ಶಿವಮೊಗ್ಗ :09-08-2023 ರಸ್ತೆ ಮಾರ್ಗ ಬದಲಾವಣೆ . ವಾಹನಗಳು ಯಾವ ರಸ್ತೆ ಮೂಲಕ ಸಂಚರಿಸಬೇಕು ಸಂಪೂರ್ಣ ಮಾಹಿತಿ.

ದಿನಾಂಕಃ 09-08-2023  ರಂದು *ಶಿವಮೊಗ್ಗ ನಗರದ ಗುಡ್ಡೇಕಲ್ ಶ್ರೀ ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಅಡಿಕೃತ್ತಿಕೆ ಹರೋಹರ ಜಾತ್ರೆ* ಪ್ರಯುಕ್ತ, ಸುಗಮ ಸಂಚಾರದ ಹಿತ ದೃಷ್ಟಿಯಿಂದ ದಿನಾಂಕ: 09-08-2023 ರಂದು ಈ ಕೆಳಕಂಡಂತೆ *ತಾತ್ಕಾಲಿಕ ಮಾರ್ಗ ಬದಲಾವಣೆ ಮಾಡಲಾಗಿದೆ


1) *ಬೆಂಗಳೂರು, ಭದ್ರಾವತಿ, ಎನ್ ಆರ್ ಪುರ* ಕಡೆಯಿಂದ ಬರುವ ಎಲ್ಲಾ ಭಾರಿ ವಾಹನ ಮತ್ತು ಎಲ್ಲಾ ಬಸ್ ಗಳು ಮತ್ತು ಸಿಟಿ ಬಸ್ ಗಳು ಹಾಗೂ ಕಾರುಗಳು *ಎಂ.ಆರ್.ಎಸ್ ಸರ್ಕಲ್ ನಿಂದ ಬೈಪಾಸ್ ರಸ್ತೆ* ಮುಖಾಂತರ ಹೋಗುವುದು. 


2) *ಶಿವಮೊಗ್ಗ ನಗರದಿಂದ ಬೆಂಗಳೂರು, ಭದ್ರಾವತಿ, ಚಿತ್ರದುರ್ಗ, ಹೊಳೆಹೂನ್ನೂರು* ಕಡೆಗೆ ಹೋಗುವ ಎಲ್ಲಾ ಭಾರಿ ವಾಹನ ಮತ್ತು ಎಲ್ಲಾ ಬಸ್ ಗಳು ಮತ್ತು ಸಿಟಿ ಬಸ್ ಗಳು ಹಾಗೂ ಕಾರುಗಳು *ಬೈಪಾಸ್ ರಸ್ತೆ ಮುಖಾಂತರ* ಹೋಗುವುದು.


3) *ಚಿತ್ರದುರ್ಗ, ಹೊಳೆಹೊನ್ನೂರಿನಿಂದ* ಶಿವಮೊಗ್ಗ ನಗರಕ್ಕೆ ಒಳಬರುವ ಮತ್ತು ಹೊರಹೋಗುವ ಎಲ್ಲಾ ಭಾರಿ ವಾಹನ ಮತ್ತು ಬಸ್ ಗಳು ಭದ್ರಾವತಿ ಮಾರ್ಗವಾಗಿ ಬೈಪಾಸ್ ರಸ್ತೆಯ ಮೂಲಕ ಶಿವಮೊಗ್ಗ ನಗರಕ್ಕೆ *ಒಳಬರುವುದು ಮತ್ತು ಹೊರ ಹೋಗುವುದು.*


4) *ಹೊಳೆಹೊನ್ನೂರು ಸರ್ಕಲ್ ನಿಂದ ಗುರುಪುರದ ಯಲವಟ್ಟಿ ಕ್ರಾಸ್ ವರೆಗೆ ಸಾರ್ವಜನಿಕರ ವಾಹನಗಳು ಓಡಾಡದಂತೆ ನಿಷೇಧಿಸಿದೆ.*


5) *ಚಿತ್ರದುರ್ಗ ಹೊಳೆಹೂನ್ನೂರಿನಿಂದ ಬರುವ ಮತ್ತು ಹೋಗುವ ಎಲ್ಲಾ ಲಘು ವಾಹನಗಳು* ಪಿಳ್ಳಿಂಗಿರಿ ಕ್ರಾಸ್ ನಿಂದ ಯಲವಟ್ಟಿ ಮಾರ್ಗವಾಗಿ ಮತ್ತು ಹೊಳೆಬೆನವಳ್ಳಿ ತಾಂಡ ಕ್ರಾಸ್ ನಿಂದ ಯಲವಟ್ಟಿ ಮಾರ್ಗವಾಗಿ ಮಲವಗೊಪ್ಪದ ಮೂಲಕ ಬಿ.ಹೆಚ್ ರಸ್ತೆಗೆ ಸೇರಿಕೊಂಡು *ಬೈಪಾಸ್ ರಸ್ತೆಯ ಮಾರ್ಗವಾಗಿ ಶಿವಮೊಗ್ಗ ನಗರಕ್ಕೆ* ಹೋಗುವುದು.



6) *ಶಿವಮೊಗ್ಗ ನಗರದಿಂದ ಹೊಳೆಹೊನ್ನೂರು ಚಿತ್ರದುರ್ಗಕ್ಕೆ ಹೋಗುವ* ಲಘು ವಾಹನಗಳು (ದ್ವಿಚಕ್ರ ಮತ್ತು ಕಾರುಗಳು) ಬೈಪಾಸ್ ರಸ್ತೆಯ ಮಾರ್ಗವಾಗಿ ಮಲವಗೊಪ್ಪದ *ಯಲವಟ್ಟಿ ಕ್ರಾಸ್ ನಿಂದ ಯಲವಟ್ಟಿ ಮಾರ್ಗವಾಗಿ ಪಿಳ್ಳಿಂಗಿರಿ ಕ್ರಾಸ್ ಮೂಲಕ ಹೊಳೆಹೂನ್ನೂರು ಚಿತ್ರದುರ್ಗಕ್ಕೆ ಹೋಗುವುದು.*


7) *ಹರಿಹರ, ಹೊನ್ನಾಳಿ ಯಿಂದ ಬರುವ ಎಲ್ಲಾ ಭಾರಿ ವಾಹನ,* ಎಲ್ಲಾ ಬಸ್ ಗಳು ಸಂಗೊಳ್ಳಿ ರಾಯಣ್ಣ ಸರ್ಕಲ್ ಕೆ.ಇ.ಬಿ ಸರ್ಕಲ್ ಉಷಾ ನರ್ಸಿಂಗ್ ಹೋಂ ಸರ್ಕಲ್ 100 ಅಡಿ ರಸ್ತೆ, *ವಿನೋಬನಗರ ಮಾರ್ಗವಾಗಿ* ಹೋಗುವುದು.

Post a Comment

أحدث أقدم