ರಾಜ್ಯದಲ್ಲಿ ಕಾವೇರಿ ವಿವಾದ ಮತ್ತೆ ಭುಗಿಲೆದ್ದಿದೆ. ರಾಜ್ಯದ ಡ್ಯಾಂಗಳು ಖಾಲಿಯಾಗುತ್ತಿದ್ದರೂ ತಮಿಳುನಾಡಿಗೆ ನೀರು ಬಿಡಲೇ ಬೇಕಾದ ಅನಿವಾರ್ಯತೆಗೆ ಕರ್ನಾಟಕ ರಾಜ್ಯ ಸರ್ಕಾರ ಸಿಲುಕಿದೆ. ಕಾವೇರಿ ನದಿ ಪಾತ್ರದ ಜಿಲ್ಲೆಗಳಲ್ಲಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ಆದೇಶಕ್ಕೆ ತಲೆ ಬಾಗಲೇಬೇಕಾದ ಅನಿವಾರ್ಯತೆ ಸಿಲುಕಿರುವ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಇದರ ವಿರುದ್ಧ ಬಿಜೆಪಿ, ಜೆಡಿಎಸ್ ಸೇರಿದಂತೆ ರಾಜ್ಯದ ಪ್ರಮುಖ ವಿರೋಧ ಪಕ್ಷಗಳು, ನೂರಾರು ಸಂಘಟನೆಗಳು ಸಿಡಿದೆದ್ದಿವೆ. ಬೆಂಗಳೂರು ಬಂದ್ ಹಾಗೂ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ.
ರಾಜ್ಯ ಸರ್ಕಾರಕ್ಕೆ ತಟ್ಟಿದೆ ಕಾವೇರಿ ಹೋರಾಟದ ಬಿಸಿ!
ಬೆಂಗಳೂರು ಬಂದ್ ವೇಳೆ ಏನು ಇರಲ್ಲ?
ಬೆಂಗಳೂರು ಬಂದ್ ವೇಳೆ ರಾಜ್ಯ ರಾಜಧಾನಿಯನ್ನು ಸಂಪೂರ್ಣ ಸ್ತಬ್ಧಗೊಳಿಸಲು ಸಂಘಟನೆಗಳು ಸಿದ್ದತೆ ನಡೆಸಿವೆ. ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಹಾಗೂ ನೂರಾರು ಸಂಘಟನೆಗಳು ಈ ಬಂದ್ಗೆ ಬೆಂಬಲ ಘೋಷಣೆ ಮಾಡಿರುವ ಕಾರಣ, ಬೆಂಗಳೂರು ಬಹುತೇಕ ಸ್ತಬ್ಧ ಆಗಲಿದೆ.
- ಬೆಂಗಳೂರು ಬಂದ್ಏನೇನು ಇರಲ್ಲ?
- ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್
- ಖಾಸಗಿ ಬಸ್, ಓಲಾ, ಉಬರ್, ಟ್ಯಾಕ್ಸಿ, ಆಟೋ
- ಗೂಡ್ಸ್ ವಾಹನ ಸೇವೆ ಕೂಡಾ ಇರಲ್ಲ
- ಯಶವಂತಪುರ, ದಾಸನಪುರ ಎಪಿಎಂಸಿ ಮಾರುಕಟ್ಟೆ
- ಹೋಟೆಲ್, ರೆಸ್ಟೊರೆಂಟ್, ಮಾಲ್, ಮಲ್ಟಿಪ್ಲೆಕ್ಸ್
- ಅಂಗಡಿ ಮಳಿಗೆಗಳು, ಕೈಗಾರಿಕೆಗಳು..
ಬೆಂಗಳೂರು ಬಂದ್ ವೇಳೆ ಏನು ಇರುತ್ತೆ?
ಕಾವೇರಿಗಾಗಿ ಬೆಂಗಳೂರು ಬಂದ್ ಘೋಷಣೆ ಆಗಿದ್ದರೂ ಕೂಡಾ ಕೆಲವು ಅಗತ್ಯ ಸೇವೆಗಳು ಇರಲಿವೆ. ಬಂದ್ ವೇಳೆ ಯಾವೆಲ್ಲಾ ಸೇವೆಗಳು ಅಬಾಧಿತ ಅನ್ನೋದ್ರ ವಿವರ ಇಲ್ಲಿದೆ..
- ಬೆಂಗಳೂರು ಬಂದ್ಏನೇನು ಇರುತ್ತೆ?
- ಖಾಸಗಿ ಶಾಲೆಗಳ ಒಕ್ಕೂಟದಿಂದ ನೈತಿಕ ಬೆಂಬಲ ಮಾತ್ರ
- ಸರ್ಕಾರಿ ಶಾಲೆ, ಕಾಲೇಜುಗಳು ತೆರೆದಿರುತ್ತೆ
- ಆಸ್ಪತ್ರೆ, ಆಂಬುಲೆನ್ಸ್ ಸೇವೆ, ತುರ್ತು ಸೇವೆಗಳು ಅಬಾಧಿತ
- ಬೆಂಗಳೂರು ಮೆಟ್ರೋ ರೈಲು ಎಂದಿನಂತೆ ಕಾರ್ಯಾಚರಣೆ
- ಸರ್ಕಾರಿ, ಖಾಸಗಿ ಕಚೇರಿಗಳು ಬಂದ್ ಇಲ್ಲ..
إرسال تعليق