ಕಾವೇರಿ ಕಿಚ್ಚು! ಮಂಗಳವಾರ ಬೆಂಗಳೂರು ಬಂದ್: ಶುಕ್ರವಾರ ಕರ್ನಾಟಕ ಬಂದ್: ಏನಿರುತ್ತೆ? ಏನಿರಲ್ಲ?

 ರಾಜ್ಯದಲ್ಲಿ ಕಾವೇರಿ ವಿವಾದ ಮತ್ತೆ ಭುಗಿಲೆದ್ದಿದೆ. ರಾಜ್ಯದ ಡ್ಯಾಂಗಳು ಖಾಲಿಯಾಗುತ್ತಿದ್ದರೂ ತಮಿಳುನಾಡಿಗೆ ನೀರು ಬಿಡಲೇ ಬೇಕಾದ ಅನಿವಾರ್ಯತೆಗೆ ಕರ್ನಾಟಕ ರಾಜ್ಯ ಸರ್ಕಾರ ಸಿಲುಕಿದೆ. ಕಾವೇರಿ ನದಿ ಪಾತ್ರದ ಜಿಲ್ಲೆಗಳಲ್ಲಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್‌ ಆದೇಶಕ್ಕೆ ತಲೆ ಬಾಗಲೇಬೇಕಾದ ಅನಿವಾರ್ಯತೆ ಸಿಲುಕಿರುವ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಇದರ ವಿರುದ್ಧ ಬಿಜೆಪಿ, ಜೆಡಿಎಸ್ ಸೇರಿದಂತೆ ರಾಜ್ಯದ ಪ್ರಮುಖ ವಿರೋಧ ಪಕ್ಷಗಳು, ನೂರಾರು ಸಂಘಟನೆಗಳು ಸಿಡಿದೆದ್ದಿವೆ. ಬೆಂಗಳೂರು ಬಂದ್ ಹಾಗೂ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.

ರಾಜ್ಯ ಸರ್ಕಾರಕ್ಕೆ ತಟ್ಟಿದೆ ಕಾವೇರಿ ಹೋರಾಟದ ಬಿಸಿ!


ರಾಜ್ಯದಲ್ಲಿ ಕಾವೇರಿ ಹೋರಾಟ ತೀವ್ರಗೊಂಡಿದೆ. ಕಾವೇರಿ ನದಿ ಪಾತ್ರದ ಡ್ಯಾಂಗಳು ಖಾಲಿಯಾಗುತ್ತಿದ್ದರೂ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಯುತ್ತಿದೆ. ಇದನ್ನು ವಿರೋಧಿಸಿ ರಾಜ್ಯದ ಪ್ರಮುಖ ವಿರೋಧ ಪಕ್ಷಗಳು, ಕನ್ನಡ ಪರ ಸಂಘಟನೆಗಳು ಬೀದಿಗಿಳಿದಿವೆ. ಸೆಪ್ಟೆಂಬರ್ 26 ಮಂಗಳವಾರ ಬೆಂಗಳೂರು ಬಂದ್ ಆಗಲಿದೆ. ಜೊತೆಯಲ್ಲೇ ಸೆಪ್ಟೆಂಬರ್ 29 ಶುಕ್ರವಾರ ಕರ್ನಾಟಕ ಬಂದ್ ಆಗಲಿದೆ. ಮಂಗಳವಾರ ಇಡೀ ಬೆಂಗಳೂರು ಸ್ತಬ್ಧ ಆಗೋದಂತೂ ಖಚಿತ. ಕನ್ನಡ ಪರ ಸಂಘಟನೆಗಳು ಹಾಗೂ ಜನಪರ ಸಂಘಟನೆಗಳ ಜೊತೆಗೆ ಬಿಜೆಪಿ ಕೂಡಾ ಬಂದ್‌ಗೆ ಬೆಂಬಲ ಘೋಷಣೆ ಮಾಡಿದ್ದು, ಹಲವು ಉದ್ಯಮಗಳ ನೌಕರರ ಸಂಘ ಕೂಡಾ ಬಂದ್‌ಗೆ ಬೆಂಬಲ ನೀಡಿವೆ. ಹೀಗಾಗಿ, ತೀವ್ರ ಸ್ವರೂಪದಲ್ಲಿ ಬೆಂಗಳೂರು ಬಂದ್ ಆಗೋದು ಖಚಿತ. ಜೊತೆಗೆ ರಾಜಧಾನಿಯ ಹಲವೆಡೆ ಪ್ರತಿಭಟನೆಗಳೂ ಕೂಡಾ ನಡೆಯಲಿವೆ.

ಬೆಂಗಳೂರು ಬಂದ್ ವೇಳೆ ಏನು ಇರಲ್ಲ?

ಬೆಂಗಳೂರು ಬಂದ್ ವೇಳೆ ರಾಜ್ಯ ರಾಜಧಾನಿಯನ್ನು ಸಂಪೂರ್ಣ ಸ್ತಬ್ಧಗೊಳಿಸಲು ಸಂಘಟನೆಗಳು ಸಿದ್ದತೆ ನಡೆಸಿವೆ. ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಹಾಗೂ ನೂರಾರು ಸಂಘಟನೆಗಳು ಈ ಬಂದ್‌ಗೆ ಬೆಂಬಲ ಘೋಷಣೆ ಮಾಡಿರುವ ಕಾರಣ, ಬೆಂಗಳೂರು ಬಹುತೇಕ ಸ್ತಬ್ಧ ಆಗಲಿದೆ.

  • ಬೆಂಗಳೂರು ಬಂದ್ಏನೇನು ಇರಲ್ಲ?
  1. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್
  2. ಖಾಸಗಿ ಬಸ್, ಓಲಾ, ಉಬರ್, ಟ್ಯಾಕ್ಸಿ, ಆಟೋ
  3. ಗೂಡ್ಸ್ ವಾಹನ ಸೇವೆ ಕೂಡಾ ಇರಲ್ಲ
  4. ಯಶವಂತಪುರ, ದಾಸನಪುರ ಎಪಿಎಂಸಿ ಮಾರುಕಟ್ಟೆ
  5. ಹೋಟೆಲ್, ರೆಸ್ಟೊರೆಂಟ್, ಮಾಲ್, ಮಲ್ಟಿಪ್ಲೆಕ್ಸ್
  6. ಅಂಗಡಿ ಮಳಿಗೆಗಳು, ಕೈಗಾರಿಕೆಗಳು..

ಬೆಂಗಳೂರು ಬಂದ್ ವೇಳೆ ಏನು ಇರುತ್ತೆ?

ಕಾವೇರಿಗಾಗಿ ಬೆಂಗಳೂರು ಬಂದ್ ಘೋಷಣೆ ಆಗಿದ್ದರೂ ಕೂಡಾ ಕೆಲವು ಅಗತ್ಯ ಸೇವೆಗಳು ಇರಲಿವೆ. ಬಂದ್ ವೇಳೆ ಯಾವೆಲ್ಲಾ ಸೇವೆಗಳು ಅಬಾಧಿತ ಅನ್ನೋದ್ರ ವಿವರ ಇಲ್ಲಿದೆ..

  • ಬೆಂಗಳೂರು ಬಂದ್ಏನೇನು ಇರುತ್ತೆ?
  1. ಖಾಸಗಿ ಶಾಲೆಗಳ ಒಕ್ಕೂಟದಿಂದ ನೈತಿಕ ಬೆಂಬಲ ಮಾತ್ರ
  2. ಸರ್ಕಾರಿ ಶಾಲೆ, ಕಾಲೇಜುಗಳು ತೆರೆದಿರುತ್ತೆ
  3. ಆಸ್ಪತ್ರೆ, ಆಂಬುಲೆನ್ಸ್ ಸೇವೆ, ತುರ್ತು ಸೇವೆಗಳು ಅಬಾಧಿತ
  4. ಬೆಂಗಳೂರು ಮೆಟ್ರೋ ರೈಲು ಎಂದಿನಂತೆ ಕಾರ್ಯಾಚರಣೆ
  5. ಸರ್ಕಾರಿ, ಖಾಸಗಿ ಕಚೇರಿಗಳು ಬಂದ್ ಇಲ್ಲ..

ಶುಕ್ರವಾರ ಕರ್ನಾಟಕ ಬಂದ್!

ಮಂಗಳವಾರ ಬೆಂಗಳೂರು ಬಂದ್ ಮಾಡಿದ ಮೇಲೆ ಶುಕ್ರವಾರ ಕರ್ನಾಟಕ ಬಂದ್ ಆಗಲಿದೆ. ರಾಜ್ಯದ ಹಿತಕ್ಕಾಗಿ ಸೆಪ್ಟೆಂಬರ್ 29 ಶುಕ್ರವಾರ ಕರ್ನಾಟಕ ಬಂದ್ ಮಾಡಲು ತೀರ್ಮಾನಿಸಲಾಗಿದೆ ಅಂತಾ ಸಂಘಟನೆಗಳು ಹೇಳಿವೆ. ಹೀಗಾಗಿ, ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಸಲುವಾಗಿ ಮಂಗಳವಾರ ಬೆಂಗಳೂರು ಬಂದ್ ಹಾಗೂ ಶುಕ್ರವಾರ ಕರ್ನಾಟಕ ಬಂದ್ ಆಗೋದು ನಿಶ್ಚಿತ. ಒಂದೇ ವಾರದಲ್ಲಿ ಎರಡೆರಡು ದಿನ ಬಂದ್ ಮಾಡೋದಕ್ಕೆ ಈ ಹಿಂದೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಮಂಗಳವಾರವೇ ಕರ್ನಾಟಕ ಬಂದ್ ಕೂಡಾ ಮಾಡಬಹುದಲ್ಲವೇ ಎಂಬ ವಾದಗಳೂ ಇದ್ದವು. ಆದರೆ, ಮಂಗಳವಾರ ಬೆಂಗಳೂರು ಬಂದ್‌ಗೆ ಸೀಮಿತ ಆಗಲಿದೆ. ಶುಕ್ರವಾರ ಕರ್ನಾಟಕ ಬಂದ್ ಆಗಲಿದೆ.


Post a Comment

Previous Post Next Post