ಶಿವಮೊಗ್ಗ: ಶಿಮೂಲ್ ನಿಂದ ಹಾಲಿನ ಖರೀದಿ ದರ ಪದೇ ಪದೇ ಇಳಿಕೆ; ಶಿವಮೊಗ್ಗದ ಶಿಮುಲ್ ಕಚೇರಿ ಮುಂದೆ ರೈತರ ಪ್ರತಿಭಟನೆ.!

 ಶಿಮೂಲ್ ನಿಂದ ಹಾಲಿನ ಖರೀದಿ ದರ ಪದೇ ಪದೇ ಇಳಿಕೆ. ದರ ಇಳಿಕೆ ಖಂಡಿಸಿ, ಶಿವಮೊಗ್ಗದಲ್ಲಿ ಹಾಲು ಉತ್ಪಾದಕರ ಪ್ರತಿಭಟನೆ . ಶಿವಮೊಗ್ಗದ ಶಿಮುಲ್ ಕಚೇರಿ ಮುಂದೆ ರೈತರ ಪ್ರತಿಭಟನೆ. ಶಿಮೂಲ್- ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ.


ಶಿವಮೊಗ್ಗದ ಮಾಚೇನಹಳ್ಳಿಯಲ್ಲಿರುವ ಶಿಮೂಲ್ ಆಡಳಿತ ಕಚೇರಿ ಹಾಗೂ ಡೈರಿ. ರಸ್ತೆಯ ಮೇಲೆ ಹಾಲು ಸುರಿದು ರೈತರ ಪ್ರತಿಭಟನೆ. ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ನೂರಾರು ರೈತರ ಪ್ರತಿಭಟನೆ. ಎನ್ ಹೆಚ್ 206 - ಬಿ.ಹೆಚ್. ರಸ್ತೆ ತಡೆದು ಪ್ರತಿಭಟನೆ.

ರೈತರ ಪ್ರತಿಭಟನೆಯಿಂದ ಟ್ರಾಫಿಕ್ ಜಾಮ್- ಸಾಲುಗಟ್ಟಿ ನಿಂತ ವಾಹನಗಳು. ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗದಿಂದ ಆಗಮಿಸಿರುವ ಹಾಲು ಉತ್ಪಾದಕರು. ಶಿಮುಲ್ ಆಡಳಿತ ಮಂಡಳಿ ವಿರುದ್ಧ ಹಾಲು ಉತ್ಪಾದಕರ ಆಕ್ರೋಶ. ಕಳೆದ ಕೆಲ ತಿಂಗಳಲ್ಲಿ 3.75 ರೂ. ನಷ್ಟು ರೈತರಿಂದ ಹಾಲು ಖರೀದಿ ದರ ಇಳಿಸಿರುವ ಶಿಮೂಲ್. ಶಿಮೂಲ್ ಕಛೇರಿಯ ಎದುರು ಪೊಲೀಸ್ ಬಿಗಿ ಭದ್ರತೆ.

Post a Comment

أحدث أقدم