ಸಿದ್ದರಾಮಯ್ಯ ರಾಜೀನಾಮೆ ನೀಡಲಿ-ಈಶ್ವರಪ್ಪ

 ಜೆಡಿಎಸ್ ನ ನಿಖಿಲ್ ಕುಮಾರ್ ಸ್ವಾಮಿ ಮತ್ತು ಮಾಜಿ ಸಿಎಂ ಕುಮಾರ್ ಸ್ವಾಮಿ ಅರು ದೆಹಲಿಯಲ್ಲಿ ತಾವು ಸ್ಪರ್ಧಿಸದೆ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷವನ್ನ 28 ಕ್ಕೆ 28 ಸ್ಥಾನ ಗೆಲ್ಲಿಸುವುದಾಗಿ ಹೇಳಿರುವುದು ಸ್ವಾಗತ ಎಂದು ಮಾಜಿ ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಅಲ್ಪಸಂಖ್ಯಾತ, ದಲಿತ ಮತ್ತು ಹಿಂದುಳಿದ ಜನಾಮಗವನ್ನ ಕಾಂಗ್ರೆಸ್ ದುರುಪಯೋಗ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಬರ ಬಂದಿದೆ. ಬರ ಬಂದರೂ ಪರಿಹಾರಕ್ಕಾಗಿ ಕೇಂದ್ರ ಸರ್ಕಾರವ್ನ ಕಾಯ್ತಾ ಇದ್ದರೂ ಮುಸ್ಲೀರಿಗೆ 10 ಸಾವಿರ ಕೋಟಿ ರೂ. ಹಣ ನೀಡುವುದಾಗಿ ಘೋಷಿಸಿರುವುದು ದುರಂತ ಎಂದರು.


ಇಂಡಿಯಾದ ಪಿಎಂ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರನ್ನ ಬೆಂಬಲಿಸಿರುವುದು ಕಾಂಗ್ರೆಸ್ ತುಟಿ ಬಿಚ್ಚಿಲ್ಲ. ಇದು ದಲಿತರಿಗೆ ಮಾಡುವ ದ್ರೋಹ ಎಂದು ದೂರಿದರು. ರಾಜ್ಯದ ಮಠಾಧಿತಿಗಳ ಒಕ್ಕೂಟ ಜಾತಿ ಜನಗಣತಿಯನ್ನ ಬಿಡುಗಡೆ ಮಾಡಿ ಎಂದು ಸಿಎಂಗೆ ಮನವಿ ಮಾಡಿದ್ರು, ಸಿಎಂ ನವೆಂಬರ್ ನಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ನವೆಂಬರ್ ಮುಗಿದು ಡಿಸೆಂಬರ್ ಕೆಳೆಯುತ್ತಾ ಬಂತು ಯಾಬುದುಬಿಡುಗಡೆ ಆಗಿಲ್ಲ.‌ ನಾಳೆ ಬಾ ಎಂದು ಬೋರ್ಡ್ ಹಾಕಲಾಗಿದೆ. ಇದು ಒಬಿಸಿಗೆ ಮಾಡಿದ ಅನ್ಯಾಯ ಎಂದರು.

ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಆರಂಭದಲ್ಲಿ ಪ್ರೇರಣೆ ಕೊಟ್ಟಿತ್ತು. ಬಿಜೆಪಿ ಹಿಜಾಬ್ ಬೇಡ ಸಮವಸ್ತ್ರ ಧರಿಸಬೇಕೆಂದು ಆದೇಶಿಸಲಾಯಿತು. ಆದೇಶದ ವಿರುದ್ಧ ಹೈಕೋರ್ಟ್ ಗೆ ಮುಸ್ಲೀಂರೇ ಹೋದರು. ಹೈಕೋರ್ಟ್ ಸಮವಸ್ತ್ರ‌ಧರಿಸಲು ಆದೇಶಿತು. ಸುಪ್ರೀಂ ಗೆ ಹೋಗಲಾಯಿತು. ಸುಪ್ರೀಂ ನಲ್ಲಿ ವ್ಯಜ್ಯಾ‌ಬಾಕಿ ಉಳಿದಿದೆ.

ಹಿಜಬ್ ಹಿಂತೆಗೆದರೆ ಕೋರ್ಟ್ ನ ಆದೇಶದ ಹುಲ್ಲಂಘನೆ ಆಗಲಿದೆ. ಸಿಎಂ ಅವರ ಜಿಜಬ್ ಹಿಂತಗೆದುಕೊಳ್ಳುವ ಘೋಷಣೆ ಕಾನೂ ಸಂಘರ್ಷಕ್ಕೆ ಎಡೆಮಾಡಕೊಡುತ್ತದೆ. ಹಾಗಾಗಿ ರಾಜೀನಾಮೆ ನೀಡಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.

ಈ ಸರ್ಕಾರ ಬಹಳ ದಿನ ಉಳಿಯಲ್ಲ. ಡಿಕೆಶಿ‌ ಆರಂಭದಲ್ಲೇ ಮಲ್ಲಿಕಾರ್ಜುನ ಖರ್ಗೆಯರನ್ನ‌ಸಿಎಂ ಮಾಡಿ ಎಂದು ಹೇಳಿದ್ದರು. ಸದನದಲ್ಲಿ ಡಿಕೆಶಿ ವಿರುದ್ಧದ ಪ್ರಕರಣವನ್ನ‌ ಸಿಬಿಐ ನಿಂದ ಹಿಂಪಡೆಯಲು ತೀರ್ಮಾನಿಸಿದೆ. ಈ ಅಧಿಕಾರ ಸರ್ಕಾರಕ್ಕೆ ಇಲ್ಲ. ಭ್ರಷ್ಠಾಚಾರ ಮಿತಿ ಮೀರಿದೆ. ಗುತ್ತಿಗೆದಾರ, ಸಂಸತ್ ಸದಸ್ಯರು ಹೊರಬರುತ್ತಿದ್ದಾರೆ. ಸಿಬಿಐ ಮೇಲೆ‌ಕಳ್ಳರ ಗ್ಯಾಂಗ್ ಗೆ ಭಯ ಹೆಚ್ಚಿಗೆ ಇದೆ ಎಂದು ದೂರಿದರು.

ನರೇಂದ್ರ ಮೋದಿ ಎಲ್ಲಿ ಚಿಲ್ಲರೆ ಸಿದ್ದರಾಮಯ್ಯ‌ಎಲ್ಲಿ ಎಂದು ಆರೋಪಿಸಿದ ಈಶ್ವರಪ್ಪ, ಸಿದ್ದರಾಮಯ್ಯನವರು ಬರವಿದ್ದಾಗ ಐಷರಾಮಿ ಫ್ಲೈಟ್ ನಲ್ಲಿ ಪ್ರಯಾಣಿಸಿದ್ದಾರೆ. ಸಿದ್ದರಾಮಯ್ಯ ತಾವು ಪ್ರಯಾಣ ಮಾಡಿ ನರೇಂದ್ರ ಮೋದಿಯವರ ಬಗ್ಗೆ ಮಾತನಾಡಿರುವುದು ಸರಿಯಲ್ಲ. ಸಿದ್ದರಾಮಯ್ಯ ಚಾಮುಂಡೇಶ್ವರಿ ದೇವಿಗೆ ಪೂಜೆ ಮಾಡಿದ್ದಾರೆ. ಹಾಗಾದರೆ ಉಡುಪಿ ಕೃಷ್ಣನ ದರ್ಶನಕ್ಕೆ ಯಾಕೆ ಗೊತ್ತಿಲ್ಲ. ಕೇಸರಿ ಪೇಟ ಯಾಕೆ ತೆಗೆದಿಟ್ಟರು

ಧರ್ಮಗಳಿಗೆ ಮೋಸ ಮಾಡಬಹುದು ದೇವರಿಗಲ್ಲ. ದೇವರು ಎಂದರೆ ಜನ, ಈಗ ಮುಸ್ಲೀಂರನ್ನ ಸಿದ್ದರಾಮಯ್ಯ ಹಿಡಿದುಕೊಂಡಿದ್ದಾರೆ. ಮುಸ್ಲೀಂ ರಾಷ್ಟ್ರಗಳಲ್ಲಿ ಹಿಜಾಬ್ ಬೇಡ ಎಂದು ಬೆಂಕಿ ಹಚ್ಚಿಕೊಂಡಿರುವ ಉದಾಹರಣೆಗಳಿವೆ. ಆದರೆ ರಾಜ್ಯದಲ್ಲಿ ಹಿಜಾಬ್ ಬೇಕು ಎನ್ನುತ್ತಿರುವ ಸಿದ್ದರಾಮಯ್ಯ‌ ಮುಸ್ಲೀಂರ ಉದ್ದಾರಕ ಎಂದು ಬಿಂಬಿಸಲು ಹೊರಿರುವುದೇಕೆ ಎಂದು ದೂರಿದರು.

Post a Comment

أحدث أقدم