ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಒಟ್ಟು 1.25 ಕೋಟಿ ರೂ. ಮೌಲ್ಯದ 2 ಕೆಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕಳೆದ ಎರಡು ದಿನಗಳಲ್ಲಿ ಆರು ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ವಶಪಡಿಸಿಕೊಂಡಿರುವ ಚಿನ್ನ.
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಒಟ್ಟು 1.25 ಕೋಟಿ ರೂ. ಮೌಲ್ಯದ 2 ಕೆಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಮಸ್ಕತ್‌ನಿಂದ ಓಮನ್ ಏರ್ ವಿಮಾನದಲ್ಲಿ (ಡಬ್ಲ್ಯುವೈ 281) ಬಂದಿದ್ದ ಪ್ರಯಾಣಿಕರೊಬ್ಬರಿಂದ 1113.07 ಗ್ರಾಂ ಚಿನ್ನಾಭರಣವನ್ನು ಶುಕ್ರವಾರ ವಶಕ್ಕೆ ಪಡೆಯಲಾಗಿದೆ.
ಈತ ತನ್ನ ಸೊಂಟದ ಬೆಲ್ಟ್ ನಲ್ಲಿದ್ದ ಪೌಚ್ ಹಾಗೂ ಹ್ಯಾಂಡ್ ಬ್ಯಾಗ್ ನಲ್ಲಿ ರೂ.68.18 ಲಕ್ಷ ಮೌಲ್ಯದ ಚಿನ್ನ ಅಡಗಿಸಿಟ್ಟಿದ್ದ ಎಂದು ಅಧಿಕಾರಿಗಳಉ ಮಾಹಿತಿ ನೀಡಿದ್ದಾರೆ.
ಗುರುವಾರ ಕೂಡ ಬ್ಯಾಂಕಾಕ್ ನಿಂದ ಬಂದಿದ್ದ ಮೂವರು ಪುರುಷರು ಹಾಗೂ ಕೊಲಂಬೋದಿಂದ ಬಂದಿದ್ದ ಇಬ್ಬರು ಮಹಿಳೆಯರಿಂದ 966ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ಬ್ಯಾಂಕಾಕ್‌ನಿಂದ ಬಂದ ಇಂಡಿಗೋ ವಿಮಾನ 6E 1056 ರಲ್ಲಿ ಮೂವರು ಪ್ರತ್ಯೇಕ ಪ್ರಯಾಣಿಕರಿಂದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಯಾಣಿಕರು ತಮ್ಮ ಕುತ್ತಿಗೆಯಲ್ಲಿ ಎರಡು ಕಚ್ಚಾ ಚಿನ್ನದ ಸರವನ್ನು ಧರಿಸಿದ್ದರು. ಈ ಸರಗಳು 18,13,800 ರೂ ಮೌಲ್ಯವುಳ್ಳದ್ದಾಗಿದ್ದು, ಒಟ್ಟು 300 ಗ್ರಾಂ ತೂಕವಿತ್ತು.
ಇನ್ನಿಬ್ಬರು ಮಹಿಳೆಯರು ಒಳ ಉಡುಪು ಸೇರಿದಂತೆ ಇತರೆಡೆ 1,20,920 ರೂ ಮೌಲ್ಯದ ಚಿನ್ನಾಭರಣವನ್ನು ಬಚ್ಚಿದ್ದರು. ಮತ್ತೋರ್ವ ಮಹಿಳೆ ಸಾಕ್ಸ್ ಹಾಗೂ ಪ್ಯಾಂಟ್ ನಲ್ಲಿ 2,78, 116 ರೂಪಾಯಿ ಮೌಲ್ಯದ ಒಟ್ಟು 46 ಗ್ರಾಂ ಚಿನ್ನವನ್ನು ಬಚ್ಚಿಟ್ಟಿದ್ದರು ಎಂದು ತಿಳಿಸಿದ್ದಾರೆ.
إرسال تعليق