ಶಿವಮೊಗ್ಗದ ಎರಡು ಸ್ಟೀಲ್ ಪೆಟ್ಟಿಗೆಯಲ್ಲಿ ಪತ್ತೆಯಾದ ಉಪ್ಪಿನ ರಹಸ್ಯವನ್ನ ಪೊಲೀಸರು ಬೇಧಿಸಿದ್ದಾರೆ. ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಿರೀಶ್ ಗೆ ಬಾಬಾ ಪರಿಚಯವಾಗಿದ್ದು ಒಂದು ಕೋಟಿ ರೂ.ಹಣವನ್ನ ಕೊಡಿಸುತ್ತೇನೆ ಐದು ಪರ್ಸೆಂಟ್ ಹಣ ಕೊಡಬೇಕು ಎಂದು ಹೇಳಿ ಬಾಬಾ ಈತನಿಂದ 2½ ಲಕ್ಷ ರೂ ಹಣ ಮುಂಗಡವಾಗಿ ಹಣ ಪಡೆದಿರುತ್ತಾರೆ. ಸ್ವಲ್ಪದಿನದ ನಂತರ ಬಾಬಾ ಗಿರೀಶನಿಗೆ ಪೆಟ್ಟಿಗೆ ಬಂದಿದೆ ಎರಡು ಪೆಟ್ಟಿಗೆಯಲ್ಲಿ ಎರಡು ಕೋಟಿ ಹಣವಿದೆ. ನಿನ್ನ ಜೊತೆಗೆ ಮತ್ತೋರ್ವನನ್ನ ಸೇರಿಸಿಕೊಳ್ಳಿ ಎರಡು ಕೋಟಿ ಹಣ ಇದೆ ಎಂದು ತಿಳಿಸಿದ್ದಾನೆ ಎಂದರು.
ಇದೇರೀತಿ ಪೆಟ್ಟಿಗೆಯಲ್ಲಿ ಹಣವಿದೆ ಎಂದು ನಂಬಿಸಿ ತಿಪಟೂರಿನ ಡಾಕ್ಟರ್ ಒಬ್ವರಿಗೆ ಈತ ಯಾಮಾರಿಸಿದ್ದ. ಘಟನೆ ಇದೇ ಘಟನೆಯ ರೀತಿ ನಡೆದಿತ್ತು. ಗಿರೀಶ್ ನನ್ನ ರೆಡಿ ಮಾಡಿದಂತೆ ಮತ್ತೋರ್ವ ಗೋವದಲ್ಲಿದ್ದ ರಾಜೇಶ್ ಜಾದವ್ ಗೆ ಹಣ ತೆಗೆದುಕೊಂಡು ಹೋಗಿ ಎಂದು ತಿಳಿಸಿ ಇಬ್ವರಿಗೂ ಶಿವಮೊಗ್ಗಕ್ಕೆ ಬರಲು ಹೇಳಿದ್ದಾರೆ ಎಂದರು.
ಅದೃಷ್ಠ ಎಂದರೆ ಇಬ್ಬರೂ ಬಾರದೆವಿರುವ ಕಾರಣ ಪೆಟ್ಟಿಗೆ ಇಲ್ಲೆ ಅನಾಥನಾಗಿ ಬಿದ್ದಿತ್ತು. ಇದನ್ನ ಕಂಡ ಶಿವಮೊಗ್ಗ ರೈಲ್ವೆ ನಿಲ್ದಾಣದ ಆಟೋಚಾಲಕರು ಜಯನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಪ್ರಕರಣವನ್ನ ಜಬೀವುಲ್ಲಾ ಮತ್ತು ಬಾಬಾ ಯನೆ ನಸ್ರುಲ್ಲಾರನ್ನ ಬಂಧಿಸಲಾಗಿದೆ ಎಂದು ತಿಳಿಸಿದರು. . ಇಂದು ಘಟನಾ ಸ್ಥಳಕ್ಕೆ ಮಹಜರ್ ಮಾಡಲಾಗಿದೆ.
ನಸ್ರುಲ್ಲಾರನ್ನ ಕರೆದುಕೊಂಡು ಬಂದು ಶಿವಮೊಗ್ಗದ ರೈಲ್ವೆ ನಿಲ್ದಾಣದ ಬಳಿ ಮಹಜರ್ ಮಾಡಲಾಗಿದೆ. ಸ್ಟೀಲ್ ಪೆಟ್ಟಿಗೆಯ ಪ್ರಕರಣ ಈ ಹಿಂದೆ ಎರಡು ಮೂರು ಪ್ರಕರಣಗಳು ನಡೆದಿದೆ. ರಾಜೇಶ್ ಕಾಮತ್ ಬಳಿಯೈ ಹಣ ಮತ್ತು ಚೆಕ್ ಪಡೆದುಕೊಂಡಿರುತ್ತಾರೆ. ಎರಡು ಪೆಟ್ಟಿಗೆಯನ್ನ ಮುಳಬಾಗಿಲಿನಲ್ಲಿ ಪಡೆದುಕೊಂಡು ಬಂದು ಗೋಣಿಚೀಲದಲ್ಲಿ ಅನುಮಾನ ಬಾರದಂತೆ ಮ್ಯಾನ್ಯುಫ್ಯಾಕ್ಚರ್ ಬೈ ಬಾಂಗ್ಲಾ ಎಂದು ಬರೆಸಿರುತ್ತಾರೆ ಎಂದು ಎಸ್ಪಿ ವಿವಣೆ ನೀಡಿದರು.
إرسال تعليق