ಶಿವಮೊಗ್ಗ :ಪೊಲೀಸ್ ಇಲಾಖಾ ವತಿಯಿಂದ, ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಕುರಿತು ಜಾಗೃತಿ ಕಾರ್ಯಕ್ರಮ.

   ಈ ದಿನ ದಿನಾಂಕಃ 04-12-2023 ರಂದು ಸಂಜೆ ಭದ್ರಾವತಿ ನಗರದ ಅಂಡರ್ ಬ್ರಿಡ್ಜ್ ಮತ್ತು ರಂಗಪ್ಪ ಸರ್ಕಲ್ ಹತ್ತಿರ ಪೊಲೀಸ್ ಇಲಾಖಾ ವತಿಯಿಂದ, ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಶ್ರೀ ಮಿಥುನ್ ಕುಮಾರ್, ಜಿ.ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ,  ಶ್ರೀ ನಾಗರಾಜ್, ಪೊಲೀಸ್ ಉಪಾಧಿಕ್ಷಕರು, ಭದ್ರಾವತಿ ಉಪ ವಿಭಾಗ, ಶ್ರೀ ಜಗದೀಶ್ ಹಂಚಿನಾಳ್ ಪಿಐ ಭದ್ರಾವತಿ ಗ್ರಾಮಾಂತರ ಠಾಣೆ, ಮತ್ತು ಶ್ರೀಶೈಲ್, ಸಿಪಿಐ ಭದ್ರಾವತಿ ನಗರ ವೃತ್ತ ರವರು ಸಾರ್ವಜನಿಕರ ಕುರಿತು ಮಾತನಾಡಿ ಈ ಕೆಳಕಂಡ ಸಲಹೆ ಮತ್ತು ಸೂಚನೆಗಳನ್ನು ನೀಡಿದರು. 



1) ದ್ವಿ ಚಕ್ರ ವಾಹನ ಸವಾರರು ತಮ್ಮ ಸುರಕ್ಷತೆಯ ದೃಷ್ಠಿಯಿಂದ ವಾಹನಗಳನ್ನು ಚಲಾಯಿಸುವಾಗ ಕಡ್ಡಾಯವಾಗಿ ತಲೆಗೆ ಸಂಪೂರ್ಣ ರಕ್ಷಣೆ ನೀಡುವ ಶಿರಸ್ತ್ರಾಣ (Full Helmet) ಅನ್ನು ಧರಿಸಿ ವಾಹನ ಚಲಾಯಿಸಿ.  

2) ಯಾವುದೇ ಸಂದರ್ಭದಲ್ಲಿ ಅಪಘಾತಗಳು ಜರುಗುವ ಸಂಭವವಿವುದರಿಂದ, ಸ್ವಲ್ಪ ದೂರದ ಪ್ರಯಾಣಕ್ಕೆ ಹೆಲ್ಮೆಟ್ ನ್ನು ಧರಿಸುವುದು ಬೇಡವೆಂದು ನಿರ್ಲಕ್ಷತನ ತೋರದೇ, ಕಡ್ಡಾಯವಾಗಿ ನಿಮ್ಮ ಸುರಕ್ಷತಾ ದೃಷ್ಟಿಯಿಂದ ತಲೆಗೆ ಸಂಪೂರ್ಣ ರಕ್ಷಣೆ ನೀಡುವ Full Helmet ಅನ್ನು ಧರಿಸಿ.

3) ದ್ವಿ ಚಕ್ರ ವಾಹನ ಸವಾರರು Half Helmet (ಅರ್ಧ ಹೆಲ್ಮೆಟ್) ಗಳನ್ನು ಧರಿಸಿ ವಾಹನ ಚಲಾಯಿಸಿದ್ದಲ್ಲಿ, ಅಫಘಾತವಾದಾಗ Half Helmet (ಅರ್ಧ ಹೆಲ್ಮೆಟ್) ಗಳಿಂದ ನಿಮ್ಮ ತಲೆಗೆ ಯಾವುದೇ ಸುರಕ್ಷತೆ ಇಲ್ಲದೇ ಹೆಚ್ಚಿನ ಪೆಟ್ಟಾಗುವ ಸಂಭವವಿರುತ್ತದೆ. ಆದ್ದರಿಂದ ಕಡ್ಡಾಯವಾಗಿ ತಲೆಗೆ ಸಂಪೂರ್ಣ ರಕ್ಷಣೆ ನೀಡುವ ಐಎಸ್ಐ ಪ್ರಮಾಣಿತ ಹೆಲ್ಮೆಟ್  ಗಳನ್ನೇ ಧರಿಸುವುದು. 

4) ಯಾರೇ ಆಗಲಿ ರಸ್ತೆ ಅಫಘಾತಕ್ಕೆ ಒಳಗಾದಾಗ ಅವರ ಜೊತೆಗೆ, ಅವರ ಕುಟುಂಬದ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ನಮ್ಮ ಮತ್ತು ಕುಟುಂಬದ ರಕ್ಷಣೆಯ ದೃಷ್ಠಿಯಿಂದ ಸಂಚಾರ ನಿಯಮಗಳನ್ನು ಪಾಲಿಸಿ ಮತ್ತು ಸುರಕ್ಷಿತವಾಗಿ ವಾಹನ ಚಲಾಯಿಸುವುದು. 

5) ಈ ಸಂದರ್ಭದಲ್ಲಿ Half Helmet (ಅರ್ಧ ಹೆಲ್ಮೆಟ್) ಗಳನ್ನು ಧರಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ, ವಾಹನ ಸವಾರರು ತಾವು ಧರಿಸಿದ್ದ  Half Helmet (ಅರ್ಧ ಹೆಲ್ಮೆಟ್) ಗಳನ್ನು  ತಾವಾಗಿಯೇ ತೆಗೆದುಕೊಟ್ಟರು.

6)ಮುಂದಿನ  ದಿನಗಳಲ್ಲಿ Half Helmet ಧರಿಸಿ ದ್ವಿ ಚಕ್ರ ವಾಹನ ಚಲಾಯಿಸುವ  ವಾಹನ ಸವಾರರ ವಿರುದ್ಧ  ಐಎಂವಿ ಕಾಯ್ದೆಯಡಿಯಲ್ಲಿ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದರು.

ಸದರಿ ಜಾಗೃತಿ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಕುಮಾರ್ ಮಾನೆ, ಪಿ.ಎಸ್.ಐ, ಹೊಸಮನೆ ಪೊಲೀಸ್ ಠಾಣೆ,  ಶ್ರೀ ಶರಣಪ್ಪ, ಪಿ.ಎಸ್.ಐ ಹಳೆನಗರ ಪೊಲೀಸ್ ಠಾಣೆ, ಶ್ರೀ ರಮೇಶ್ ಪಿ.ಎಸ್.ಐ ನ್ಯೂ ಟೌನ್ ಪೊಲೀಸ್ ಠಾಣೆ, ಶ್ರೀ ಜಯ್ಯಪ್ಪ, ಪಿ.ಎಸ್.ಐ, ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ,  ಭದ್ರಾವತಿ ನಗರದ ಪೊಲಿಸ್ ಉಪ ನಿರೀಕ್ಷಕರು ಉಪಸ್ಥಿತರಿದ್ದರು.

Post a Comment

أحدث أقدم