ಶಿವಮೊಗ್ಗ : ಸುಲಿಗೆ ಪ್ರಕರಣಗಳ ಆರೋಪಿ ಮತ್ತು ಮಾಲು ಪತ್ತೆ; ಒಟ್ಟು 5,92,370/- ಮೌಲ್ಯದ ವಸ್ತು ವಶ.

 ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ  ಸುಲಿಗೆ ಪ್ರಕರಣಗಳ ಆರೋಪಿ ಮತ್ತು ಮಾಲು ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ ಕೆ, ಐ.ಪಿ.ಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ,  ಶ್ರೀ ಅನಿಲ್ ಕುಮಾರ್ ಭೂಮಾರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1  ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಕಾರಿಯಪ್ಪ ಎ.ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶದಲ್ಲಿ  ಶ್ರೀ ಬಾಲರಾಜ್ ಬಿ ಪೊಲೀಸ್ ಉಪಾಧೀಕ್ಷಕರು  ಶಿವಮೊಗ್ಗ-ಎ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ, ಶ್ರೀ ಮಂಜುನಾಥ್.ಬಿ, ಪಿಐ ತುಂಗಾನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ , ಶ್ರೀ ಶಿವಪ್ರಸಾದ್ ವಿ. ಪಿಎಸ್ಐ,  ಶ್ರೀ ಮಂಜುನಾಥ್ ಪಿ.ಎಸ್.ಐ,  ಶ್ರೀ ರಘುವೀರ್ ಎಮ್ ಪಿ.ಎಸ್.ಐ,  ಶ್ರೀ ಕುಮಾರ ಕೂರಗುಂದ  ಪಿ.ಎಸ್.ಐ,  ಶ್ರೀ ದೂದ್ಯಾನಾಯ್ಕ ಪಿ.ಎಸ್.ಐ,  ಶ್ರೀ ಮನೋಹರ್ ಎ.ಎಸ್.ಐ, ಮತ್ತು  ಸಿಬ್ಬಂದಿಗಳಾದ ಹೆಚ್ಸಿ ಕಿರಣ್ ಮೋರೆ, ಅರುಣ್ ಕುಮಾರ, ಮೋಹನ್ ಕುಮಾರ್, ಪುನೀತ, ಸಿಪಿಸಿ ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ಲಂಕೇಶ್ ಕುಮಾರ್, ಕಾಂತರಾಜ್, ಅರಿಹಂತ ಶಿರಹಟ್ಟಿ, ಹರೀಶ್ ಎಮ್.ಜಿ, ರವರಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ. 


  ಸದರಿ ತನಿಖಾ ತಂಡವು ಆರೋಪಿತರಾದ 1) ಮಹಮದ್ ತಬರಕ್ ವುಲ್ಲಾ @ ತಪ್ಪಣ್ಣ, 22 ವರ್ಷ, ಕೆಳಗಿನ ತುಂಗಾನಗರ, ಶಿವಮೊಗ್ಗ ಮತ್ತು 2) ಸೈಯದ್ ಹುಸೇನ್ @ ಶೇಟಾ, 23 ವರ್ಷ,  ಕೆಳಗಿನ ತುಂಗಾನಗರ  ಶಿವಮೊಗ್ಗ ರವರುಗಳನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ವರದಿಯಾದ 03 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳು, 02 ಸುಲಿಗೆ ಪ್ರಕರಣಗಳು, 02 ಮನೆಗಳ್ಳತನ ಪ್ರಕರಣಗಳು,  ಜಯನಗರ ಪೊಲೀಸ್ ಠಾಣೆಯಲ್ಲಿ ವರದಿಯಾದ 01 ಸುಲಿಗೆ ಪ್ರಕರಣ, ವಿನೋಬನಗರ ಪೊಲೀಸ್ ಠಾಣೆಯಲ್ಲಿ ವರದಿಯಾದ 01 ಸುಲಿಗೆ ಪ್ರಕರಣ ಮತ್ತು ಅರಸಿಕೆರೆ ಪೊಲೀಸ್ ಠಾಣೆಯಲ್ಲಿ ವರದಿಯಾದ 01 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣ ಸೇರಿದಂತೆ ಒಟ್ಟು 10 ಪ್ರಕರಣಗಳಿಗೆ ಸಂಬಂಧಿಸಿದ 1) ಅಂದಾಜು ಮೌಲ್ಯ 4,18,000/- ರೂಗಳ 76 ಗ್ರಾಂ ತೂಲದ ಬಂಗಾರದ ಆಭರಣಗಳು, 2) ಅಂದಾಜು ಮೌಲ್ಯ 10,000/- ರೂಗಳ ಮೊಬೈಲ್ ಫೋನ್ 3) ಅಂದಾಜು ಮೌಲ್ಯ 1,50,000/- ರೂಗಳ 04 ದ್ವಿಚಕ್ರ ವಾಹನಗಳು ಮತ್ತು 4) 14,370/- ರೂ ನಗದು ಹಣ ಸೇರಿ ಒಟ್ಟು 5,92,370/- ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.  

ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Post a Comment

أحدث أقدم