ಹೊಳೆಹೊನ್ನೂರು ಬಳಿ ಎರಡು ಪ್ರತ್ಯೇಕ ರಸ್ತೆ ಅಪಘಾತ ಸಂಭವಿಸಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆಯ ಕೈಮರದ ಬಳಿ ಸ್ವಿಫ್ಟ್ ಕಾರೊಂದು ಪಲ್ಟಿಹೊಡೆದಿದೆ.
ಯಡೇಹಳ್ಳಿ ಬಳಿ ಬೈಕ್ ಮತ್ತುಕಾರಿನ ನಡುವೆ ಡಿಕ್ಕಿ ಉಂಟಾಗಿದ್ದು ಬೈಕ್ ಸವಾರನಿಗೆ ಪೆಟ್ಟುಗಳಾಗಿವೆ. ಅವರನ್ನ ಹೊಳೆಹೊನ್ನೂರು ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಕೈಮರದ ಬಳಿ ಸ್ವಿಫ್ಟ್ ಕಾರೊಂದು ಪಲ್ಟಿ ಹೊಡೆದು ರಸ್ತೆ ಪಕ್ಕದ ಅಡಿಕೆ ತೋಟಕ್ಕೆ ಬಿದ್ದಿದೆ. ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಚಾಲಕ ಎಲ್ಲಿದ್ದಾನೆ ಎಂಬುದು ಇನ್ನೂ ಪತ್ತೆಯಾಗಿಲ್ಲ. ಸ್ಥಳೀಯರ ಮಾಹಿತಿ ಪ್ರಕಾರ ಕಾರಿನ ಟಯರ್ ಬ್ಲಾಸ್ಟ್ ಆಗಿ ಪಲ್ಟಿ ಹೊಡೆದಿದೆ ಎನ್ನಲಾಗಿದೆ. ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ.
إرسال تعليق