ಕಾಸಿಗಾಗಿ ಹುದ್ದೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಜೆಡಿಎಸ್ ಅಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ನಡುವಿನ ಮಾತಿನ ಸಮರ ತಾರಕಕ್ಕೇರಿದ್ದು, ಸರ್ಕಾರಿ ಅಧಿಕಾರಿಗಳ ಒಂದೇ ವರ್ಗಾವಣೆಯಲ್ಲಿ ಹಣ ಪಡೆದಿರುವುದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್
ಕುಮಾರಸ್ವಾಮಿ ಮಾಡಿರುವ ಆರೋಪಗಳನ್ನು ಅಲ್ಲಗಳೆದ ಸಿದ್ದರಾಮಯ್ಯ, ಬಿಜೆಪಿ ಪರವಾಗಿ ಕುಮಾರಸ್ವಾಮಿ ತಮ್ಮ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಎಂದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಕಣಕ್ಕಿಳಿಯಲಿವೆ. ಇಲ್ಲಿಯವರೆಗೆ ತಮ್ಮ ವಿರುದ್ಧ ಯಾವುದೇ ಸುಳ್ಳು ಆರೋಪಗಳನ್ನು ಕುಮಾರಸ್ವಾಮಿ ಸಾಬೀತುಪಡಿಸಿಲ್ಲ. ಅವರು ಯಾವುದಾದರೂ ದಾಖಲೆಗಳನ್ನು ನೀಡಿದ್ದಾರೆಯೇ? ಅವರು ಹಿಟ್ ಅಂಡ್ ರನ್ ಕೇಸ್ ಆಗಿದ್ದು, ಬಿಜೆಪಿಯವರ ಒತ್ತಾಯದ ಮೇರೆಗೆ ನನ್ನ ಮತ್ತು ಶಿವಕುಮಾರ್ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಇದಕ್ಕೂ ಮುನ್ನಾ ಕುಮಾರಸ್ವಾಮಿ, ಸಿದ್ದರಾಮಯ್ಯ ಮತ್ತು ವರುಣಾದ ಮಾಜಿ ಶಾಸಕ ಡಿವೈ ಯತೀಂದ್ರ ವಿರುದ್ಧ "ಹಣ ವರ್ಗಾವಣೆ" ವಿಚಾರದಲ್ಲಿ ತಮ್ಮ ವಾಗ್ದಾಳಿ ನಡೆಸಿದ್ದರು. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ನೀವು (ಸಿದ್ದರಾಮಯ್ಯ) ವರುಣಾ ಕ್ಷೇತ್ರವನ್ನು ನಿಮ್ಮ ಮಗನಿಗೆ (ಯತೀಂದ್ರ) ಹೊರಗುತ್ತಿಗೆ ನೀಡಿದ್ದೀರಾ? ವರ್ಗಾವಣೆ ಹಗರಣದ ಬಗ್ಗೆ ನೀವು ಮತ್ತು ನಿಮ್ಮ ಮಗ ಫೋನ್‌ನಲ್ಲಿ ಮಾತನಾಡಿರುವುದು ನಿಜವೇ? ”ಎಂದು ಕುಮಾರಸ್ವಾಮಿ ಇತ್ತೀಚೆಗೆ ವೈರಲ್ ಆಗಿದ್ದ ಯತೀಂದ್ರ ಅವರ ವೀಡಿಯೊವನ್ನು ಉಲ್ಲೇಖಿಸಿ ಪ್ರಶ್ನಿಸಿದ್ದರು.
ಈ ಕುರಿತು ಪ್ರತಿತ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ನೂರು ಬಾರಿ ಟ್ವೀಟ್ ಮಾಡಿದರೂ ಅವರಿಗೆ ಉತ್ತರಿಸುವ ಅಗತ್ಯವಿಲ್ಲ. ಮೊದಲೇ ಹೇಳಿದಂತೆ, ಅಧಿಕಾರಿಗಳ ವರ್ಗಾವಣೆಗೆ ಹಣ ವಿನಿಮಯದ ಒಂದೇ ಒಂದು ಪ್ರಕರಣ ನನ್ನ ವಿರುದ್ಧ ಸಾಬೀತಾದರೆ, ನನ್ನ ರಾಜಕೀಯ ಜೀವನದಿಂದ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದರು.
إرسال تعليق