ಶಿವಮೊಗ್ಗ ಜಿಲ್ಲಾ ಮಾಜಿ ಸೈನಿಕರ ಸಂಘ (ರಿ), ಶಿವಮೊಗ್ಗ ವತಿಯಿಂದ ದಿನಾಂಕ 15-01-2024 ರಂದು ಭೂ ಸೇನಾ ಪಡೆಯ ದಿನವನ್ನು ಶಿವಮೊಗ್ಗದ ಸೈನಿಕ ಉದ್ಯಾನವನದಲ್ಲಿ ಹುತಾತ್ಮರಿಗೆ ಪುಷ್ಪ ನಮನವನ್ನು ಅರ್ಪಿಸುವ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕರ್ನಲ್ ರಾಮಚಂದ್ರ (ನಿವೃತ್ತ) ಇವರು ಮಾತನಾಡಿ ಭಾರತದ ಸ್ವಾತಂತ್ರ್ಯದ ನಂತರ 1947-48ರ ಭಾರತ ಪಾಕಿಸ್ತಾನ ಯುದ್ಧದ ತರುವಾಯ 01 ಜನವರಿ 1949ರಲ್ಲಿ ಯುದ್ಧ ವಿರಾಮವನ್ನು ಘೋಷಿಸಲಾಯಿತು ಹಾಗೂ ಭಾರತೀಯ ಸೇನೆಯ ಬ್ರಿಟಿಷ್ ಸೇನಾಧಿಕಾರಿಯದ ಕಮಾಂಡರ್ ಇನ್ ಚೀಫ್, ಜನರಲ್ ಫ್ರಾನ್ಸಿಸ್ ಬುಚರ್ ರವರಿಂದ ಭಾರತೀಯ ಸೇನಾಧಿಕಾರಿ ಜನರಲ್ ಕೆ ಎಂ ಕಾರ್ಯಪ್ಪ ರವರಿಗೆ ಅಧಿಕಾರವನ್ನು ಹಸ್ತಾಂತರಿಸಲಾಯಿತು. ಅಂದು ಸ್ವಾತಂತ್ರ್ಯದ ನಂತರ ಪಾಕಿಸ್ತಾನವು ಲಕ್ಷ ದ್ವೀಪವನ್ನು ಕಬಳಿಸಲು ಪ್ರಯತ್ನಿಸುತ್ತಿರುವುದನ್ನು ಅರಿತ ಸರದಾರ ವಲ್ಲಭಭಾಯಿ ಪಟೇಲ್ ರವರು ತಮ್ಮ ಮುಂದಾಲೋಚನೆಯಿಂದ ಆ ದ್ವೀಪದಲ್ಲಿ ಭಾರತದ ರಾಷ್ಟ್ರ ಧ್ವಜವನ್ನು ಹಾರಿಸುವಲ್ಲಿ ಯಶಸ್ವಿಯಾದರು. ಇಂದು ಸ್ವತಂತ್ರ ದ್ವಿಪ ರಾಷ್ಟ್ರವಾಗಿರುವ ಮಾಲ್ದಿವ್ಸ್ ಅನ್ನು ಒಂದು ಸಮಯದಲ್ಲಿ ವೈರಿಗಳಿಂದ ಭಾರತವು ರಕ್ಷಿಸಿತು, ಆದರೆ ಇಂದು ಭಾರತದ ವಿರುದ್ಧವೇ ಗುಡುಗುತ್ತಿದೆ. ನಮ್ಮ ಸುತ್ತಮುತ್ತಲಿನ ನೆರೆ ರಾಷ್ಟ್ರಗಳಲ್ಲಿ ಭೂತಾನ್ ರಾಷ್ಟ್ರವನ್ನು ಹೊರತುಪಡಿಸಿ, ವೈರಿ ದೇಶಗಳಲ್ಲದಂತೆ ವರ್ತಿಸುತ್ತಿರುವ ದೇಶಗಳು ಸಹ ವೈರಿ ದೇಶಗಳ ತೆರೆಮರೆ ಕಪಟತನದಿಂದ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ರಾಷ್ಟ್ರದೊಂದಿಗೆ ವೈಶ್ಯಮ್ಯವನ್ನು ತೋರ್ಪಡಿಸುತ್ತಿವೆ. ಇವೆಲ್ಲವನ್ನೂ ಮೆಟ್ಟಿ ನಿಲ್ಲುತ್ತಾ ನಮ್ಮ ದೇಶವು ಇಂದು ಮುಂದುವರೆದ ರಾಷ್ಟ್ರಗಳತ್ತ ಮುಖ ಮಾಡಿ ನಿಂತಿದೆ ಎಂದು ಬಣ್ಣಿಸಿದರು. ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರಾದ ಡಾಕ್ಟರ್ ಸಿ ಎ ಹಿರೇಮಠ್ ರವರು ಮಾತನಾಡಿನ ಸುರಕ್ಷತೆಯಲ್ಲಿ ಸೈನ್ಯದ ಮಹತ್ವವನ್ನು ವಿವರಿಸಿದರೂ ಹಾಗೂ ಕೇಂದ್ರ ರಕ್ಷಣಾ ಇಲಾಖೆಯಿಂದ ಶಿವಮೊಗ್ಗ ನಗರಕ್ಕೆ ತಂದಿರುವ ನಿಷ್ಕ್ರಿಯ ಯುದ್ಧ ಟ್ಯಾಂಕ್ ನ ಪ್ರತಿಷ್ಠಾಪನೆಗೆ ಸೂಕ್ತ ಕ್ರಮಕ್ಕಾಗಿ ಕೋರಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಮಾಜಿ ಸೈನಿಕರ ಸಂಘ (ರಿ), ಶಿವಮೊಗ್ಗ ಸಂಘಟನೆಯ ಅಧ್ಯಕ್ಷರಾದ ಶ್ರೀ ಪಿವಿ ಕೃಷ್ಣಾರೆಡ್ಡಿ, ಕಾರ್ಯದರ್ಶಿಗಳಾದ ಶ್ರೀ ಉಮೇಶ್ ಬಾಪಟ್, ಪದಾಧಿಕಾರಿಗಳಾದ ಶ್ರೀ ವೆಂಕಟೇಶರಾವ್, ಶ್ರೀ ಸತ್ಯನಾರಾಯಣ ಎಚ್ ಕೆ, ಶ್ರೀ ಉದಯ ಕೆ ಎಸ್, ಶ್ರೀ ಉಮೇಶ್ ಜಿ, ಶ್ರೀ ನೇಮೋಜಿ, ಶ್ರೀ ವಿ ಎ ನ್ ಮೂರ್ತಿ, ಶ್ರೀ ಶ್ರೀನಿವಾಸ ರೆಡ್ಡಿ, ಶ್ರೀ ರಾಜೇಶ್ ಭಟ್, ಶ್ರೀ ಶ್ರೀನಾಥ್, ಶ್ರೀ ರಘುನಾಥ್, ಶ್ರೀ ಗೋವಿಂದರಾಜು, ಶ್ರೀ ಮಹೇಶ್ ಡಿ.ಕೆ, ಶ್ರೀ ಚಂದ್ರಪ್ಪ, ಶ್ರೀ ತಮ್ಮಯ್ಯ, ಶ್ರೀ ಜಯಾನಂದ್ ಮತ್ತು ಇನ್ನೂ ಹಲವರು ಮಾಜಿ ಸೈನಿಕರು ತಮ್ಮ ಪರಿವಾರದೊಂದಿಗೆ ಭಾಗವಹಿಸಿದ್ದರು.
إرسال تعليق