ಫೆಡೆಕ್ಸ್ ಕೊರಿಯರ್ ಹಗರಣಕ್ಕೆ ಸೈಬರ್ ಕ್ರಿಮಿನಲ್‌ಗಳು ಹೊಸ ಟ್ವಸ್ಟ್ ನೀಡಿದ್ದಾರೆ. ಮೊದಲು ಆರೋಪಿಗಳು ಕಣ್ಣಿಗೆ ಕಾಣಿಸದಂತೆ ಸಂತ್ರಸ್ತರಿಗೆ ಕರೆ ಮಾಡಿ ಮುಂಬೈ ಸೈಬರ್ ಕ್ರೈಂ ಪೊಲೀಸರು ಮತ್ತು ಸಿಬಿಐ ಅಧಿಕಾರಿಗಳು ಎಂದು ಹೇಳಿಕೊಂಡು ವಂಚಿಸುತ್ತಿದ್ದರು. ಈಗ ಪೊಲೀಸ್ ಸಮವಸ್ತ್ರ ಧರಿಸಿಕೊಂಡು ಬಂದು ಅಮಾಯಕರನ್ನು ಮೋಸ ಮಾಡುವ ವಂಚಿಸುವ ಜಾಲವಿದ್ದು, ಇಂತಹ ಪ್ರಕರಣಕ್ಕೆ ವಕೀ
ನಡೆದ ಘಟನೆಯೇನು?: ವಿಕ್ಟೋರಿಯಾ ಲೇಔಟ್‌ನ 25 ವರ್ಷದ ವಕೀಲೆ ನೀತು (ಹೆಸರು ಬದಲಾಯಿಸಲಾಗಿದೆ) ವಂಚನೆಗೆ ಒಳಗಾದವರು. ಪೊಲೀಸ್ ಸಮವಸ್ತ್ರದಲ್ಲಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ನೀತು ಅವರ ಮನೆಗೆ ಹೋಗಿ ನಾರ್ಕೊಟಿಕ್ ಡ್ರಗ್ಸ್ ಅಂಡ್ ಸೈಕೊಟ್ರೊಪಿಕ್ ಸಬ್ಸ್ಟಾನ್ಸ್ (NDPS) ಪ್ರಕರಣದಲ್ಲಿ ಬೇಕಾಗಿರುವುದರಿಂದ ತಮ್ಮೊಂದಿಗೆ ಬರುವಂತೆ ಸೂಚಿಸಿದರು. ಮುಂಬೈನಲ್ಲಿ ಕೇಸು ದಾಖಲಾಗಿದೆ ಎಂದು ಹೇಳಿ ನಂಬಿಸಿದ್ದರು.
ಅವರೊಂದಿಗೆ ಮಹಿಳಾ ಪೊಲೀಸ್ ಅಧಿಕಾರಿ ಇಲ್ಲದ್ದರಿಂದ ನೀತು ಅವರು ಹೋಗಲು ನಿರಾಕರಿಸಿದರು. ಅವರು ಹೋದ ಕೆಲವೇ ನಿಮಿಷಗಳಲ್ಲಿ, ತೈವಾನ್‌ಗೆ ತನ್ನ ಫೆಡ್‌ಎಕ್ಸ್ ಪಾರ್ಸೆಲ್‌ನಲ್ಲಿ ಎಂಡಿಎಂಎ ಡ್ರಗ್ಸ್ ಸೇರಿದಂತೆ ಅಕ್ರಮ ಪದಾರ್ಥಗಳನ್ನು ಪಾರ್ಸೆಲ್ ಮಾಡಿದ್ದೀರಿ ಎಂದು ಹೇಳಿ ಅಪರಿಚಿತ ವ್ಯಕ್ತಿಗಳಿಂದ ನೀತುಗೆ ಕರೆ ಬಂತು.
ಯಾವುದೇ ಕೊರಿಯರ್ ಕಳುಹಿಸಿಲ್ಲ ಎಂದು ನೀತು ನಿರಾಕರಿಸಿದಾಗ, ಆರೋಪಿಯು ಅದರ ಬಗ್ಗೆ ವಿವರ ನೀಡಿ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಕರೆತಂದು ಬಂಧಿಸುವುದಾಗಿ ಬೆದರಿಕೆ ಹಾಕಿದನು. ನೀವು ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್‌ಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬೆದರಿಕೆ ಕರೆಯಲ್ಲಿ ಆರೋಪಿಸಿದ್ದನು.
ಮುಂದೆ ಏನಾದರೂ ತೊಂದರೆಯುಂಟಾಗಬಹುದು ಎಂದು ಹೆದರಿದ ವಕೀಲೆ ಸುಮಾರು 1.96 ಲಕ್ಷ ರೂಪಾಯಿಗಳನ್ನು ಪೋನ್ ಕರೆ ಮಾಡಿದವರ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಬಳಿಕ ಶುಕ್ರವಾರ ನಡೆದ ಘಟನೆಯನ್ನು ವಿವರಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ. ನೀತು ವಿಕ್ಟೋರಿಯಾ ಲೇಔಟ್‌ನ ಪಾಮ್‌ಗ್ರೋವ್ ರಸ್ತೆಯ ನಿವಾಸಿ.
ಆರೋಪಿಗಳು ನೀತು ಮನೆಗೆ ಹೋಗಿದ್ದೇಗೆ?: ನೀತು ಜೊತೆ ಮಾತನಾಡುವಾಗ ಇಬ್ಬರೂ ತಮ್ಮನ್ನು ಆಕಾಶ್ ಕುಮಾರ್ ಮತ್ತು ಪ್ರದೀಪ್ ಸಾವಂತ್ ಎಂದು ಪರಿಚಯಿಸಿಕೊಂಡಿದ್ದರು. ಸಂಜೆ 5ರಿಂದ 5.30ರ ನಡುವೆ ನಕಲಿ ಪೊಲೀಸರು ಆಕೆಯ ನಿವಾಸಕ್ಕೆ ತೆರಳಿದ್ದರು.
ಆಕೆಯಿಂದ ವಿವರಗಳನ್ನು ಕೇಳಿದ ನಂತರ, ಆಕೆಯ ವಿರುದ್ಧ ಮುಂಬೈನ ಅಂಧೇರಿ ಪೂರ್ವ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಬೆಂಗಳೂರು ಪೊಲೀಸರಿಗೆ ವರ್ಗಾಯಿಸಲಾಗಿದೆ ಎಂದು ಹೇಳಿದರು. ಅವರ ಜೊತೆ ನೀತು ಹೋಗಲು ನಿರಾಕರಿಸಿದಾಗ ಇಬ್ಬರು ಪೊಲೀಸ್ ಮಹಿಳೆಯೊಂದಿಗೆ ಹಿಂತಿರುಗುವುದಾಗಿ ಹೇಳಿ ಹೊರಟರು. ಕೆಲವೇ ನಿಮಿಷಗಳಲ್ಲಿ ಆಕೆಗೆ ‘ಪೊಲೀಸರಿಂದ’ ಕರೆಗಳು ಬರಲಾರಂಭಿಸಿದವು. ಅವರು ಅವಳನ್ನು ಸ್ಕೈಪ್ ಕರೆಗೆ ಬರುವಂತೆ ಮಾಡಿದರು.
ಮತ್ತೊಬ್ಬ ಡ್ರಗ್ ಪೆಡ್ಲರ್ ಬಳಿ ಆಕೆಯ ಬ್ಯಾಂಕ್ ವಿವರಗಳು ಪತ್ತೆಯಾಗಿವೆ ಎಂದು ಆರೋಪಿಗಳು ಆಕೆಗೆ ಬೆದರಿಕೆ ಹಾಕಿದ್ದಾರೆ. ಡ್ರಗ್ ಪೆಡ್ಲರ್ 36 ವಿವಿಧ ಬ್ಯಾಂಕ್ ಖಾತೆಗಳನ್ನು ಹೊಂದಿರುವುದರಿಂದ ಆಕೆಯ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಬೇಕು ಎಂದು ಅವರು ಆಕೆಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂದು ವಕೀಲರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಇತರ ಸೆಕ್ಷನ್‌ಗಳೊಂದಿಗೆ (ಐಪಿಸಿ 170) ಅಡಿ ಕೇಸು ದಾಖಲಾಗಿದೆ.
ನಕಲಿ ಪೊಲೀಸರ ಬಗ್ಗೆ ಸುಳಿವು ಪಡೆಯಲು ನಾವು ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುತ್ತಿದ್ದೇವೆ. ಪೊಲೀಸರ ಸೋಗಿನಲ್ಲಿ ಯಾರಾದರೂ ಬಂದರೆ ಜಾಗರೂಕರಾಗಿರಬೇಕು. ಸಂದೇಹವಿದ್ದಲ್ಲಿ, ಸಹಾಯಕ್ಕಾಗಿ 112 ನ್ನು ನಾಗರಿಕರು ಡಯಲ್ ಮಾಡಿ ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
إرسال تعليق