ಅಡಿಕೆ ಬೆಳೆಗೆ ಹಳದಿ ಚುಕ್ಕಿ ರೋಗ ವ್ಯಾಪಕವಾಗಿ ಹರಡುತ್ತಿದ್ದು ಹಾಗೂ ಅಡಿಕೆ ಧಾರಣೆ ಇಳಿಮುಖವಾಗುತ್ತಿರುವುದು. ಅಡಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದು ಕೇಂದ್ರ ಸರ್ಕಾರ ಈ ಕೂಡಲೇ ನೆರವಿಗೆ ಬರಬೇಕು ಎಂದು ಆರ್ ಎಂ ಮಂಜುನಾಥ್ ಗೌಡರು ಆಗ್ರಹಿಸಿದರು.
ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಳದಿ ಚುಕ್ಕಿ ರೋಗ ಚಂಡೆ ರೋಗ ಬೇರು ಹುಳು ರೋಗ ಹರಡುತ್ತಿದ್ದು ಅದೇ ರೀತಿಯೂ ಅಡಿಕೆ ಧಾರಣೆಯು ಸಹ ಇಳಿಮುಖವಾಗುತ್ತಿದೆ. ಒಂದು ವಾರದ ಹಿಂದೆ ಕ್ವಿಂಟಲ್ಗೆ 57 ಸಾವಿರ ಇದ್ದ ಅಡಿಕೆ ಧಾರಣೆ 54,000 ಸಾವಿರಕ್ಕೆ ಇಳಿದಿದೆ ಬೇಡಿಕೆಗೆ ತಕ್ಕಂತೆ ಅಡಿಕೆ ಇಲ್ಲದಿದ್ದರೂ ಬೆಲೆಯಲ್ಲಿ ಏರಿಕೆ ಆಗಿಲ್ಲ ಬೆಲೆಕುಸಿತದಿಂದ ಅಡಿಕೆ ಬೆಳೆಗಾರರು ಆತಂಕ ಒಳಗಾಗಬಾರದು. ಕ್ಯಾಂಪ್ಸ್ ಮತ್ತು ಮ್ಯಾಮ್ ಕೋಸ್ ನೆರವಿಗೆ ಬರಬೇಕು. ವಿಜ್ಞಾನಿಗಳು ಹಳದಿ ಚುಕ್ಕಿ ರೋಗಕ್ಕೆ ಮೈಲುತ್ತಾ ಸುಣ್ಣ ಬಳಸಿ ಎಂದು ಹೇಳುತ್ತಿದ್ದಾರೆ ಇದಕ್ಕೆ ಪರ್ಯಾಯ ಶಾಶ್ವತ ಔಷಧಿ ಇದುವರೆಗೆ ಕಂಡು ಹಿಡಿಯಲಿಲ್ಲ. ಕೇಂದ್ರ ಸರ್ಕಾರವು ಕಳುಹಿಸಿದ ವಿಜ್ಞಾನಿಗಳ ತಂಡವು ಈವರೆಗೆ ಯಾವುದೇ ಮಾಹಿತಿ ನೀಡಿಲ್ಲ.ಈ ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು. ಹಾಗೂ ಸಂಶೋಧನಾ ಕೇಂದ್ರ ಅಭಿವೃದ್ಧಿಪಡಿಸಬೇಕು. ಕೇಂದ್ರ ಸರ್ಕಾರ ಮೈಲಿ ತುತ್ತ ಹಾಗೂ ದೋಟಿ ಮಿಷನ್ ಅರಿಗಳಿಗೆ ಸಬ್ಸಿಡಿ ನೀಡಬೇಕೆಂದು ಆಗ್ರಹಿಸಿದರು. ನಾಳೆ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಿ ಎಲೆ ಚುಕ್ಕಿ ರೋಗ ಹಾಗೂ ಕಡಿಮೆ ಆಗುತ್ತಿರುವ ಅಡಿಕೆ ಬೆಲೆ ಕುರಿತು ಸಿಎಂ ಜೊತೆ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದರು.
إرسال تعليق