ರಸ್ತೆ ನಿಯಮಗಳು ಪ್ರತಿಯೊಬ್ಬರಿಗೂ ಅನ್ವಯವಾಗಬೇಕು ಆದರೆ, ಶಿವಮೊಗ್ಗದ ಬಸ್ ಸ್ಟಾಂಡ್ ನ ಹೊಟೆಲ್ ಬಳಿ ನೋ-ಪಾರ್ಕಿಂಗ್ ಬೋರ್ಡ್ ಇದ್ದರು ಸಹ ಅಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಆದರೂ ಸಹ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಅವರ್ ವಿರುದ್ದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಿಯಮ ಉಲ್ಲಂಘನೆ ಮಾಡಿದ್ದರೂ ಸಹ ಅವರ ವಿರುದ್ದ ಕ್ರಮ ಕೈಗೊಳ್ಳದೇ ಬೇಜವಬ್ದಾರಿ ತೋರುತ್ತಿರುವುದಾದರೂ ಏಕೆ.!
ಇದೇ ಹಾಸ್ಪೆಟಲ್ ಬಳಿ ದೂರದಿಂದ ಬರುವ ಜನಸಾಮಾನ್ಯರು ವಾಹನಗಳನ್ನು ನಿಲ್ಲಿಸಿದರೇ ವೀಲ್ ಲಾಕ್ ಮಾಡಿ ದಂಡವನ್ನು ಹಾಕುವ ಅಧಿಕಾರಿಗಳು ಬಸ್ ಸ್ಟಾಂಡ್ ನ ಹೋಟೆಲ್ ಬಳಿ ನೋ ಪಾರ್ಕಿಂಗ್ ಬೋರ್ಡ್ ಇರುವ ಸ್ಥಳದಲ್ಲೇ ವಾಹನ ನಿಲ್ಲಿಸಿದರು ಸಹ ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನಿರಲು ಕಾರಣವೇನು.! ನಿಯಮ ಅಂದರೆ ಅದು ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ ಆದರೆ, ಇಲ್ಲಿ ಒಬ್ಬರಿಗೊಂದು ರೀತಿ, ಇನ್ನೊಬ್ಬರಿಗೆ ಇನ್ನೊಂದು ಮಾಡುತ್ತಿರುವುದು ಖಂಡನೀಯವಾಗಿದೆ.!
إرسال تعليق