ಅನುಮಾನ ವ್ಯಕ್ತಪಡಿಸಿದ ಮಾಜಿ ಡಿಸಿಎಂ ಈಶ್ವರಪ್ಪ

 


ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮೇಲಿನ ಆತ್ಮಿಯತೆ ಮೇರೆಗೆ ಸಿಟಿ ರವಿಯನ್ನ ಬಂಧಿಸಿ ಸುತ್ತಾಡಿಸಲಾಗಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. 


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣ ಸಿಐಡಿಗೆ ಕೊಟ್ಟಿದ್ದು ಸರಿ ಹೋಗಲಿಲ್ಲ. ಪೊಲೀಸ್ ಇಲಾಖೆ ಸಂಪೂರ್ಣ ವೈಫಲ್ಯವನ್ನು ಕಾಂಗ್ರೆಸ್ ನವರು ಸೇರಿದಂತೆ ಎಲ್ಲರೂ ಟೀಕೆ ಮಾಡ್ತಿದ್ದಾರೆ. ರವಿಗೆ ನೋಟೀಸ್ ಕೊಡದೇ ಅರೆಸ್ಟ್ ಮಾಡಿ ಕಾಡುಮೇಡು ಸುತ್ತಿಸಿದ್ದಾರೆ ಎಂದು ದೂರಿದರು.


ರಕ್ಷಣೆಗೋಸ್ಕರ ಕಾಡುಮೇಡು ಸುತ್ತುಸಿದರಂತೆ ಎಂದು ಕಾಂಗ್ರೆಸ್ ನಾಯಕರು ಸಮ್ಜಾಯಿಷಿ ನೀಡಿದ್ದಾರೆ. ರಕ್ಷಣೆಗಾಗಿ ಕಾಡುಮೇಡು ಸುತ್ತಿಸಿ, ಐದು ಜಿಲ್ಲೆ ಸುತ್ತು ಹಾಕಿಸಿದ್ದಾರೆ ಎನ್ನಲಾಗುತ್ತಿದೆ. ಸಿಐಡಿ ರಾಜ್ಯ ಸರಕಾರದ ಕೈಯಲ್ಲಿ ಇದೆ. ಸಿಐಡಿ ಏನು ವರದಿ ಕೊಡುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದರು. 


ಸಿಎಂ, ಗೃಹ ಸಚಿವರು ಈ ಬಗ್ಗೆ ನಮಗೆ ಗೊತ್ತಿಲ್ಲ ಅಂತಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆತ್ಮೀಯತೆ ಮೇಲೆ ಡಿಕೆಶಿ ಈ ಕೆಲಸ ಮಾಡಿದ್ದಾರೆ. ಸಿಐಡಿಯವರು ಡಿಕೆಶಿ ಅವರನ್ನು ತನಿಖೆ ಮಾಡ್ತಾರಾ? ನ್ಯಾಯಾಂಗ ತನಿಖೆ ಆಗಿದ್ದರೆ ಒಂದು ಸ್ಪಷ್ಟ ರೂಪ ಬರುತಿತ್ತು ಎಂದು ಅವರು ತಿಳಿಸಿದರು. 


ಸಭಾಪತಿ ಅವರು ರವಿ ಅಶ್ಲೀಲ ಪದ ಬಳಸಿಲ್ಲ ಅಂತಿದ್ದಾರೆ. ಇದು ಯಾವ ಕಾರಣಕ್ಕೆ ಬಿಡಲ್ಲ ಅಂತಾ ಡಿಕೆಶಿ, ಹೆಬ್ಬಾಳ್ಕರ್ ಹೇಳ್ತಿದ್ದಾರೆ. ಬೇರೆ ಬೇರೆ ಸಚಿವರು ಇದನ್ನು ಇಲ್ಲಿಗೆ ಬಿಡಲ್ಲ ಅಂದಿದ್ದಾರೆ. ಇದು ನ್ಯಾಯಾಂಗ ತನಿಖೆ ಕೊಟ್ಟರೆ ಸರಿ ಹೋಗುತ್ತದೆ ಎಂದು ಹೇಳಿದರು. 


ಗೂಂಡಾಗಳಿಗೆ ಪ್ರೇರಣೆ ಕೊಟ್ಟವರು ಯಾರು?ಪೊಲೀಸರಿಗೆ ಮೇಲೆ ಮೇಲೆ ನಿರ್ದೇಶನ ಕೊಟ್ಟಿದ್ದು ಯಾರು? ಈ ಎಲ್ಲಾ ಅಂಶ ಹೊರಗೆ ಬರಬೇಕು ಅಂದ್ರೆ ಸಿಐಡಿಯಿಂದ ಸಾಧ್ಯವಿಲ್ಲ. ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ಆಗಬೇಕು ಎಂದರು. 

Post a Comment

أحدث أقدم