೆ ಎಂದು ವಾಹನ ಸವಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ.
إرسال تعليق