ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರ ರಿಲೀಸ್ ಹಿನ್ನೆಲೆಯಲ್ಲಿ ವೀರಭದ್ರ ಚಲನಚಿತ್ರ ಮಂದಿರದಲ್ಲಿ ಫ್ಯಾನ್ಸ್ ಶೋ ನಡೆದಿದೆ. ಚಲನಚಿತ್ರ ಬಿಡುಗಡೆಯ ಮೊದಲ ದಿನವೇ ಚಲನಚಿತ್ರದಲ್ಲಿ ಕಿಚ್ಚನ ಅಭಿಮಾನಿಗಳಿಂದ ಸಂಭ್ರಮಾಚರಣೆ ಸಹ ನಡೆದಿದೆ.
ಸುದೀಪ್, ವರಲಕ್ಷ್ಮಿ, ಸುನೀಲ್, ಪ್ರಮೋದ್ ಶೆಟ್ಟಿ ಸಂಯುಕ್ತ ಅಭಿನಯದ ಚಲನಚಿತ್ರಕ್ಕೆ ಫ್ಯಾನ್ಸ್ ಗಳ ಸಂಭ್ರಮ ಜೋರಾಗಿದೆ. ಕಿಚ್ಚನ ಬಳಗ, ಶಿವಮೊಗ್ಗ ಅಡ್ಡ, ಕಿಚ್ಚನ ಗೂಡು, ಕಿಚ್ಚನ ಗೆಳೆಯರ ಬಳಗ, ಕಿಚ್ಚನ ಕೋಟೆ, ಕಿಚ್ಚನ ಗೂಡು ವೇದಿಕೆ ಕಿಚ್ವನ ಹುಡುಗರು ಚಾನೆಲ್ ಏರಿಯಾ ಹೀಗೆ ಮೊದಲಾದ ಫ್ಕೆಕ್ಸ್ ಗಳು ಚಲನ ಚಿತ್ರ ಮಂದಿರದಲ್ಲಿ ರಾರಾಜಿಸಿವೆ.
ಕಿಚ್ಚನ ಧ್ವಜ ಹಿಡಿದು ಕೊಂಡು ಬಂದ ಅಭಿಮಾನಿಗಳು ನಟ ಸುದೀಪ್ ಗೆ ಜೈಜಾರ ಹಾಕಲಾಯಿತು. ಕಿಚ್ಚನ ಕಟೌಟ್ ನಿಲ್ಲಿಸಿ ಹೂವಿನ ಹಾರ ಹಾಕಲಾಯಿತು. ಸುದೀಪ್ ಕಟೌಟ್ ಗೆ ಹಾಲಿನ ಅಭಿಷೇಕ ಮತ್ತು ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ ನಡೆಸಲಾಯಿತು. ಕಿಚ್ಚ ಸುದೀಪ್ ಅವರ ತಾಯಿ ಸರೋಜರವರ ಜೊತೆ ತೆಗೆದ ಫೊಟೊ ಸಹ ಚಲನ ಚಿತ್ರ ಮಂದಿರದಲ್ಲಿ ರಾರಾಜಿಸಿವೆ.
ಫ್ಯಾನ್ಸ್ ಶೋಗಾಗಿ ಚಲನಚಿತ್ರ ಮಂದಿರ ಪ್ರವೇಶ ದರವನ್ನೂ ಹೆಚ್ಚಿಸಲಾಗಿದೆ. 100 ರೂ ಇದ್ದ ಫಸ್ಟ್ ಕ್ಲಾಸ್ 150 ರೂಗೆ ಮಾರಾಟವಾಗಿದೆ. 150 ರೂ. ಇದ್ದ ಬಾಲ್ಕಾನಿ 200 ರೂ.ಗೆ ಮಾರಾಟವಾಗಿದೆ.
ಚಲನಚಿತ್ರ ಮಂದಿರದಲ್ಲಿ ನಟ ಸುದೀಪ್ ಅವರ ಮ್ಯಾಕ್ಸ್ ಚಿತ್ರದ ಪೋಸ್ಟರ್ ಕೆಳಗೆ ನಿಂತು ಫೊಟೊ ತೆಗೆಸಿಕೊಳ್ಳುವುದು ಸಹ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸಿದೆ.
إرسال تعليق