ಶಿವಮೊಗ್ಗ: ಸ್ಥಳೀಯ ಗುತ್ತಿಗೆದಾರರ ಕಡೆಗಣನೆ; ಮೆಸ್ಕಾಂ ವಿರುಧ್ದ ಅನಿರ್ದಾಷ್ಟಾವಧಿ ಧರಣಿ ಸತ್ಯಗ್ರಹ.!

 ಶಿವಮೊಗ್ಗ ಜಿಲ್ಲೆಯ ಸ್ಥಳೀಯ ವಿದ್ಯುತ್ ಗುತ್ತಿಗೆದಾರರು ಸಣ್ಣ ಸಣ್ಣ ಸರ್ಕಾರಿ ಯೋಜನೆಯ ಕಾಮಗಾರಿಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಜಿಲ್ಲಾದ್ಯಂತ ಸುಮಾರು ಒಂದು ಸಾವಿರ ಜನ ಗುತ್ತಿಗೆದಾರರು ಹಾಗೂ ಈ ಕೆಲಸವನ್ನೇ ನಂಬಿಕೊಂಡು ಅವರ ಜೊತೆಗಿರುವ ಸುಮಾರು 15.000 ಜನ ಕೂಲಿ ಕಾರ್ಮಿಕರು ಬೀದಿಗೆ ಬೀಳುವ ಸಮಸ್ಯೆ ಬಂದಿದೆ. 

ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ ಸರ್ಕಾರಿ ಯೋಜನೆಗಳ ಸಣ್ಣ ಸಣ್ಣ ವಿದ್ಯುತ್ ಕಾಮಗಾರಿಗಳ ಕಾರ್ಯಾದೇಶಗಳನ್ನು ಕ್ರೂಡಿಕರಿಸಿ  ಬೃಹತ್ ಮಟ್ಟದ ದರ ಒಪ್ಪಂದ ಮತ್ತು ಟೆಂಡರ್ ಕರೆದಿರುವ ಮೆಸ್ಕಾಂ ವಿರುದ್ದ   ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ಸಮಿತಿಯಿಂದ ಹಲವು ಬೇಡಿಕೆಗಳೊಂದಿಗೆ ಮೆಸ್ಕಾಂ ವಿದ್ಯುತ್ ಭವನ ಬಿ. ಹೆಚ್. ರಸ್ತೆ ಹರಿಗೆ ಶಿವಮೊಗ್ಗ ದಲ್ಲಿ ಅನಿರ್ದಾಷ್ಟಾವಧಿ ಧರಣಿ ಸತ್ಯಗ್ರಹ ಮಾಡಿದ್ದಾರೆ. 


Post a Comment

أحدث أقدم