ಗೆಜ್ಜೇನಹಳ್ಳಿ, ಬನ್ನಿಕೆರೆ, ಕೊಮನಾಳು, ಕುಂಚೇನಹಳ್ಳಿ ಭಾಗದಲ್ಲಿ ಕಾಡುತ್ತಿದ್ದ ಚಿರತೆ ಕಾಟಕ್ಕೆ ಜನ ಹೈರಾಣಾಗಿದ್ದರು. ಬಿಕ್ಕೋನಹಳ್ಳಿಯಲ್ಲಿ ಮೂರು ವಾರದ ಹಿಂದೆ ಬೋನಿಗೆ ಬಿದ್ದತ್ತು. ಆ ವೇಳೆ ಮತ್ತೊಂದು ಚಿರತೆ ಇತ್ತು ಎಂಬ ಕೂಗು ಕೇಳಿ ಬಂದಿತ್ತು.
ಅದರ ಬೆನ್ನಲ್ಲೇ ಗೆಜ್ಜೇನಹಳ್ಳಿಯಲ್ಲಿ ಮತ್ತೊಂದು ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ. ಐದು ವರ್ಷದ ಚಿರತೆ ಬೋನಿಗೆ ಬಿದ್ದಿದೆ. ಬೋನಿಗೆ ಬಿದ್ದ ಚಿರತೆಯನ್ನ ಶಿವಮೊಗ್ಗಜಿಲ್ಲೆಯಿಂದ ಹೊರಗೆ ಬಿಡಲಾಗಿದೆ.
ಬಿಕ್ಕೋನಹಳ್ಳಿ, ಗೆಜ್ಜೇನಹಳ್ಳಿ,ಬೀರನಕೆರೆ ಕೊಮ್ಮನಾಳು ಕುಂಚೇನ ಹಳ್ಳಿಯಲ್ಲಿ ಚಿರತೆಗಾಗಿ ಬೋನಿಡಲಾಗಿತ್ತು. ಬಿಕ್ಕೋನಹಳ್ಳಿ ಮಹಿಳೆಯನ್ನ ಚಿರತೆಯೊಂದು ಕೊಂದ ಪ್ರಕರಣ ಗುಲ್ಲೆಬ್ಬಿತ್ತು. ಅದಾದ 10 ದಿನಗಳಲ್ಲೇ ಗಂಡು ಚಿರತೆ ಬೋನಿಗೆ ಬಿದ್ದಿತ್ತು. ಇದಾದ ಮೂರು ವಾರದಲ್ಲಿ ಈಗ ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ.
ಈ ಹಿಂದೆ ಗಂಡು ಚಿರತೆ ಬೋನಿಗೆ ಬಿದ್ದ ತಕ್ಷಣ ಮತ್ತೊಂದು ಚಿರತೆ ಇದೆ ಎಂಬ ಗ್ರಾಮಸ್ಥರ ಕೂಗಿನ ಹಿನ್ನಲೆಯಲ್ಲಿ 6 ಬೋನುಗಳು ಹಾಕಲಾಗಿದೆ.
إرسال تعليق