ಶಿವಮೊಗ್ಗದ ಗಾಡಿಕೊಪ್ಪದ ಬಳಿ ಪೊಲೀಸ್ ಜೀಪ್ ನಲ್ಲಿ ಬಂದ ಪೊಲೀಸ್ ಅಧಿಕಾರಿ ಮತ್ತು ಹಾರೋಬೆನವಳಿ ಗ್ರಾಮದ ಸರ್ಕಾರಿ ಶಾಲೆಯ ಸಹಶಿಕ್ಷಕ ಸೇರಿ ಮಧ್ಯದ ಅಂಗಡಿಯಿಂದ ಮಧ್ಯ ಖರೀದಿಸಿದ್ದಾರೆ.! ಸರ್ಕಾರ ಪೊಲೀಸರಿಗೆ ಜೀಪ್ ಅನ್ನು ನೀಡಿರುವುದು ಕರ್ತವ್ಯದ ಸಲುವಾಗಿಯೇ ಹೊರತು ಈ ರೀತಿ ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಅಲ್ಲ.
ಪೊಲೀಸ್ ಅಧಿಕಾರಿ ಮತ್ತು ಸರ್ಕಾರಿ ಶಾಲೆಯ ಸಹಶಿಕ್ಷಕ ಜೀಪ್ ಅನ್ನು ವೈಯಕ್ತಿಕ ಕೆಲಸಕ್ಕಾಗಿ ದುರ್ಬಳಕೆ ಮಾಡಿಕೊಂಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.! ಸಾರ್ವಜನಿಕರ ಮೇಲೆ ಮಧ್ಯಪಾನಕ್ಕೆ ಸಂಬಂಧಿಸಿ ಹಲವು ಕೇಸ್ ದಾಖಲಿಸುವ ಪೊಲೀಸರೇ ಈ ರೀತಿ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ.! ಶಾಲೆಯಲ್ಲಿ ಮಕ್ಕಳಿಗೆ ವಿದ್ಯೆ ಕಲಿಸುವ ಗುರುಗಳೇ ಇಂತಹ ಮಣ್ಣು ತಿನ್ನುವ ಕೆಲಸ ಮಾಡಿರುವುದು ಆಶ್ಚರ್ಯದ ಸಂಗತಿಯಾಗಿದೆ.!
ಒಬ್ಬರು ಸಮಾಜದಲ್ಲಿ ನಡೆಯುವಂತಹ ಅಕ್ರಮ ಚಟುವಟಿಕೆಗಳ ವಿರುದ್ದ ಕಠಿಣ ಕ್ರಮ ತೆಗೆದುಕೊಳುವವರು, ಇನ್ನೊಬ್ಬರು ಸಮಾಜಘಾತುಕ ಕೃತ್ಯವನ್ನು ಮುಂದೆ ಮಕ್ಕಳು ಮಾಡದಂತೆ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಈ ಇಬ್ಬರು ಉತ್ತಮ ಸ್ಥಾನದಲ್ಲಿರುವವರೇ ಆಗಿದ್ದು ಪೊಲೀಸ್ ಜೀಪ್ ಅನ್ನು ಮದ್ಯ ಖರೀದಿಸಲು ದುರ್ಬಳಕೆ ಮಾಡಿಕೊಂಡಿರುವುದು ಎಷ್ಠರ ಮಟ್ಟಿಗೆ ಸರಿ.! ಎಲ್ಲರಿಗೂ ತಮ್ಮದೇ ಆದ ವೈಯಕ್ತಿಕ ಜೀವನ ಇರುತ್ತದೆ ಆದರೆ ಅದಕ್ಕಾಗಿ ಸರ್ಕಾರಿ ಜೀಪ್ ಅನ್ನು ಬಳಸಿಕೊಂಡಿರುವುದು ಖಂಡನೀಯವಾಗಿದೆ. ಅವರು ನಿಭಾಯಿಸುತ್ತಿರುವುದು ಜವಾಬ್ದಾರಿಯುತ ಕೆಲಸ ಅದರ ಅರಿವೆ ಇಲ್ಲದೆ ಈ ರೀತಿ ಮಾಡಿರುವುದು ಅವರಿಗೆ ಕರ್ತವ್ಯದ ಮೇಲಿರುವ ನಿಷ್ಠೆ ತೋರುತ್ತದೆ.
إرسال تعليق