ಶಿವಮೊಗ್ಗ: ಮನೆ ಪಕ್ಕದಲ್ಲಿ ಒಣಗಿಸಲು ಹಾಕಿದ್ದ ಸುಮಾರು 1 ಲಕ್ಷ ರೂ ಮೌಲ್ಯದ ಅಡಿಕೆ ಕಳ್ಳತನ.!

 ದಿನಾಂಕ: 16/11/2023 ರಂದು ರಾತ್ರಿ ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿ ಹರತಾಳು ಮಜಿರೆ ಕ್ವಾಡ್ರಿಗೆ ಗ್ರಾಮದ ಬಾಲರಾಜ್ ರವರು ತಮ್ಮ ಮನೆ ಪಕ್ಕದಲ್ಲಿ ಒಣಗಿಸಲು ಹಾಕಿದ್ದ ಸುಮಾರು 1 ಲಕ್ಷ ರೂ ಮೌಲ್ಯದ ಅಡಿಕೆಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು, ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0128/2023 ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. 



ಪ್ರಕರಣದಲ್ಲಿ ಕಳುವಾದ ಮಾಲು ಹಾಗೂ ಆರೋಪಿತರ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ.ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ  ಪೊಲೀಸ್ ಅಧೀಕ್ಷಕರು, ಶಿವಮೊಗ್ಗ  ಜಿಲ್ಲೆ ರವರ  ಮಾರ್ಗದರ್ಶನದಲ್ಲಿ, ಶ್ರೀ ಗಜಾನನ ವಾಮನ ಸುತಾರ ಡಿವೈಎಸ್ ಪಿ ತೀರ್ಥಹಳ್ಳಿ ಉಪ ವಿಭಾಗ ಮತ್ತು  ಶ್ರೀ ಗುರಣ್ಣ ಹೆಬ್ಬಾಳ್ ಸಿಪಿಐ ಹೊಸನಗರ ರವರ ಮೇಲ್ವಿಚಾರಣೆಯಲ್ಲಿ,  ಶ್ರೀ ಪ್ರವೀಣ್ ಪಿ.ಎಸ್.ಐ ರಿಪ್ಪನ್ ಪೇಟೆ ಪೊಲೀಸ್ ಠಾಣೆ ಹಾಗೂ ಸಿಬ್ಬಂಧಿಗಳಾದ ಪಿಸಿ ಶಿವಕುಮಾರ್ ನಾಯ್ಕ, ಉಮೇಶ್ ಹಾಗೂ ಸಂತೋಷ್ ರವರುಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ. 

 ಸದರಿ ತನಿಖಾ ತಂಡವು ದಿನಾಂಕಃ 27-11-2023  ರಂದು ಪ್ರಕರಣದ ಆರೋಪಿತರಾದ 1) ರಾಘವೇಂದ್ರ, 28 ವರ್ಷ ಹರತಾಳ್ ಗ್ರಾಮ, ಹೊಸನಗರ ಮತ್ತು 2) ಶ್ರೀಧರ್ 52 ವರ್ಷ, ನಂಜವಳ್ಳಿ ಗ್ರಾಮ ಹೊಸನಗರ ರವರುಗಳನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಸದರಿ ಪ್ರಕರಣಕ್ಕೆ ಸಂಬಂಧಿಸಿದ ಅಂದಾಜು ಮೌಲ್ಯ 85,000/- ರೂ ಗಳ 1 ಕ್ವಿಂಟಾಲ್ 85 ಕೆ.ಜಿ ತೂಕದ ಒಣ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 3,00,000/-  ರೂಗಳ ಮಹೀಂದ್ರ ಜೀತೋ ಪ್ಲಸ್  ಲಗೇಜ್ ಆಟೋ ಹಾಗೂ  ಗುನ್ನೆ ಸಂಖ್ಯೆ 0085/2023 ಕಲಂ 379 ಐಪಿಸಿ ಪ್ರಕರಣಕ್ಕೆ ಸಂಬಂದಿಸಿದ  ಅಂದಾಜು ಮೌಲ್ಯ  25,000/- ರೂಗಳ 300 ರಬ್ಬರ್ ಶೀಟ್ ಗಳನ್ನು ಅಮಾನತ್ತುಪಡಿಸಿಕೊಂಡು  ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿರುತ್ತದೆ. 

 ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Post a Comment

أحدث أقدم