ಬರ, ವಿದ್ಯುತ್, ಮೇವು ಕೊರತೆಯಾಗದಂತೆ ನಿಭಾಯಿಸಲಾಗುವುದು-ಮಧು ಬಂಗಾರಪ್ಪ

 ಬರಗಾಲವನ್ನ‌ ನಿರ್ವಹಣೆ ಮಾಡಲು ರಾಜ್ಯ ಸರ್ಕಾರ ಸನ್ನದ್ಧವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.

                      

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇವು ಮತ್ತು ಕುಡಿಯುವ ನೀರು ಪೋಲಾಗದಂತೆ ಕಾಯ್ದುಕೊಳ್ಳಬೇಕಿದೆ. ಡಿಸಬರ್ ನಂತರ ಸಮಸ್ಯೆ ಉಲ್ಬಣಬಲವಾಗುವ ಸಾಧ್ಯತೆ ಹೆಚ್ಚಿದೆ. ನ.15 ವರ ಒಳಗೆ ಜಿಲ್ಲೆಯ ವಿವರಣೆಯನ್ನ ಸಿಎಂ ಸಲ್ಲಿಸಲು ಸೂಚಿಸಿದ್ದರು. ಈಗಾಗಲೇ 7 ತಾಲೂಕಿನಲ್ಲಿ ಶಿಕಾರಿಪುರ ಮತ್ತು ಭದ್ರಾವತಿ‌ಯಲ್ಲಿ ಸಭೆ ನೆಡಸಿಲ್ಲ‌. ಉಳಿದ ಐದು ತಾಲೂಕಿನಲ್ಲಿ ಬರ ನಿರ್ವಹಣೆ ಸಭೆ ನಡೆಸಲಾಗಿದೆ ಎಂದರು.

ನೀರು ಮತ್ತು ಮೇವಿಗೆ ಗಮನ ಹರಿಸಲಾಗುತ್ತಿದೆ. ನಮ್ಮ‌ವ್ಯಾಪ್ತಿಯಲ್ಲಿ ಮೇವು ತೊಂದರೆ ಇಲ್ಲ. ಸೊರಬ ದಲ್ಲಿ ಮತ್ತು ಆನವಟ್ಟಿಯ ತಲಾ‌ ಒಂದೊಂದು ಗ್ರಾಮದಲ್ಲಿ  ಟ್ಯಾಂಕ್ ನಲ್ಲಿ ನೀರು ಹಂಚಲಾಗುತ್ತಿದೆ. ಮುಂದಿನ ಬೇಸಿಗೆಯಲ್ಲಿ 238 ಗ್ರಾಮದಲ್ಲಿ ಕುಡಿಯುವ ನೀರು ತೊಂದರೆ ಆಗಲಿದೆ ಎಂದು ಅಂದಾಜಿಸಲಾಗಿದೆ. ಇಲ್ಲಿ ಸಮರ್ಪಕವಾಗಿ ಬರ ನಿರ್ವಹಿಸಲಾಗುವುದು ಎಂದರು.

ಜಿಲ್ಲೆಯಲ್ಲಿ 6 ಲಕ್ಷದ 42 ಟನ್ ಮೇವಿದೆ. ಬೆಳೆ ಹಾನಿಗೆ ರಾಜ್ಯ ಕೇಂದ್ರ ಸರ್ಕಾರಕ್ಕೆ 1700 ಕೋಟಿ ಹಣ ಕೇಳಿದೆ. ಬೇಗ ಬಿಡುಗಡೆಗೆ ದೆಹಲಿಯಲ್ಲಿ ಬಿಜೆಪಿ ಎಂಪಿಗಳು ಮಾತನಾಡುತ್ತಿಲ್ಲ. ಕೇಂದ್ರ ಸರ್ಕಾರ ಕರ್ನಾಟಕದ ಮೇಲೆ ಮಲತಾಯಿ ದೋರಣೆ ಮಾಡ್ತಾಇದ್ದಾರೆ. ವಿರೋಧ ಪಕ್ಷ ಸಮೀಕ್ಷೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಬಳಿ ಹಣ ತರ್ತಾರ? ಧಮ್ನು ತಾಕತ್ತು ಇದ್ದರೆ ತನ್ನಿ ಎಂದು ಸವಾಲು ಹಾಕಿದರು.

ಬಿಜೆಪಿ ಸ್ವಂತಿಕೆ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಎರಡನೇ ಅವಧಿಗೆ ಸರ್ಕಾರ ನಡೆಸಿರುವುದು ಹೆಚ್ಚು. ಈಗ ನಡೆಯುತ್ತಿರುವ ಪಂಚರಾಜ್ಯದ ಚುನಾವಣೆಯಲ್ಲಿ ಅವರ ಹಣೆಬರಹ ಗೊತ್ತಾಗಲಿದೆ ಎಂದು ಟಾಂಗ್ ನೀಡಿದರು.

ರಾಜ್ಯದಲ್ಲಿ ವಿದ್ಯುತ್ 7 ಗಂಟೆ ನೀಡಲಾಗುತ್ತಿದೆ. ಭತ್ತ ಮತ್ತು ಜೋಳ ಬೆಳಯಲು ಮುಂದಾದವರಿಗೆ 7 ಗಂಟೆ ವಿದ್ಯುತ್ ನೀಡಲಾಗುವುದು.  ಇನ್ನೂ ವಿದ್ಯುತ್ ಶೆಡ್ ಡೌನ್ ಆಗ್ತಾ ಇಲ್ಲ. 24 ಗಂಟೆ ಸಿಟಿಯಲ್ಲಿ ವಿದ್ಯುತ್ ನೀಡಲಾಗುತ್ತಿದೆ. ಶೆಡ್ಡೌನ್ ಇಲ್ಲ ಪವರ್ ಕಟ್ಟು ಇಲ್ಲ ಎಂದರು.

ರಾಜ್ಯದಲ್ಲಿ 111 ಲಕ್ಷ ಯುನಿಟ್ ಸೆಪ್ಟಂಬರ್ ನಲ್ಲಿ ಬಳಕೆಯಾಗಬೇಕಿದ್ದು,  210 ಲಕ್ಷ  ಯುನಿಟ್ ಬಳಕೆಯಾಗಿದೆ.  18 ಲಕ್ಷ ಮಿಲಿಯನ್ ಯುನಿಟ್ ಖರೀದಿಸಲು ರಾಜ್ಯ ಸರ್ಕಾರ ಯೋಚಿಸುತ್ತಿದೆ. ಮಾಮೂಲಿಯಾಗಿ 9 ಲಕ್ಷ ಯುನಿಟ್ ವಿದ್ಯುತ್ ಮಾಮೂಲಿಯಾಗಿ ಬಳಕೆಯಾಗಲಿದೆ. ಆದರೆ ಇದಕ್ಕೂ ಡಬ್ಬಲ್ ಯುನಿಟ್ ವಿದ್ಯುತ್ ಖರೀದಿಸಲಾಗುವುದು ಎಂದ ಅವರು,  ಗೃಹಜ್ಯೋತಿ 5 ಲಕ್ಷ 31 ಸಾವಿರ ನಗರ ವ್ಯಾಪ್ತಿಯಲ್ಲಿ ಉಚಿತವಾಗಿ ಜನ ಪಡೆದಿದ್ದಾರೆ.‌ ಗೃಹಲಕ್ಷ್ಮೀ 4 ಲಕ್ಷ 63 ಸಾವಿರ ಜನ‌ನೋಂದಾಯಿಸಿಕೊಂಡಿದ್ದಾರೆ.  53 ಕೋಟಿ ಹಣ ನೀಡಲಾಗಿದೆ. 3-4 ಸಾವಿರ ಜನ ಮಾತ್ರ ಬಾಕಿ ಉಳಿದಿದ್ದಾರೆ ಎಂದರು.

ನೋಡಲ್ ಆಫೀಸರ್ ನೋಂದಣೆಯಾಗದೆ ಇರುವ ಗೃಹಲಕ್ಷ್ಮಿ ಯೋಜನೆಗೆ ಫಲಾನುಭವಿಗಳನ್ನ ತರುವ ಜವಬ್ದಾರಿ ನೀಡಲಾಗಿದ್ದು ಅವರಿಂದ ನೋಂದಣಿಯಾಗಲಿದೆ. 6 ತಿಂಗಳಲ್ಲಿ 100 ಕೋಟಿ ಜನ ಮಹಿಳೆಯರು ಬಸ್ ನಲ್ಲಿ ಓಡಾಡಿದ್ದಾರೆ. ವಿಪಕ್ಷದವರು ಈ ದತ್ತಾಂಶ ಇಲ್ಲದೆ ವಾಗ್ದಾಳಿ ನಡೆಸಿದ್ದಾರೆ. ವಿಪಕ್ಷ ಎಂದರೆ ಸ್ಯಾಡೋ ಸರ್ಕಾರದಂತೆ. ವಿಪಕ್ಷ ನಾಯಕ ಅಶೋಕ್ ನವರು ಶೀಘ್ರದಲ್ಲಿಯೇ ಸರ್ಕಾರ ಬೀಳಲಿದೆ ಎಂದು ಹೇಳಿಜೆ ನೀಡಿರುವುದು ಬೇಜವಬ್ದಾರಿಯ ಹೇಳಿಕೆ ಎಂದರು.

ಕಾರ್ಮಿಕನ ಪ್ರಾಣ ಹೋದಾಗ ಪರಿಹಾರ ಕೊಡೋದು ಫ್ಯಾಶನ್ ಆಗಿದೆ. ಕಾರ್ಮಿಕರಿಗೆ ಸುರಕ್ಷತೆ ಇಲ್ಲವೆಂದರೆ ದುರಂತವಾಗಲಿದೆ. ಶಿವಮೊಗ್ಗದ ಫ್ಲೈಓವರ್ ಕಾಮಗಾರಿಯ ವೇಳೆ ಕಾರ್ಮಿಕ ಸಾವನ್ನಪ್ಪಿರುವ ಬಗ್ಗೆ ಪ್ರತಿಕ್ರಿಯಿಸಿದರು. ಕಾನೂನು ಪ್ರಕರ ಕ್ರಮ ಜರುಗಿಸಲಾಗುವುದು. ನ್ಯೂ ಮಂಡ್ಲಿ ಸರ್ಕಾರ  ಶಾಲೆಯ ಕಾಮಗಾರಿಯಲ್ಲಿ ಗುತ್ತಿಗೆದಾರ ನಿಧಾನಗೊಳಿಸಿದ್ದಾನೆ. ಅತಿ ಬೇಗ ಶಾಲೆ ಕಾಮಗಾರಿ ಮುಗಿಸಲಾಗುವುದು.

ಶಾಲೆಯಲ್ಲಿ 500-600 ಕೆಪಿಎಸ್ ಶಾಲೆಯನ್ನ ಆರಂಭಿಸಲಾಗುವುದು. ನೆಕ್ಸ್ಟ್ ಬಜೆಟ್ ನಲ್ಲಿ ಎಲ್ಲಾ ಟೀಚರ್ಸ್ ನ್ನ ನೇಮಕಾತಿ ಮಾಡಲಾಗುವುದು. 8500 ಕೊಠಡಿಯ ದುರಸ್ತಿ ಕಾಮಗಾರಿ ಆರಂಭಿಸಲಾಗುವುದು. 20-30 ವರ್ಷದಿಂದ ಬಾಕಿ ಉಳಿದಿರುವು ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಮೆಕ್ಕೆಜೋಳ ಯಂತ್ರ ಬಳಕೆಗೆ ಮನೆಯ ಯುನಿಟ್ ಬಳಸಲಾಗುತ್ತಿದ್ದು ಉಚಿತ ವಿದ್ಯುತ್ ಬಳಕೆ ಮಾಡಲು ಇಂಧನ ಜೆ.ಜೆ.ಜಾರ್ಜ್ ಗೆ  ಪತ್ರ ಬರೆಯಲಾಗಿದೆ. 500 ಕೋಟಿ ಅಡಿಕೆ ಸಂಶೋಧನ ಆರಂಭಿಸುವುದಾಗಿ ಗೃಹ ಮಂತ್ರಿ ಅಮಿತ್ ಶಾ 2018 ರಲ್ಲಿ ಆಶ್ವಾಸನೆ ನೀಡಿದ್ದರು. ಇದುವರೆಗೂ ಆರಂಭಿಸಿಲ್ಲ.ಆರಗ ಜ್ಞಾನೇಂದ್ರ ಇಂದು ನಡೆಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನ  ಗೃಹ ಮಂತ್ರಿ ಅಮಿತ್ ಶಾ ವಿರುದ್ಧ ಮಾಡಲಿ ಎಂದು ಟಾಂಗ್ ನೀಡಿದರು.

ಜಾತಿಗಣತಿ ಆಗಬೇಕು. ವಿಪಕ್ಷ ಕಾಂತರಾಜು ವರದಿ ಬಗ್ಗೆ ಆಕ್ಷೇಪಣೆ ಮಾಡಿದ್ದಾರೆ. ಆಕ್ಷೇಪಣೆಯನ್ನ ಸರಿಪಡಿಸಿ ಜಾರಿಗೊಳಿಸಬೇಕು. 40 ಸಾವಿರ ಶಾಲೆಯ ಶಿಕ್ಷಕರ ಕೊರತೆ ಇದೆ ಸರಿಪಡಿಸಲಾಗುವುದು ಎಂದರು.

ಮಾಗಡಿ ಶಾಸಕರು ಬಿಜೆಪಿ ಬ್ರಿಟೀಶರು ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಮಾಗಡಿ ಶಾಸಕರಲ್ಲ, ನಾನೇ ಮೊದಲೇ ಹೇಳಿದ್ದೆ ಬಿಜೆಪಿಯರು ಬ್ರಿಟೀಶ್  ಎಂದು ಕರೆದಿದ್ದ. ಅಮಾಯಕರ ಸೇನಿಕರ ಬಲಿಕೊಟ್ಟವರು ಪ್ರಧಾನಿ ಮೋದಿ ಎಂದಿದ್ದಾರೆ. ಅದರ ಬಗ್ಗೆ ಪ್ರತಿಕ್ರಿಯೆಸಲು ಇಲ್ಲ ಎಂದರು.  ಮತ್ತು ಡಿಕೆಶಿ ಜೆಡಿಎಸ್ ಬಿಜೆಪಿ ಅಲಯ್ನ್ಸ ಬಗ್ಗೆ ಅವರೇ ಉತ್ತರಕೊಡಲಿ ಎಂದರು.

Post a Comment

أحدث أقدم