ಹಾಯ್/ಶಿವಮೊಗ್ಗ
ವಿನೋಬ ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಲೆಕ್ಕ ಅಧೀಕ್ಷಕರು ಮತ್ತು ಗುತ್ತಿಗೆದಾರರ ನಡುವೆ ವಾಗ್ವಾದ ನಡೆದಿದ್ದು, ಲೆಕ್ಕ ಅಧೀಕ್ಷಕರು ಇಬ್ಬರು ಗುತ್ತಿಗೆದಾರರ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಅಡಿ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯ ಬಿಲ್ ಗಳ ಪೇಮೆಂಟ್ ವಿಳಂಭವಾಗುತ್ತಿರುವ ಹಿನ್ನಲೆಯಲ್ಲಿ ಗುತ್ತಿಗೆದಾರ ಚಂದ್ರನಾಯ್ಕ್ ಮತ್ತು ಲೋಕೇಶ್ ಇಬ್ಬರು ಸಮಾಜ ಕಲ್ಯಾಣ ಇಲಾಖೆಗಯ ಉಪನಿರ್ದೇಶಕರ ಕಚೇರಿಗೆ ತೆರಳಿ ಉಪನಿರ್ದೇಶಕರ ಬಳಿ ಬಿಲ್ ಪಾವತಿ ತಡೆಹಿಡಿದರುವ ಬಗ್ಗೆ ದೂರು ನೀಡಿದ್ದಾರೆ.
ಲೆಕ್ಕ ಅಧೀಕ್ಷಕ ಶರತ್ ಕುಮಾರ್ ಅವರನ್ನ ಉಪನಿರ್ದೇಶಕರು ಕೊಠಡಿಗೆ ಕರೆಯಿಸಿದಾಗ ಅಲ್ಲೇ ಇದ್ದ ಗುತ್ತಿಗೆದಾರರು ಈತನೇ ಬಿಲ್ ಗಳನ್ನ ತಡೆಹಿಡಿದಿರುವುದಾಗಿ ಏಕವಚನದಲ್ಲಿ ಸಂಬೋಧಿಸಿದ್ದಾರೆ. ಅದಕ್ಕೆ ಲೆಕ್ಕ ಅಧೀಕ್ಷಕ ಶರತ್ ಕುಮಾರ್ ಇದು ಸರ್ಕಾರಿ ಕಚೇರಿ ಗೌರವಯುತವಾಗಿ ನಡೆದುಕೊಳ್ಳಿ ಎಂದು ಹೇಳಿದ್ದಾರೆ.
ಗುತ್ತಿಗೆದಾರರು ಅವ್ಯಾಚ್ಯಶಬ್ದಗಳಿಂದ ಬೈಯುವುದು ಮುಂದುವರೆಸಿ, ಬೆದರಿಕೆ ಹಾಕಲು ಆರಂಭಿಸಿದ್ದಾರೆ. ಲಂಚ ಪಡೆಯಲು ಬಿಲ್ ಪಾವತಿಯನ್ನ ಉದ್ದೇಶಪೂರಕವಾಗಿ ವಿಳಂಭಮಾಡುವೆಯಾ ಎಂದು ಗುತ್ತಿಗೆದಾರರಿಗೆ ಆರೋಪಿಸಿದ್ದಾರೆ. ಕೆಲಸ ಮಾಡಿಸಿಕೊಳ್ಳಲು ಸುಳ್ಳು ಆರೋಪ ಮಾಡಬೇಡಿ, ಲಂಚ ಕೇಳಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ ಇಲ್ಲವಾದಲ್ಲಿ ನಾನೇ ಲಂಚದ ಆಮಿಷ ನೀಡುತ್ತಿದ್ದಾರೆ ಎಂದು ದೂರು ಕೊಡುವುದಾಗಿ ಅಧೀಕ್ಷಕರು ತಿರುಗಿಸಿ ಹೇಳಿದ್ದಾರೆ.
ಕಚೇರಿ ಸಿಬ್ಬಂದಿ ಮತ್ತು ಸಹೋದ್ಯೋಗಿಗಳ ಎದುರು ಅಪಮಾನ ಮಾಡಿದ್ದಲ್ಲದೆ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ಅಧೀಕ್ಷಕರು ಗುತ್ತಿಗೆದಾರರ ವಿರುದ್ಧ ಆರೋಪಿಸಲಾಗಿದೆ. ಹೊರಹೋಗುವಾಗ ಗುತ್ತಿಗೆದಾರರಲ್ಲೊಬ್ಬರು ನಾನು ಏನು ಅಂತ ತೋರಿಸುವೆ, ಜಾತಿ ನಿಂದನೆ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಈ ಹಿಂದೆ ಚಂದ್ರನಾಯ್ಕ್ ಇದೇ ವಿಷಯವಾಗಿ ಕಾಮಗಾರಿ ಬಿಲ್ ಗಳನ್ನ ಪಾವತಿಸಲು ಬಂದಿದ್ದು, 7 ಕಾಮಗಾರಿ ಬಿಲ್ ಗಳಲ್ಲೂ ಮೂರನೇ ವ್ಯಕ್ತಿಗಳಿಂದ ತಪಾಸಣೆ ವರದಿಯನ್ನ ಸಲ್ಲಿಸದೆ ಹೋಗಿದ್ದಾರೆ. ತಪಾಸಣೆ ವರದಿ ಹಾಕಲಿಲ್ಲವೆಂದು ಗಮನಕ್ಕೆ ತಂದಾಗ, ಮೊದಲು ಬಿಲ್ ಪಾವತಿಸು ನಂತರ ಥರ್ಟ್ ಪಾರ್ಟಿ ರಿಪೋರ್ಟ್ ಕೊಡುವುದಾಗಿ ಹೇಳಿದ್ದರು. ಆಗ ಆಧೀಕ್ಷಕರು ಆ ರೀತಿ ಹಣ ಪಾವತಿ ಮಾಡಲು ಬರೊದಿಲ್ಲ ಎಂದು ಹೇಳಿದಾಗ ಲಂಚದ ಆರೋಪ ಮಾಡಿದ್ದರು. ಆಗಲೂ ಬೆದರಿಕೆ ಹಾಕಿದ್ದರು. ಪದೇ ಪದೇ ಕಚೇರಿಗೆ ಬಂದು ನಿಯಮಾನುಸಾರ ಕರ್ತವ್ಯ ಮಾಡಲು ಅಡ್ಡಿ ಪಡಿಸಿ ನಿಂದಿಸುವುದು ಬೈಯುವುದು, ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆ ಉಪನಿರ್ದೇಶಕರ ಅನುಮತಿ ಪಡೆದು ಇಬ್ಬರು ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಠಾಣೆಗೆ ದೂರು ನೀಡುದ್ದಾರೆ.
إرسال تعليق