ಶಿವಮೊಗ್ಗ: ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮೆಸ್ಕಾಂ ಅಧಿಕಾರಿ.!

ಸದ್ಯದ ಪರಿಸ್ಥಿತಿಯಲ್ಲಿ  ಲಂಚ ಪಡೆದು ಕೆಲಸ ಮಾಡಿಕೊಡುವುದು ಎಲ್ಲಾ ಕಡೆ  ಸಲಿಸಾಗಿ ನಡೆಯುತ್ತಿದೆ. ಅಂತದ್ದೆ ಒಂದು ಪ್ರಕರಣ ಆನವಟ್ಟಿ ಯಲ್ಲಿ ನಡೆದಿದೆ.   ಶಿವಮೊಗ್ಗ ಜಿಲ್ಲೆಯ ಬೆಟ್ಟದಕೂರ್ಲಿ ಗ್ರಾಮದಲ್ಲಿ   ಕಳೆದ 6 ವರ್ಷಗಳಿಂದ ಕೆಇಬಿ ಇಲಾಖೆಯಲ್ಲಿ ಕ್ಲಾಸ್-1 ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಆಗಿ ಪ್ರದೀಪ್. ಜಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 15-09-2023 ರಂದು ಸೊರಬ ತಾಲ್ಲೂಕು ಕುಪ್ಪಗಡ್ಡೆ ಗ್ರಾಮ ಮಂಜುನಾಥ್ ಬಿನ್ ಕರಿಯಪ್ಪ ಇವರ ಹೆಸರಿನಲ್ಲಿ ಹಾಗೂ ಅದೇ ಗ್ರಾಮದ ಜಿ. ರಾಘವೇಂದ್ರ ಬಿನ್ ಗೋಪಾಲಕೃಷ್ಣ ಇವರುಗಳ ಹೆಸರಿನಲ್ಲಿ ಶೀಘ್ರ ಸಂಪರ್ಕ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಜೊತೆಗೆ ಶಿವಲಿಂಗಪ್ಪ ಬಿನ್ ನಾಗಪ್ಪ ಮತ್ತು ಶೇಖರಪ್ಪ ಬಿನ್ ನಾಗಪ್ಪ ಮೂಡಿದೊಡ್ಡಿಕೊಪ್ಪ ಗ್ರಾಮ ಇವರುಗಳಿಗೆ ಜಿ.ಎಸ್.ಎಂ. ಯೋಜನೆಯಡಿಯಲ್ಲಿ 6 ಹೆಚ್ ಪಿ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಅರ್ಜಿಯನ್ನು ಹಾಕಿದ್ದು, ಅದೇ ರೀತಿ ಗಂಗಾಧರ ಬಿನ್ ಬಾಲಚಂದ್ರಗೌಡ, ತರವಂದ ಗ್ರಾಮ ಮತ್ತು ಶಿವರುದ್ರಪ್ಪ ಬಿನ್ ಈರಪ್ಪ ಲಕ್ಕವಳಿ ಗ್ರಾಮ ಇವರುಗಳ 5 ಹೆಚ್ ಪಿ ಕೃಷಿ ಪಂಪ್ ಸೆಟ್ ಗೆ ಅಕ್ರಮ ಸಕ್ರಮ  ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ ವರ್ಕ್ ಆರ್ಡರ್ ಆಗಿರುತ್ತದೆ.


ಎಲ್ಲಾ ಕಾಮಗಾರಿಗಳ ಲೈನ್ ವರ್ಕ್ ಮುಕ್ತಾಯಗೊಂಡಿದ್ದು, ಅವುಗಳಿಗೆ 25 ಕೆವಿಎ ಟಿಸಿಗಳನ್ನು ಅಲವಡಿಸುವ ಕೆಲಸ ಬಾಕಿಯಿದ್ದ ಕಾರಣ ಅದರ ಬಗ್ಗೆ ಮಾತನಾಡಲು ಪ್ರದೀಪ್. ಜಿ ಅವರು ಮಧ್ಯಾನ 1.30 ಕ್ಕೆ ಆನವಟ್ಟಿ ಮೆಸ್ಕಾಂ ಕಛೇರಿಗೆ ಹೋಗಿ ಎ.ಇ.ಇ. ಜಿ. ರಮೇಶ್ ಅವರನ್ನು ಭೇಟಿ ಮಾಡಿ ಒಟ್ಟು 07 ಟಿ.ಸಿ ಗಳನ್ನು ಕೊಡಲು ಕೇಳಿದಾಗ, ಅವರು ಪ್ರದೀಪ್ ಅವರ ಬಳಿ ರೂ 20,000 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿರುವುದು ನಾಚಿಕೆ ಗೇಡಿನ ಸಂಗತಿಯಾಗಿದೆ!

ಇದಕ್ಕೆ ವಿರೋಧಿಯಾಗಿದ್ದ ಪ್ರದೀಪ್ ಶಿವಮೊಗ್ಗ  ಲೋಕಾಯುಕ್ತಾ ಕಛೇರಿಗೆ ದೂರು ಕೊಟ್ಟ ಮೇರೆಗೆ ಕ.ಲೋ., ಶಿವಮೊಗ್ಗ ಠಾಣೆ ಗುನ್ನೆ ನಂ 11/2023, ಕಲಂ 7(ಎ) ಪಿ.ಸಿ ಕಾಯ್ದೆ 1988 (ತಿದ್ದುಪಡಿ ಕಾಯ್ದೆ-2018) ರಲ್ಲಿ ದಿನಾಂಕ 21-12-2023 ರಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

ಈ ಮಾಹಿತಿ ದೊರೆತ ಕಾರಣ ಇಂದು ಜಿ. ರಮೇಶ್, ಎ.ಇ.ಇ ಮೆಸ್ಕಾಂ, ಆನವಟ್ಟಿ, ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಯ ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಕಛೇರಿಯಲ್ಲಿ ಪ್ರದೀಪ್. ಜಿ ಅವರಿಂದ 20,000 ಸಾವಿರ ಲಂಚ ಪಡೆಯುವಾಗ ಅಧಿಕಾರಿಗಳ  ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ! ಇವರನ್ನು ಬಂಧಿಸಿದ್ದು ಇವರಿಂದ ಪ್ರಕರಣಕ್ಕೆ ಸಂಭಂಧಿಸಿದ 20,000 ಸಾವಿರ ಲಂಚದ ಹಣವನ್ನು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ತನಿಖೆಯನ್ನು ಶ್ರೀ ಹೆಚ್.ಎಸ್.ಸುರೇಶ್, ಪಿಐ-1, ಕ.ಲೋ ಶಿವಮೊಗ್ಗರವರು ಕೈಗೊಂಡಿದ್ದಾರೆ..

ಆಪಾದಿತ ಶ್ರೀ ಜಿ. ರಮೇಶ್, ಎ.ಇ.ಇ, ಮೆಸ್ಕಾಂ ಆನವಟ್ಟಿ, ಸೊರಬ ತಾಲ್ಲೂಕುಇ ಶಿವಮೊಗ್ಗ ಜಿಲ್ಲೆ ಇವರನ್ನು ತನಿಖಾಧಿಕಾರಿಗಳಾದ ಶ್ರೀ ಹೆಚ್.ಎಸ್, ಸುರೇಶ್, ಪಿಐ, ಇವರು ದಸ್ತಗಿರಿ ಮಾಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಶ್ರೀ ಎನ್. ವಾಸುದೇವರಾಮ, ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ಇವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸ್ ಉಪಾಧೀಕ್ಷಕರಾದ ಶ್ರೀ ಉಮೇಶ ಈಶ್ವರ ನಾಯ್ಕ ಇವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿರುತ್ತದೆ.

ಟ್ರ್ಯಾಪ್ ಕಾಲಕ್ಕೆ ಶಿವಮೊಗ್ಗ ಲೋಕಾಯುಕ್ತ ಕಛೇರಿಯ ಪೊಲೀಸ್ ಸಿಬ್ಬಂಧಿಗಳಾದ ಶ್ರೀ ಮಹಂತೇಶ್,  ಸಿ್‌ಎಚ್.ಸಿ., ಶ್ರೀ ಶ್ರೀ ಸುರೇಂದ್ರ, ಸಿ.ಹೆಚ್.ಸಿ., ಶ್ರೀ ಬಿ.ಟಿ. ಚನ್ನೇಶ, ಸಿಪಿಸಿ, ಶ್ರೀ ಪ್ರಶಾಂತ್ ಕುಮಾರ್, ಸಿಪಿಸಿ, ಶ್ರೀ ಅರುಣ್ ಕುಮಾರ್, ಸಿಪಿಸಿ, ಶ್ರೀ ದೇವರಾಜ, ಸಿಪಿಸಿ, ಶ್ರೀ ರಘುನಾಯ್ಕ್, ಶ್ರೀಮತಿ ಪುಟ್ಟಮ್ಮ, ಮಪಿಸಿ, ಶ್ರೀ ಕೆ.ಸಿ. ಜಯಂತ, ಎಪಿಸಿ, ಶ್ರೀ ಗಂಗಾಧರ, ಎಪಿಸಿ, ಶ್ರೀ ವಿ. ಗೋಪಿ, ಎಪಿಸಿ ಮತ್ತು ಶ್ರೀ ಪ್ರದೀಪ್ ಕುಮಾರ್, ಎಪಿಸಿ, ಇವರುಗಳು ಹಾಜರಿದ್ದು ಕರ್ತವ್ಯ  ನಿರ್ವಹಿಸಿದ್ದಾರೆ.



Post a Comment

أحدث أقدم