ಖ್ಯಾತ ಚಲನಚಿತ್ರ ನಟರಾದ ಡಾಕ್ಟರ್ ಶಿವರಾಜಕುಮಾರ್ ರವರ ಯಶಸ್ವಿಶಸ್ತ್ರ ಚಿಕಿತ್ಸೆಗಾಗಿ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ಮತ್ತು ಶಿವಮೊಗ್ಗದ ಕೋಟೆ ಮಾರಿಕಾಂಬ ದೇವಸ್ಥಾನದಲ್ಲಿ ಹೋಮ ಮತ್ತು ವಿಶೇಷ ಪೂಜೆ ನಡೆದಿದೆ.
ಖ್ಯಾತ ಚಲನಚಿತ್ರ ನಟರಾದ ಡಾ.ಶಿವರಾಜ್ ಕುಮಾರ್ ರವರ ಅನಾರೋಗ್ಯದ ನಿಮಿತ್ತ ಅಮೆರಿಕದ ಮಿಯಾಮಿಯಲ್ಲಿ ಶಸ್ತ್ರ ಚಿಕಿತ್ಸೆ ನಡೆಯಲಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಗುಣಮುಖರಾಗಿ ಆಗಮಿಸಲಿ ಎಂದು, ಇಂದು ಬೆಳಗ್ಗೆ 9 ಗಂಟೆಗೆ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ಸನ್ನಿದಾನದಲ್ಲಿ ಮಹಾ ಮೃತ್ಯುಂಜಯ ಹೋಮ ನಡೆದಿದೆ.
ದೇವಸ್ಥಾನ ಆಡಳಿತ ಮಂಡಳಿ ಹಾಗೂ ಅಭಿಮಾನಿ ಬಳಗದಿಂದ ನೆರವೇರಿಸಲಾಯಿತು, ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಕಾರ್ಯದರ್ಶಿಗಳಾದ ರವಿ ಕುಮಾರ್ ರವರು kpcc ಓಬಿಸಿ ಸಂಯೋಜಕ ಜಿ.ಡಿ ಮಂಜುನಾಥ್ , ಮಸ್ಗಾರ್ ರಾಜಪ್ಪ, ಎಂ.ಬಿ ರವಿಕುಮಾರ್ ಪುರದಾಳ್ ರಘು, ಚೇತನ್, ಸಂದೇಶ್ ಇನ್ನಿತರರು ಹಾಜರಿದ್ದರು
ಅದರಂತೆ ನಟ ಶಿವರಾಜ್ ಕುಮಾರ್ ಆದಷ್ಟು ಬೇಗ ಗುಣಮುಖರಾಗಿ ಆಗಮಿಸುವಂತೆ ಶಿವಮೊಗ್ಗದ ಕೋಟೆ ಮಾರಿಕಾಂಬ ದೇವಸ್ಥಾನದಲ್ಲಿ ಶ್ರೀಕಾಂತ್ ಅಭಿಮಾನಿ ಬಳಗದಿಂದ ದೇವಿಗೆ ವಿಶೇಷ ಪೂಜೆ ನಡೆಸಲಾಯಿತು.. ಈ ವೇಳೆ ನವುಲೆ ಮಂಜು, ಮಾಜಿ ಉಪಮೇಯರ್ ಪಾಲಾಕ್ಷಿ, ಮಾಜಿ ಕಾರ್ಪರೇಟರ್ ನಾಗರಾಜ್ ಕಂಕಾರಿ, ಮಂಜು ಪುರಲೆ ಮೊದಲಾದವರು ಭಾಗಿಯಾಗಿದ್ದರು.
إرسال تعليق