Karnataka Budget: ನಮ್ಮ ಮೆಟ್ರೋ: 2025ರ ಒಳಗೆ ಹೊಸದಾಗಿ 44 ಕಿ.ಮೀ ಮೆಟ್ರೋ ಮಾರ್ಗ ಸೇರ್ಪಡೆ

 

ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ನೇ ಸಾಲಿನ ಬಜೆಟ್​ ಮಂಡಿಸಿದ್ದು ಅದರಲ್ಲಿ ಈ ಬಾರಿ ನಮ್ಮ ಮೆಟ್ರೋಗೆ 44 ಕಿ.ಮೀ ಹೊಸ ಮಾರ್ಗ ಸೇರ್ಪಡೆಯಾಗುವ ಘೋಷಣೆ ಮಾಡಿದ್ದಾರೆ. 2025ರ ವೇಳೆಗೆ ಹೆಚ್ಚುವರಿಯಾಗಿ 44 ಕಿ.ಮೀ ಮಾರ್ಗ ಸೇರ್ಪಡೆಯಾಗಲಿದೆ ಎಂದು ತಿಳಿಸಿದ್ದಾರೆ


ಬೆಂಗಳೂರು ನಮ್ಮ ಮೆಟ್ರೋ (Namma Metro) ಜಾಲಕ್ಕೆ 2025ರ ವೇಳೆಗೆ ಹೆಚ್ಚುವರಿಯಾಗಿ 44 ಕಿ.ಮೀ ಮಾರ್ಗ ಸೇರ್ಪಡೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 2024-25ನೇ ಸಾಲಿನ ರಾಜ್ಯ ಬಜೆಟ್​ ಮಂಡನೆ ಮಾಡಿದ ಅವರು, ಮೆಟ್ರೋ ಯೋಜನೆ ಹಂತ 2 ಹಾಗೂ 2ಎ ಯೋಜನೆಯಡಿ ಹೊರವರ್ತುಲ ರಸ್ತೆ-ವಿಮಾನ ನಿಲ್ದಾಣ ಮಾರ್ಗವು 2026ರ ಜೂನ್ ವೇಳೆಗೆ ಪೂರ್ಣವಾಗಲಿದೆ.

ನಮ್ಮ ಮೆಟ್ರೋ ಹಂತ-3ರಲ್ಲಿ ಅಂದಾಜು 15,611 ಕೋಟಿ ರೂ. ವೆಚ್ಚದ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆಗೆ ಅರ್ಜಿ ಸಲ್ಲಿಕೆಯಾಗಿದೆ, ನಮ್ಮ ಮೆಟ್ರೋ ಹಂತ-3ಎ ಅಡಿಯಲ್ಲಿ ಡಿಪಿಆರ್ ಕರಡು ಸಿದ್ಧವಾಗಿದೆ ಎಂದಿದ್ದಾರೆ. ಹಾಗೆಯೇ ಪೆರಿಫೆರಲ್ ರಿಂಗ್ ರೋಡ್​ ಅನ್ನು ಬೆಂಗಳೂರು ಬ್ಯುಸಿನೆಸ್​ ಕಾರಿಡಾರ್ ಎಂಬ ಹೊಸ ಪರಿಕಲ್ಪನೆಯಲ್ಲಿ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು ಬಿಐಇಸಿನಿಂದ ತುಮಕೂರು ಮತ್ತು ಕೆಐಎಎಲ್​ನಿಂದ ದೇವನಹಳ್ಳಿಗೆ ಮೆಟ್ರೋ ಜಾಲ ವಿಸ್ತರಣೆ ಕುರಿತು ಕಾರ್ಯಸಾಧ್ಯತಾ ವರದಿ ತಯಾರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸೇವೆಗೆ 1334 ಹೊಸ ಎಲೆಕ್ಟ್ರಿಕ್ ಬಸ್​ಗಳು ಮತ್ತು 820 ಬಿಎಸ್​-6 ಡೀಸೆಲ್​ ಬಸ್ಸುಗಳ ಸೇರ್ಪಡೆ.

5,550 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಾವೇರಿ ಹಂತ-5 ಯೋಜನೆ ಮೇ 2024ರಲ್ಲಿ ಕಾರ್ಯಾರಂಭವಾಗಲಿದೆ. 12 ಲಕ್ಷ ಜನರಿಗೆ ಕುಡಿಯುವ ನೀರಿನ ಸೌಲಭ್ಯ ದೊರೆಯಲಿದೆ, ಒಳಚರಂಡಿ ಕಾಮಗಾರಿ ಡಿಸೆಂಬರ್ 2024ರಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.




Post a Comment

أحدث أقدم