ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಎಷ್ಟೇ ಕಡಿವಾಣ್ ಹಾಕಿದರೂ ಸಹ ಕೆಲ ಕಿಡಿಗೇಡಿಗಳು ಅದನ್ನು ಮತ್ತೆ ಮತ್ತೆ ಮಾಡುತ್ತಲೇ ಇದ್ದಾರೆ. ಸರ್ಕಾರದ ನಿಯಮಕ್ಕೆ ವಿರುದ್ದವಾಗಿ ಈ ಕೃತ್ಯ ಎಸಗುತ್ತಿದ್ದಾರೆ. ಪುರ್ಲೆಯ ಸುಬ್ಬಯ್ಯ ಹಾಸ್ಪೆಟಲ್ ಬಳಿ ಮರಳು ಕೋರೆಯೇ ಶುರುವಾಗಿತ್ತು! ಪ್ರತಿದಿನ 30 ರಿಂದ 40 ಲೋಡ್ ಮರಳು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಆದರೆ ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಅಧಿಕಾರಿಯಾದ ಶಶಿಕಲಾ ಅವರು ಈ ಕೃತ್ಯಕ್ಕೆ ಬ್ರೇಕ್ ಹಾಕಿದ್ದಾರೆ. ಈ ಮುಂಚೆಯೇ ಹಲವು ಬಾರಿ ಅಕ್ರಮ ಮರಳು ಚಟುವಟಿಕೆ ನಡೆಸುವ ಸ್ಥಳಕ್ಕೆ ಕುದ್ದಾಗಿ ತಾವೇ ಬೇಟಿ ನೀಡಿ ಪರಿಶೀಲನೆ ನಡೆಸಿ ಜಪ್ತಿ ಮಾಡಿದ್ದರು. ಈ ಬಾರಿಯು ಸಹ ಅವರು ಮಾಹಿತಿ ಬಂದ ನಂತರ ಒಂದು ಕ್ಷಣವೂ ಯೋಚಿಸದೇ ದಿಟ್ಟತನದಿಂದ ಸ್ಥಳಕ್ಕೆ ಧಾವಿಸಿ ಅಕ್ರಮ ಚಟುವಟಿಕೆಗೆ ಬ್ರೇಕ್ ಹಾಕುವ ಕೆಲಸ ಮಾಡಿದ್ದಾರೆ.
ಶಶಿಕಲಾ ರಂತಹ ಮಹಿಳಾ ಅಧಿಕಾರಿಯು ಧೈರ್ಯದಿಂದ ಮುಂದೆ ನುಗ್ಗಿ ತಮ್ಮ ಕರ್ತವ್ಯ ವೈಖರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಕೆಲಸದ ಮೇಲಿನ ಅವರ ನಿಷ್ಠೆಯನ್ನು ಎಲ್ಲರೂ ಅರಿಯುವಂತೆ ಮಾಡಿದ್ದಾರೆ. ಎಷ್ಟೇ ಅಡಿಕಾರಿಗಳು ತಮ್ಮ ಕೆಲಸದ ಅವಧಿ ಮುಗಿದ ನಂತರ ತಮ್ಮ ವೈಯಕ್ತಿಕ ಜೀವನಕ್ಕಾಗಿ ಸಮಯವನ್ನು ನೀಡುತ್ತಾರೆ ಆದರೆ ಇವರು ತಮ್ಮ ಕೆಲಸವನ್ನು ದೇವರ ಕೆಲಸ ಎಂದು ಭಾವಿಸಿ ರಾತ್ರಿ 10 ಗಂಟೆಗೆ ಮಾಹಿತಿ ದೊರೆತರು ಸಹ ಯಾವುದೇ ಅಂಜಿಕೆ ಇಲ್ಲದೆ ಸ್ಥಳಕ್ಕೆ ಭೇಟಿ ನೀಡಿ ಮರಳನ್ನು ಜಪ್ತಿ ಮಾಡಿದ್ದಾಋಎ. ಇದರಿಂದ ಸುಮಾರು 1 ಕೋಟೊ ಆಸ್ತಿಯನ್ನು ಸರ್ಕಾರಕ್ಕೆ ಉಳಿಸಿಕೊಟ್ಟಿದ್ದಾರೆ. ಇವರ ಕರ್ತವ್ಯ ಪಾಲನೆಯನ್ನು ನೋಡುತ್ತಿದ್ದರೆ ಅಧಿಕಾರಿ ಎಂದರೆ ಇವರ ರೀತಿ ಇರಬೇಕು ಎನಿವಂತೆ ಪ್ರಾಮಾಣಿಕವಾಗಿ ತಮ್ಮ ಕೆಲಸವನ್ನು ನಿಭಾಯಿಸುತ್ತಿದ್ದಾರೆ.
ರಾತ್ರಿ ವೇಳೆ ಒಂದು ಹೆಣ್ಣು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಜಪ್ತಿ ಮಾಡುವುದೆಂದರೆ ಅದು ಬಾಯಲ್ಲಿ ಹೇಳುವಷ್ಟು ಸುಲಭದ ಕೆಲಸವಲ್ಲ ಅದನ್ನು ಮಾಡಲು ಹೆಚ್ಚಿನ ಮಟ್ಟಿನ ಧೈರ್ಯ ಬೇಕಾಗುತ್ತದೆ. ಇಂತಹ ಅಧಿಕಾರಿಯೊಬ್ಬರು ನಮ್ಮ ಜಿಲ್ಲೆಯಲ್ಲಿ ಇರುವುದು ನಮ್ಮೆಲ್ಲರ ಹೆಮ್ಮೆ.
ಇದೇ ರೀತಿ ಇವರು ತಮ್ಮ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದರೆ ಅಕ್ರಮ ಮರಳು ಗಣಿಗಾರಿಕೆಯನ್ನು ಸಂಪೂರ್ಣವಾಗಿ ಮಟ್ಟ ಹಾಕುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಗಂಡಸರು ಸಹ ಮಾಡಲು ಯೋಚಿಸುವ ಕಾರ್ಯವನ್ನು ಇವರು ನಿರ್ವಹಿಸಿ ಸಾಹಸವನ್ನು ಮೆರೆದಿದ್ದಾರೆ. ಇವರ ಈ ನಿಷ್ಠಾವಂತ ಕೆಲಸ ಹೀಗೆ ಮುಂದುವರೆದರೆ ಸರ್ಕಾರಕ್ಕೆ ಸೇರಬೇಕಾದ ಎಷ್ಟೋ ಹಣವನ್ನು ಉಳಿಸಬಹುದು.
ಇಂತಹ ಅಧಿಕಾರಿಯೊಬ್ಬರು ಪ್ರತಿ ಜಿಲ್ಲೆಯಲ್ಲೂ ಸಹ ಇರಬೇಕು ಆಗ ಮಾತ್ರ ಇಂತ ಕೃತ್ಯಕ್ಕೆ ಕಡಿವಾಣ ಹಾಕಬಹುದು. ತೀರ್ಥಹಳಿಯಲ್ಲಿ ಇಂತಹ ಕೃತ್ಯ ಹೆಚ್ಚಾಗಿ ನಡೆಯುತ್ತಿದೆ, ಅಲ್ಲಿನ ಇನ್ ಚಾರ್ಜ್ ಅನ್ನು ಇವರಿಗೆ ನೀಡಿದರೆ ಅಲ್ಲಿನ ಅಕ್ರಮ ಚಟುವಟಿಕೆಗಳನ್ನು ಸಹ ತಡೆಯಬಹುದಾಗಿದೆ. ಒಟ್ಟಾರೆ ಇವರು ನಿಭಾಯಿಸಿರುವ ಕಾರ್ಯದ ಬಗ್ಗೆ ಎಷ್ಟು ಮಾತನಾಡಿದರು ಸಹ ಅದು ಕಡಿಮೆಯೇ ಅನಿಸುತ್ತದೆ.
إرسال تعليق