ಕೆಳದಿಯ ಕೊನೆಯ ರಾಣಿ ವೀರಮ್ಮಾಜಿಯ ಸಮಾದಿ ಬೆಳಕಿಗೆ

 


1763 ರಲ್ಲಿ ಹೈದರಾಲಿ ನಗರದ ಕೋಟೆಯ ಮೇಲೆ ದಾಳಿಮಾಡಿ ಮೋಸದಿಂದ ಗೆದ್ದು, ವೀರಮ್ಮಾಜಿಯ ದತ್ತು ಮಗನೊಂದಿಗೆ ಸೆರೆಹಿಡಿದು ಮಧುಗಿರಿ ಕೋಟೆಯಲ್ಲಿ ಬಂದಿಸಿಡುತ್ತಾನೆ.ಆದರೆ ಹಿಂದೆ ಕೆಳದಿಯ ಚೆನ್ನಮ್ಮ ಮಾಡಿದ ಉಪಕಾರಕ್ಕಾಗಿ ಮರಾಠ ಪೇಶ್ವೆ 1767 ರಲ್ಲಿ ಮಧುಗಿರಿ ಕೋಟೆಯ ಮೇಲೆ ದಾಳಿಮಾಡಿ ವೀರಮ್ಮಾಜಿಯನ್ನು ಬಿಡಿಸಿ ಪೂನಕ್ಕೆ ಕರೆದುಕೊಂಡು ಹೋಗುತ್ತಿರುವಾಗ ಹೊಸಪೇಟೆ ಹತ್ತಿರ ಮರಣ ಹೊಂದುತ್ತಾಳೆ.


ಆಗ ಉಜ್ಜಯನಿ ಮಠದವರು ಮಠದ ಎದುರು ಸಮಾಧಿಯಲ್ಲಿ ಹೂಳಲಾಗುತ್ತದೆ. ಆದರೆ ಈಗಲೂ ಅವರ ಶಾಸನ ಸಹಿತ ಈ ಸಮಾದಿ ಒಬ್ಬರ ಮನೆಯ ಕಾಂಪೌಂಡ್ ಒಳಗೆ ಸುರಕ್ಷಿತವಾಗಿ ಸಂರಕ್ಷಿಸಿರುವುದು ವಿಶೇಷ..ಇತ್ತೀಚೆಗೆ ಸಾಗರದ ವಕೀಲರು ಉಜ್ಜಯಿನಿಯ ಮಠಕ್ಕೆ ಹೋದಾಗ ಈ ಸಮಾಧಿಯನ್ನು ಪತ್ತೆ ಮಾಡಿದ್ದು ಇದರ ಬಗ್ಗೆ ಸಂಶೋಧನೆ ಆಗಬೇಕು ಎಂದು ಆಗ್ರಹಿಸಿದ್ದಾರೆ. 

Post a Comment

أحدث أقدم