ನೀಲಗಿರಿಗೆ ನಿಷೇಧ: ತೆರವಿಗೆ ತಜ್ಞರ ಸಮಿತಿ ರಚಿಸಲು ನಿರ್ಧಾರ

 


ಶಿವಮೊಗ್ಗ: ಭದ್ರಾವತಿಯ ಎಂಪಿಎಂ ಕಾರ್ಖಾನೆಯು 2015ರಲ್ಲಿ ಮುಚ್ಚಲ್ಪಟ್ಟಿದ್ದು ಅದನ್ನು ಪುನಶ್ಚೇತನ ಗೊಳಿಸಲು ಇರುವ ವಿವಿಧ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲು  ಜಿಲ್ಲಾಧಿಕಾರಿ ಸಭಾಂಗಣದಲ್ಲಿ   ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ  ಇಲಾಖೆ ಸಚಿವ ಮಧು ಬಂಗಾರಪ್ಪ ವಿಡಿಯೋ ಸಂವಾದದ ಮೂಲಕ  ಬೃಹತ್ ಕೈಗಾರಿಕಾ ಸಚಿವ  ಎಂ.ಬಿ. ಪಾಟೀಲ್ ಮತ್ತು ಅರಣ್ಯ ಸಚಿವ  ಈಶ್ವರ್ ಖಂಡ್ರೆ ಅವರ ಜೊತೆ ವಿಡಿಯೋ ಸಂವಾದ ನಡೆಸಿದರು

Posted by: usha hp

* ಭದ್ರಾವತಿ ಶಾಸಕ ಹಾಗೂ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಮೇಶ್  ಉಪಸ್ಥಿತರಿದ್ದರು.

 ವೀಡಿಯೋ ಸಂವಾದ ಕಾರ್ಯಕ್ರಮದಲ್ಲಿ    ಎಂಪಿಎಂ ಕಾರ್ಖಾನೆಯನ್ನು ಪುನಶ್ಚೇತನ ಗೊಳಿಸುವ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮುಖಾಂತರ ಇಲ್ಲಿಯ ಸಾರ್ವಜನಿಕರ ಹಾಗೂ ನೌಕರರ ಆರ್ಥಿಕ ಶಕ್ತಿಯನ್ನು ವೃದ್ಧಿಗೊಳಿಸಲು ಸಹಾಯ ಮಾಡಬೇಕೆಂದು ಕೋರಿದರು

.ಎಂಪಿಎಂ ಕಾರ್ಖಾನೆಯ ವ್ಯಾಪ್ತಿಯಲ್ಲಿ ಸುಮಾರು 20,000 ಹೆಕ್ಟೇರ್ ಭೂಮಿ ಗುತ್ತಿಗೆ ಆಧಾರದಲ್ಲಿದ್ದು ಈ ಪ್ರದೇಶದಲ್ಲಿ ನೀಲಗಿರಿ ಮರಗಳನ್ನು ಬೆಳೆಸಿದಲ್ಲಿ ಕಾರ್ಖಾನೆಗೆ ಬೇಕಾಗುವ ಮೂಲಾ ಕಚ್ಚಾ ವಸ್ತುವಿನ ಕೊರತೆ ನೀಗಲು ಸಾಧ್ಯ ಎಂದು ಎಂಪಿಎಂ ಅಧಿಕಾರಿಗಳು ತಿಳಿಸಿದರು.

ಆದರೆ ನೀಲಗಿರಿ ಮರಗಳನ್ನು ಬೆಳೆಸುವುದಕ್ಕೆ ನಿಷೇಧ ಇರುವುದರಿಂದ ಸದರಿ ನಿಷೇಧವನ್ನು ತೆರವುಗೊಳಿಸುವ ಬಗ್ಗೆ ಒಂದು ತಜ್ಞರ ಸಮಿತಿಯನ್ನು ರಚಿಸಿ ಅವರಿಂದ ವರದಿ ಪಡೆದು ಮುಂದಿನ ಕ್ರಮ ವಹಿಸುವ ಬಗ್ಗೆ ತೀರ್ಮಾನಿಸಲಾಯಿತು.

 ವಿಡಿಯೋ ಸಂವಾದದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ  ಗುರುದತ್ ಹೆಗ್ಗಡೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ  ಸ್ನೇಹಲ್ ಲೋಕಂಡೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಹಾಗೂ ಎಂಪಿಎಂ ನ ಅಧಿಕಾರಿ ವರ್ಗದವರು ಭಾಗವಹಿಸಿದ್ದರು.

Post a Comment

أحدث أقدم