ಬಜೆಟ್‌ನಲ್ಲಿ ಹೊಸ ಜಿಲ್ಲೆಗಳ ಘೋಷಣೆ ಮಾಡುತ್ತಾ ಸರ್ಕಾರ?
ಬೆಳಗಾವಿ: ಫೆ.16ರಂದು (ಶುಕ್ರವಾರ) ಸಿಎಂ ಸಿದ್ದರಾಮಯ್ಯ (Siddaramaiah) ರಾಜ್ಯ ಸರ್ಕಾರದ ಪೂರ್ಣಾವಧಿ ಬಜೆಟ್ ಮಂಡನೆ ಮಾಡಲಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಅವರು ಮಂಡಿಸಲಿರುವ ದಾಖಲೆಯ 15ನೇ ಬಜೆಟ್ ಸಹ ಇದಾಗಿದೆ. ಬಜೆಟ್‌ನಲ್ಲಿ ಸರ್ಕಾರ ಹೊಸ ಜಿಲ್ಲೆಗಳನ್ನು ಘೋಷಣೆ ಮಾಡುವ ಸಾಧ್ಯತೆಗಳಿದ್ದು, ಬೆಳಗಾವಿ ಮತ್ತು ತುಮಕೂರು (Belagavi, Tumkur) ಜಿಲ್ಲೆ ವಿಭಜನೆ ಫಿಕ್ಸ್ ಆಗುತ್ತಾ ಅನ್ನೋ ಪ್ರಶ್ನೆ J¢ÝzÉ
ಸದ್ಯ ಜಿಲ್ಲೆಗಳ ವಿಭಜನೆಯ ಸದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ರತ್ಯೇಕ ಜಿಲ್ಲೆಗಾಗಿ ಗೋಕಾಕ್, ಚಿಕ್ಕೋಡಿ, ಬೈಲಹೊಂಗಲ ಹಾಗೂ ಅಥಣಿ ನಡುವೆ ಫೈಟ್ ನಡೆಯುತ್ತಿದ್ದು, ಜನಪ್ರತಿನಿಧಿಗಳು ಅಲರ್ಟ್ ಆಗಿದ್ದಾರೆ. ಹಾಗಾಗಿ ಗುರುವಾರ (ಇಂದು) ಬೆಳಗಾವಿ ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ಸಾಧ್ಯತೆಗಳಿದ್ದು, ತಮ್ಮ ಬೇಡಿಕೆಗಳನ್ನು ಮುಂದಿಡಲಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ದಾಖಲೆ ಬಜೆಟ್ ಮಂಡನೆ:
2023ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದ ಬಳಿಕ ಸಿಎಂ ಸಿದ್ದರಾಮಯ್ಯ ಪೂರ್ಣಾವಧಿ ಬಜೆಟ್ ಮಂಡಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಇದು ಅವರ ದಾಖಲೆಯ 15ನೇ ಬಜೆಟ್ ಆಗಿದೆ. ಕಳೆದ ವರ್ಷ ಮಧ್ಯಂತರ ಬಜೆಟ್ ಮಂಡಿಸಿದ್ದರು. ಇದೀಗ ಪೂರ್ಣಾವಧಿ ಬಜೆಟ್ ಮಂಡಿಸುತ್ತಿದ್ದು, ರಾಜ್ಯದ ಜನರು ಹಲವು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

إرسال تعليق