ಸಹಕಾರ ಸಂಘಗಳ ಚುನಾವಣೆ ಸ್ಪರ್ಧಿಗಳಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ಕಿವಿಮತನ್ನ ಹೇಳಿದ್ದಾರೆ. ತುಂಬ ಉತ್ಸಾಹದಲ್ಲಿ ಸಹಕಾರ ಸಂಘಗಳ ಚುನಾವಣೆಯಲ್ಲಿ ಉತ್ಸಾಹಿ ಯುವಕರು ಭಾಗಿಯಾಗುತ್ತಿದ್ದಾರೆ. ನೀವು ಅಙದುಕೊಂಡಂತೆ ಇಲ್ಲಿ ಕೆಲಸ ಮಾಡು ಸಾಧ್ಯವಿಲ್ಲವೆಂಬಂತೆ ವಿವರಣೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌಡರು, ನಬಾರ್ಡ್ ನಿಂದ ಸಹಕಾರ ಸಂಘಗಳಿಗೆ 600 ಕೋಟಿ ಬರಬೇಕಾದ ಅನುದಾನದಲ್ಲಿ 140 ಕೋಟಿ ಬಂದಿದೆ. ನಬಾರ್ಡ್ ನ ಅನುದಾನ 3.5% ನಿಂದ 1.5% ಅನುದಾನಕ್ಕೆ ಇಳಿಸಲಾಗಿದೆ ಎಂದು ತಿಳಿಸಿದರು.
ಇದು ಮುಂದಿವರೆದರೆ, ಸಹಕಾರ ಸಂಘಗಳಲ್ಲಿ ಸುಲಭ ಸಾಲ ಸಿಗುವುದಿಲ್ಲ . 21 ಡಿಸಿಸಿ ಬ್ಯಾಂಕ್ ನಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ 1200.10 ಕೋಟಿ ಬೆಲೆ ಸಾಲ ಕೊಟ್ಟಿದೆ. ಸಿಬ್ಬಂದಿಗಳಿಗೆ 7 ನೇ ವೇತನ ಕೊಟ್ಟಿದ್ದೇವೆ. 50 ಶಾಖಾಬ್ಯಾಂಕ್ ಆರಂಭಿಸುವ ಗುರಿ ಹೊಂದಿದೆ. ಸಂಚಾರಿ ಬ್ಯಾಂಕ್ ಆರಂಭಿಸಲಿದ್ದೇವೆ ಎಂದು ವಿವರಿಸಿದರು.
ಶೇರುಹಣ 145 ಕೋಟಿ ದಾಟಿದೆ. ಠೇವಣಿ ಹೆಚ್ಚಿಸಲಾಗಿದೆ. ನಬಾರ್ಡ್ ಸಾಲ ಕೊಡಲು ಸಾಧ್ಯವಾಗದಿದ್ದರೂ, ಡಿಸಿಸಿ ಬ್ಯಾಂಕ್ ರೈತರಿಗೆ ಸಾಲಕೊಡಲು ಸಧೃಡವಾಗಿದೆ. ಜೀರೋ ಪರ್ಸೆಂಟ್ ಸಾಲ ನೀಡಲಾಗುತ್ತಿದೆ. ನಬಾರ್ಡ್ ಮತ್ತು ಸರ್ಕಾರದ ಸಬ್ಸಿಡಿ ಸೇರಿದರೆ 7.5% ಸಿಗಲಿದೆ 3% ಹೊರೆ ಮಾಡಿಕೊಂಡು ರೈತರಿಗೆ ನಾವು ಜೀರೋ ಪರ್ಸೆಂಟ್ ಸಾಲ ಕೊಡ್ತಾ ಇದ್ದೀವಿ. ಆದರೂ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದರು.
ರೈತರಿಗೆ ಅನುಕೂಲ ಮಾಡು ನಬಾರ್ಡದ ಆರಂಭವಾಗಿದೆ. ಆದರೆ ಅದರ ಅನುದಾನ ಕಡಿಮೆ ಗೊಳಿಸಿದರೆ ಸಹಕಾರಿ ಬ್ಯಾಂಕ್ ಗಳು ಎಲ್ಲಿಗೆ ಹೋಗಬೇಕು. ನಬಾರ್ಡ್ ನ ಹಣ ಕಡಿಮೆಯಾದರೆ ಸಹಕಾರ ಸಂಸ್ಥೆಗಳಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಈ ಬಾರಿಯ ಸಹಕಾರಿ ಸಂಘದ ಚುನಾವಣೆಯಲ್ಲಿ ಉತ್ಸಾಹಿ ಯುವಕರು ಸ್ಪರ್ಧೆಗೆ ಇಳಿದಿದ್ದಾರೆ. ನಬಾರ್ಡ್ ಅನುದಾನ ಹೆಚ್ಚಿಸದಿದ್ದರೆ ಯುವಕರ ಆಸೆ ಹುಸಿಯಾಗಲಿದೆ ಎಂದು ಕಿವಿ ಮಾತನ್ನ ಹೇಳಿದ್ದಾರೆ.
إرسال تعليق