ತಿರುವಿನಲ್ಲಿ ಪ್ರಯಾಣಿಕರಿಗೆ ವಾಂತಿಗಾಗಿ ನಿಲ್ಲಿಸಿದ್ದ ಜೀಪಿಗೆ ಟಿಟಿ ಡಿಕ್ಕಿ

 


ಹೊಸನಗರ ತಾಲೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮರಕುಟಿಗ ಬಳಿ ಜೀಪು ಮತ್ತು ಟಿಟಿ ನಡುವೆ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರಿಗೆ ತೀವ್ರಗಂಬೀರ ಗಾಯಗಳಾಗಿದ್ದರೆ ಉಳಿದ 6 ಮಂದಿಗೆ ಸಣ್ಣಪುಟ್ಟ ಗಾಯ ಹಾಗೂ ಕೈಕಾಲು ಮುರಿದಿರುವ ಘಟನೆ ಇಂದು ಬೆಳಿಗ್ಗೆ ವರದಿಯಾಗಿದೆ. 


ಟಿಟಿ ಕೊಲ್ಲೂರಿನಿಂದ ಶಿವಮೊಗ್ಗ ಕಡೆ ತೆರಳುತ್ತಿದ್ದು, ಜೀಪು ನಿಟ್ಟೂರಿನಿಂದ ಕೊಲ್ಲೂರು ಕಡೆ ಸಾಗುತ್ತಿತ್ತು. ಮರಕುಟಿಗದ ತಿರುವಿನ ಬಳಿ ಎರಡರ ನಡುವೆ ಡಿಕ್ಕಿ ಉಂಟಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 


ಜೀಪಿನಲ್ಲಿ 6 ಜನರಿದ್ದರೆ, ಟಿಟಿಯಲ್ಲಿ 13 ಜನ ಪ್ರಯಾಣಿಕರಿದ್ದರು. ಜೀಪ್‌ನಲ್ಲಿದ್ದ 8 ಮಂದಿ ಪೈಕಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಇವರೆಲ್ಲ ಕೇರಳದಿಂದ ಬಂದಿದ್ದ ಪ್ರವಾಸಿಗರು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಕುಂದಾಪುರದ ಆಸ್ಪತ್ರೆಗೆ ರವಾನಿಸಲಾಗಿದೆ. ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.



ತಿರುವಿನಲ್ಲಿ ಪ್ರಯಾಣಿಕರಿಗೆ ವಾಂತಿ ಆಗುತ್ತಿದ್ದರಿಂದ ರಸ್ತೆ ಬದಿಗೆ ನಿಲ್ಲಿಸಿದ್ದ ಜೀಪಿಗೆ ಎದುರಿನಿಂದ ಬಂದ ಟಿಟಿ ಡಿಕ್ಕಿ ಹೊಡೆದಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಟಿಟಿ ಶಿವಮೊಗ್ಗ ಆರ್ ಟಿಒ ಪಾಸಿಂಗ್ ಗಾಡಿಯಾಗಿದೆ. 

Post a Comment

أحدث أقدم